AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Revanth Reddy Love Story: ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ರೇವಂತ್​ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ

ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ(Revanth Reddy) ಅವರನ್ನು ಘೋಷಿಸಲಾಗಿದ್ದು, ಡಿಸೆಂಬರ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ರೇವಂತ್ ರೆಡ್ಡಿ ಅವರ ಪ್ರೇಮ ಕಥೆ ವೈರಲ್​ ಆಗಿದೆ.  ಕೇಂದ್ರ ಸಚಿವ ಹಾಗೂ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ  ದಿವಂಗತ ನಾಯಕ ಜೈಪಾಲ್ ರೆಡ್ಡಿ ಅವರ ಕಿರಿಯ ಪುತ್ರಿ ಗೀತಾ ರೆಡ್ಡಿ ಅವರನ್ನು ರೇವಂತ ರೆಡ್ಡಿ ವರಿಸಿದ್ದು ಗೊತ್ತೇ ಇದೆ. ಆದರೆ ರೇವಂತ್ ರೆಡ್ಡಿ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ.

Revanth Reddy Love Story: ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ರೇವಂತ್​ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ
ರೇವಂತ್​ ರೆಡ್ಡಿImage Credit source: iDream Post
Follow us
ನಯನಾ ರಾಜೀವ್
|

Updated on:Dec 06, 2023 | 12:23 PM

ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ(Revanth Reddy) ಅವರನ್ನು ಘೋಷಿಸಲಾಗಿದ್ದು, ಡಿಸೆಂಬರ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ರೇವಂತ್ ರೆಡ್ಡಿ ಅವರ ಪ್ರೇಮ ಕಥೆ ವೈರಲ್​ ಆಗಿದೆ.  ಕೇಂದ್ರ ಸಚಿವ ಹಾಗೂ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ  ದಿವಂಗತ ನಾಯಕ ಜೈಪಾಲ್ ರೆಡ್ಡಿ ಅವರ ಕಿರಿಯ ಪುತ್ರಿ ಗೀತಾ ರೆಡ್ಡಿ ಅವರನ್ನು ರೇವಂತ ರೆಡ್ಡಿ ವರಿಸಿದ್ದು ಗೊತ್ತೇ ಇದೆ. ಆದರೆ ರೇವಂತ್ ರೆಡ್ಡಿ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ.

ರೇವಂತ್ ರೆಡ್ಡಿ ಮತ್ತು ಗೀತಾ ರೆಡ್ಡಿ ಪ್ರೇಮಕಥೆ ಶುರುವಾಗಿದ್ದು ಇಂಟರ್ ಮೀಡಿಯೇಟ್ ನಲ್ಲಿ. ಇವರಿಬ್ಬರು ನಾಗಾರ್ಜುನಸಾಗರದಲ್ಲಿ ಮೊದಲ ಬಾರಿ ಭೇಟಿಯಾದರು. ಅಲ್ಲಿಂದ ಶುರುವಾದ ಪರಿಚಯ ಒಳ್ಳೆ ಗೆಳೆತನಕ್ಕೆ ತಿರುಗಿ ಪ್ರೀತಿಗೆ ತಿರುಗಿತ್ತು. ಮೊದಲು ಪ್ರಸ್ತಾಪಿಸಿದವರು ರೇವಂತ್ ರೆಡ್ಡಿ. ಗೀತಾ ರೆಡ್ಡಿ ಕೂಡ ರೇವಂತ್ ಅವರ ನೇರ ವ್ಯಕ್ತಿತ್ವವನ್ನು ಮೆಚ್ಚಿದ್ದರಿಂದ ತಕ್ಷಣ ಒಪ್ಪಿಕೊಂಡರು. ಹಾಗೆ ಇಬ್ಬರು ತಮ್ಮ ಪ್ರೀತಿಯ ಪಯಣ ಆರಂಭಿಸಿದರು. ಡಿಗ್ರಿ ಮುಗಿದ ನಂತರ ಮನೆಯಲ್ಲಿ ಹೇಳಿ ಒಪ್ಪಿಸಿ 1992ರಲ್ಲಿ ಮದುವೆಯಾದರು.

ಮೊದಲು ಪೇಂಟರ್​ ಆಗಿ ವೃತ್ತ ಜೀವನ ಆರಂಭಿಸಿದ್ದ ರೇವಂತ್ ರೆಡ್ಡಿ, ನಂತರ ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಹಂತ ಹಂತವಾಗಿ ಬೆಳೆದರು. ಹಾಗೆಯೇ ರಾಜಕೀಯ ಪ್ರವೇಶಿಸಿದರು.

ತಮ್ಮ ನೇರ ವ್ಯಕ್ತಿತ್ವದಿಂದ ತೆಲಂಗಾಣದಲ್ಲಿ ಬಂಡಾಯ ನಾಯಕರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ರೇವಂತ್ ರೆಡ್ಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮತ್ತಷ್ಟು ಓದಿ: Revanth Reddy Profile: ರೇವಂತ್ ರೆಡ್ಡಿಗೆ ಒಲಿದ ತೆಲಂಗಾಣ ಮುಖ್ಯಮಂತ್ರಿ ಸ್ಥಾನ; ಇಲ್ಲಿದೆ ರಾಜಕೀಯ ಪಯಣದ ಇಣುಕು ನೋಟ

ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದ ರೇವಂತ್ ರೆಡ್ಡಿ ನಂತರ ಶಾಸಕರಾಗಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಸ್ವತಂತ್ರ ಶಾಸಕರಾಗಿ ಗೆದ್ದು ಟಿಡಿಪಿ ಸೇರಿದರು. ಆ ನಂತರ ರಾಜ್ಯ ಪ್ರತ್ಯೇಕಗೊಂಡು ರೇವಂತ್ ರೆಡ್ಡಿ ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದರು.

ಅಂದಿನಿಂದ ಇಂದು ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಬಹುತೇಕ ಅವರೇ ಸಿಎಂ ಎನ್ನುತ್ತಿದ್ದಾರೆ. ಇಂದು ಸಿಎಲ್ ಪಿ ಸಭೆ ಮುಗಿದ ಬಳಿಕ ತೆಲಂಗಾಣ ರಾಜ್ಯದ ಎರಡನೇ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಅಧಿಕೃತವಾಗಿ ತಿಳಿಯಲಿದೆ. ರೇವಂತ್ ರಾಜಕೀಯ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:10 pm, Wed, 6 December 23