AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.13ಕ್ಕೆ ಭಾರತದ ಸಂಸತ್​​​ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ

ಸಂಸತ್​​ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ ಹಾಕಿದ್ದಾನೆ. 2001 ಡಿಸೆಂಬರ್​​​ 13ರಂದು ಸಂಸತ್​​​ ಮೇಲೆ ದಾಳಿ ಮಾಡಿದ್ದರು. ಅದೇ ದಿನ ನಾವು ಕೂಡ ಸಂಸತ್​​​ ಮೇಲೆ ದಾಳಿ ಮಾಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಡಿಸೆಂಬರ್​​​ 13ರಂದು ಸಂಸತ್ತಿನ ಅಡಿಪಾಯವನ್ನೇ ಅಲುಗಾಡಿಸುತ್ತೇನೆ ಎಂದು ಈ ವಿಡಿಯೋದಲ್ಲಿ 2001ರಲ್ಲಿ ಸಂಸತ್​​ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಅಫ್ಜಲ್​​​​ ಫೋಟೋ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಡಿ.13ಕ್ಕೆ ಭಾರತದ ಸಂಸತ್​​​ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ
ಖಲಿಸ್ತಾನಿ ಭಯೋತ್ಪಾದಕ ಪನ್ನುನ್
ಅಕ್ಷಯ್​ ಪಲ್ಲಮಜಲು​​
|

Updated on: Dec 06, 2023 | 10:56 AM

Share

ಭಾರತದ ಸಂಸತ್​​​ ಮೇಲೆ ದಾಳಿ ಮಾಡುವುದಾಗಿ ಹೇಳಿಕೊಂಡ ಖಲಿಸ್ತಾನಿ ಭಯೋತ್ಪಾದಕ ಗುತ್ಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun). ಇದೀಗ ಈ ಬಗ್ಗೆ ಚರ್ಚೆಯಾಗುತ್ತಿದೆ. ಪನ್ನುನ್ ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾನೆ. 2001 ಡಿಸೆಂಬರ್​​​ 13ರಂದು ಸಂಸತ್​​​ ಮೇಲೆ ದಾಳಿ ಮಾಡಿದ್ದರು. ಅದೇ ದಿನ ನಾವು ಕೂಡ ಸಂಸತ್​​​ ಮೇಲೆ ದಾಳಿ ಮಾಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಡಿಸೆಂಬರ್​​​ 13ರಂದು ಸಂಸತ್ತಿನ ಅಡಿಪಾಯವನ್ನೇ ಅಲುಗಾಡಿಸುತ್ತೇನೆ ಎಂದು ಈ ವಿಡಿಯೋದಲ್ಲಿ 2001ರಲ್ಲಿ ಸಂಸತ್​​ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಅಫ್ಜಲ್​​​​ ಫೋಟೋ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಈ ಪೋಸ್ಟರ್​​ನಲ್ಲಿ “ದೆಹಲಿ ಬಂಗೇಯಾ ಖಲಿಸ್ತಾನ್” ಎಂದೂ ಬರೆಯಲಾಗಿದೆ. ಭಾರತೀಯ ಏಜೆನ್ಸಿಗಳು ತನ್ನನ್ನು ಕೊಲ್ಲುವ ಸಂಚು ರೂಪಿಸಿತ್ತು. ಆದರೆ ಇದು ವಿಫಲವಾಗಿದೆ ಎಂದು ಪನ್ನುನ್ ಹೇಳಿದ್ದಾನೆ. ಬೆದರಿಕೆ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಭಾರತೀಯ ಭದ್ರತಾ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿವೆ.

ಭಾರತ ವಿರೋಧಿ ವರದಿಗಳನ್ನು ಪ್ರಚಾರ ಮಾಡುವ ಕೆಲಸವನ್ನು ಮುಂದುವರಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಪನ್ನುನ್‌ಗೆ ನಿರ್ದೇಶನಗಳನ್ನು ನೀಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಳೆದ ತಿಂಗಳು, US ದೈನಿಕವು ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿತ್ತು, ಆದರೆ ಯುಎಸ್ ಅಧಿಕಾರಿಗಳು ಇದನ್ನು ವಿಫಲಗೊಳಿಸಿದ್ದಾರೆ ಮತ್ತು ಸಂಚಿನ ಬಗ್ಗೆ ಭಾರತದ ಜತೆಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‌ಗಳು ನೀಡಿದ ವರದಿ ಪ್ರಕಾರ ನಿಖಿಲ್ ಗುಪ್ತಾ ಎಂಬ 52 ವರ್ಷದ ವ್ಯಕ್ತಿ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದರು. ಆದರೆ ಇದನ್ನು ಯುಎಸ್​​​​ಗೆ ಅಧಿಕಾರಿಗಳು ವಿಫಲಗೊಳಿಸಿದರು. ನಿಖಿಲ್ ಗುಪ್ತಾ ಅವರನ್ನು ಜೂನ್‌ನಲ್ಲಿ ಜೆಕ್ ರಿಪಬ್ಲಿಕ್‌ನಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲಾಯಿತು.

ಇದನ್ನೂ ಓದಿ: ಬೆದರಿಕೆ ವಿಡಿಯೊ: ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲು

ಈ ಇನ್ನು ಕೊಲೆ ಪ್ರಯತ್ನಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಹೇಳಿದೆ. ಈ ಬಗ್ಗೆ ಭಾರತ ಸರ್ಕಾರ ತನಿಖೆ ಮಾಡಿ ವರದಿ ನೀಡಲಾಗುವುದು ಎಂದು ಹೇಳಿದೆ. ಇದರ ಜತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ