ತೆಲಂಗಾಣ ಸಿಎಂ ಆದ ಬಳಿಕ ಮೊದಲ ಬಾರಿಗೆ ರೇವಂತ್​ ರೆಡ್ಡಿ ತಿರುಮಲ ಭೇಟಿ, ಆಂಧ್ರದ ಬಗ್ಗೆ ಏನಂದ್ರು?

|

Updated on: May 22, 2024 | 12:27 PM

ರೇವಂತ್​ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ತಿರುಮಲಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ರಚನೆಯಾಗಲಿರುವ ನೂತನ ಸರ್ಕಾರದ ಸಹಕಾರದೊಂದಿಗೆ ಎರಡೂ ತೆಲುಗು ರಾಜ್ಯಗಳ ಅಭಿವೃದ್ಧಿಗೆ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ತೆಲಂಗಾಣ ಸಿಎಂ ಆದ ಬಳಿಕ ಮೊದಲ ಬಾರಿಗೆ ರೇವಂತ್​ ರೆಡ್ಡಿ ತಿರುಮಲ ಭೇಟಿ, ಆಂಧ್ರದ ಬಗ್ಗೆ ಏನಂದ್ರು?
ರೇವಂತ್ ರೆಡ್ಡಿ
Follow us on

ತೆಲಂಗಾಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರೇವಂತ್​ ರೆಡ್ಡಿ(Revanth Readdy) ಮೊದಲ ಬಾರಿಗೆ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರದ ಕುರಿತು ಮಾತನಾಡಿ, ಆಂಧ್ರಪ್ರದೇಶದಲ್ಲಿ ರಚನೆಯಾಗಲಿರುವ ನೂತನ ಸರ್ಕಾರದ ಸಹಕಾರದೊಂದಿಗೆ ಎರಡೂ ತೆಲುಗು ರಾಜ್ಯಗಳ ಅಭಿವೃದ್ಧಿಗೆ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಇಂದು ವೆಂಕಟೇಶ್ವರನ ದರ್ಶನ ಪಡೆದ ರೇವಂತ್​ ರೆಡ್ಡಿ, ಎರಡು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ತೆಲಂಗಾಣದಿಂದ ಬರುವ ಭಕ್ತರಿಗಾಗಿ ತಿರುಮಲದಲ್ಲಿ ಸರ್ಕಾರದ ವತಿಯಿಂದ ಕಲ್ಯಾಣ ಮಂಟಪ ನಿರ್ಮಿಸಲಾಗುವುದು ಎಂದು ಸಿಎಂ ರೇವಂತ್ ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಮೊದಲ ತಿರುಮಲ ಭೇಟಿಯಾಗಿದೆ. ಸಿಎಂ ರೇವಂತ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಮೊಮ್ಮಗನ ಮುಡಿ ತೆಗೆಸಿದರು.

ಮತ್ತಷ್ಟು ಓದಿ: ಲೋಕಸಭೆ ಚುನಾವಣೆ ಬಳಿಕ ರೇವಂತ್ ರೆಡ್ಡಿ ಬಿಜೆಪಿ ಸೇರಲಿದ್ದಾರೆ: ಮಾಜಿ ಸಚಿವ ಕೆಟಿ ರಾಮರಾವ್

ರೇವಂತ್ ರೆಡ್ಡಿ ಅವರನ್ನು ಶ್ರೀವಾರಿ ದೇವಸ್ಥಾನದ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ವೈದಿಕರು ಆಶೀರ್ವಚನ ನೀಡಿದ್ದರು.

ವಿಡಿಯೋ

ತಿರುಮಲದಲ್ಲಿ ತೆಲಂಗಾಣ ಭಕ್ತರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ರಾಜ್ಯ ಸರ್ಕಾರದ ವತಿಯಿಂದ ಮದುವೆ ಮಂಟಪ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ನೂತನ ಸರ್ಕಾರದ ಸಹಕಾರ ತೆಗೆದುಕೊಳ್ಳಲಾಗುವುದು. ತೆಲಂಗಾಣ ರಾಜ್ಯದಲ್ಲಿ ಹವಾಮಾನವು ಅನುಕೂಲಕರವಾಗಿರಬೇಕು ಮತ್ತು ಹಸಿರಿನಿಂದ ಕಂಗೊಳಿಸುತ್ತಿರಬೇಕು ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ