AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಸೋಲಿಸಲು 500 ಕೋಟಿ ರೂ. ಸುಪಾರಿ ಪಡೆದ್ರಾ ಜಮೀರ್ ಅಹ್ಮದ್? ಕೈ ಅಧ್ಯಕ್ಷರೇ ಸಿಡಿಸಿದ ಬಾಂಬ್

ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್‌ ರೆಡ್ಡಿ ಮಾಡಿರುವ ಆರೋಪ ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಂಪನ ಎಬ್ಬಿಸಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಅಧ್ಯಕ್ಷ ರೇವಂತ್​ ರೆಡ್ಡಿ ಮಾಡಿದ ಒಂದೇ ಒಂದು ಗಂಭೀರ ಆರೋಪ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್​ ಸೋಲಿಸಲು 500 ಕೋಟಿ ರೂ. ಸುಪಾರಿ ಪಡೆದ್ರಾ ಜಮೀರ್ ಅಹ್ಮದ್? ಕೈ ಅಧ್ಯಕ್ಷರೇ ಸಿಡಿಸಿದ ಬಾಂಬ್
TV9 Web
| Edited By: |

Updated on: Jan 20, 2023 | 9:13 PM

Share

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ 500 ಕೋಟಿ ರೂ. ಸುಪಾರಿಯ ಅತಿ ದೊಡ್ಡ ಆರೋಪ ಸ್ಫೋಟವಾಗಿದೆ. ಕರ್ನಾಟಕ ಕಾಂಗ್ರೆಸ್ ಶಾಸಕ  ಜಮೀರ್​ ಅಹ್ಮದ್ ಖಾನ್​ (Zameer Ahmed Khan)ಹಾಗೂ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ (K. Chandrashekar Rao)  ಭೇಟಿ ಮಾಡಿದ್ದರ ಹಿಂದೆ 500 ಕೋಟಿ ಕಥೆ ಇದೆ ಎನ್ನುವ ಗುಮಾನಿಯ ಸುನಾಮಿಯನ್ನೇ ತೆಲಂಗಾಣ ಕಾಂಗ್ರೆಸ್ (Telangana Congress)​ ಅಧ್ಯಕ್ಷರೇ ಎಬ್ಬಿಸಿದ್ದು, ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ (Karnataka Assembly Election 2023) ಹೊಸ್ತಿಲಲ್ಲಿ ಕಾಂಗ್ರೆಸ್​ ಅಧ್ಯಕ್ಷ ರೇವಂತ್​ ರೆಡ್ಡಿ ಮಾಡಿದ ಒಂದೇ ಒಂದು ಗಂಭೀರ ಆರೋಪ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಜಮೀರ್ ಅಹ್ಮದ್‌ಗೆ ಎಐಸಿಸಿ ಬುಲಾವ್

500 ಕೋಟಿ ರೂ. ಸುಪಾರಿ ಪಡೆದ್ರಾ ಜಮೀರ್ ಅಹ್ಮದ್ ಖಾನ್?

ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್‌ ರೆಡ್ಡಿ ಮಾಡಿರುವ ಆರೋಪ ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಎಬ್ಬಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಗಿಸಲು ತಿಂಗಳ ಹಿಂದೆ ತೆಲಂಗಾಣ ಸಿಎಂ ಕೆಸಿಆರ್‌, ಜಮೀರ್‌ಗೆ 500 ಕೋಟಿ ಆಫರ್‌ ಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ.. ಕಡಿಮೆ ಅಂತರದಲ್ಲಿ ಗೆಲ್ಲಬಹುದಾದ 25ರಿಂದ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿಸಲು ಸುಪಾರಿ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ಕೆಸಿಆರ್​ ವಿರುದ್ಧ ಗುಡುಗಿದ್ದ ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ರೇವಂತ್​ ರೆಡ್ಡಿ. ಕರ್ನಾಟಕದಲ್ಲಿ 25 ರಿಂದ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸೋಲುವಂತೆ ಮಾಡಲು, ಪ್ರಭಾವಿ ನಾಯಕನನ್ನ ಕರೆಸಿಕೊಂಡಿದ್ರು. ತಮ್ಮ ಫಾರ್ಮ್​ಹೌಸ್​​ನಲ್ಲಿ ಚೌಕಾಸಿ ಮಾಡಿ 500 ಕೋಟಿಗೆ ಆಫರ್ ಕೊಟ್ಟು, ಮಾತುಕತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ರೇವಂತ್​ ರೆಡ್ಡಿ, ಕೆಸಿಆರ್​ ಫಾರ್ಮ್​ ಹೌಸ್​​ನಲ್ಲಿ ಮೀಟಿಂಗ್​ ಕೇವಲ ಒಂದು ಬಾರಿ ಆಗಿಲ್ಲ. ಬರೋಬ್ಬರಿ ಮೂರು ಸಾರಿ ಆಗಿದೆ. ಕರ್ನಾಟಕದ ಆ ನಾಯಕನ ವ್ಯಾಪಾರದ ಮೇಲೂ ಒತ್ತಡ ಹಾಕುವ ಯತ್ನ ನಡೆದಿದೆ ಎಂದು ರೇವಂತ್​ ರೆಡ್ಡಿ ಇನ್ನೊಂದು ಬಾಂಬ್​ ಹಾಕಿದ್ದಾರೆ.

ತೆಲಂಗಾಣ ಸಿಎಂ ಭೇಟಿಯಾಗಿದ್ದ ಜಮೀರ್

ಕೆಲ ದಿನಗಳ ಹಿಂದಷ್ಟೇ ಶಾಸಕ ಜಮೀರ್ ಅಹ್ಮದ್‌ ತೆಲಂಗಾಣ ಸಿಎಂ ಕೆಸಿಆರ್‌ರನ್ನ ಭೇಟಿ ಮಾಡಿದ್ದರು. ಇದೇ ವೇಳೆ ಜಮೀರ್‌ಗೆ ಮುಂದೆ ತೆಲಂಗಾಣ ಸಿಎಂ ಈ ಪ್ರಶ್ನೆ ಮುಂದಿಟ್ಟಿದ್ದರಂತೆ. ಇನ್ನು, ಇದಾದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಚಂದ್ರಶೇಖರ್‌ ರಾವ್‌ ಅವರ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ರು.. ಆಗ ಜೆಡಿಎಸ್‌ಗೆ ಸಂಪೂರ್ಣ ಬೆಂಬಲವಿದೆ ಎಂದು ಬಿಆರ್‌ಎಸ್‌ ಪಾರ್ಟಿ ಹೇಳಿತ್ತು. ಇದು ಜೆಡಿಎಸ್‌ ಮೇಲೆ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿದೆ.

ಆದ್ರೆ, ಕೆಸಿಆರ್‌ ಹೋರಾಟ ಬಿಜೆಪಿ ವಿರುದ್ಧ, ಕಾಂಗ್ರೆಸ್‌ ವಿರುದ್ಧ ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ತೆಲಂಗಾಣ ಭೇಟಿ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಜಮೀರ್‌ ಅಹ್ಮದ್​ ಖಾನ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಈ ಬಗ್ಗೆ ಚರ್ಚೆ ಮಾಡಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ