White Paper: ತೆಲಂಗಾಣ ಸರ್ಕಾರದ ಮೇಲಿದೆ 5 ಲಕ್ಷ 60 ಸಾವಿ ಕೋಟಿ ಸಾಲದ ಹೊರೆ! ಹಣಕಾಸು ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆಗೆ ಸಿದ್ಧತೆ

|

Updated on: Dec 10, 2023 | 11:18 AM

Deputy CM, Finance Minister Mallu Bhatti Vikramarka: ತೆಲಂಗಾಣ 5 ಲಕ್ಷ 59 ​​ಸಾವಿರ ಕೋಟಿ ಸಾಲ ಹೊಂದಿದೆ ಎಂದು ಉಪ ಮುಖ್ಯಮಂತ್ರಿ, ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ. 2014ರ ಜೂನ್ 2ರಿಂದ ರಾಜ್ಯದ ಆದಾಯ, ವೆಚ್ಚ ಮತ್ತು ಸವಲತ್ತುಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

White Paper: ತೆಲಂಗಾಣ ಸರ್ಕಾರದ ಮೇಲಿದೆ 5 ಲಕ್ಷ 60 ಸಾವಿ ಕೋಟಿ ಸಾಲದ ಹೊರೆ! ಹಣಕಾಸು ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆಗೆ ಸಿದ್ಧತೆ
ತೆಲಂಗಾಣ ಸರ್ಕಾರದ ಮೇಲಿದೆ 5 ಲಕ್ಷ 60 ಸಾವಿ ಕೋಟಿ ಸಾಲದ ಹೊರೆ!
Follow us on

ತೆಲಂಗಾಣದ (Telangana) ಹಣಕಾಸು ಸಚಿವರೂ ಆದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ (Mallu Bhatti Vikramarka) ಅವರು ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ (White Paper) ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಗತಿ, ಆದಾಯ, ಖರ್ಚು ಮತ್ತಿತರ ವಿವರಗಳನ್ನು (Debt) ಅಧಿಕಾರಿಗಳ ಬಳಿ ಅವರು ವಿಚಾರಿಸಿದರು. ಇದಕ್ಕೂ ಮುನ್ನ 2014ರ ಜೂನ್ 2ರಿಂದ ರಾಜ್ಯದ ಆದಾಯ, ವೆಚ್ಚ ಮತ್ತು ಸವಲತ್ತುಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯದ ಮೇಲೆ 5.5 ಲಕ್ಷ ಕೋಟಿ ರೂ. ಸಾಲ ಇದೆ, ಆದರೂ ಆರ್ಥಿಕ ಇಲಾಖೆ ಜವಾಬ್ದಾರಿಯಿಂದ ರಾಜ್ಯವನ್ನು ಮುನ್ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದರು. ಕಾಂಗ್ರೆಸ್ ಪಕ್ಷ ಘೋಷಿಸಿರುವ ಮತ್ತು ‘ಅಭಯ ಹಸ್ತಂ’ ಪ್ರಣಾಳಿಕೆಯಲ್ಲಿ ಸೇರಿಸಿರುವ ಆರು ಭರವಸೆಗಳನ್ನು ಈಡೇರಿಸಲು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುವಂತೆ ಅವರು ತಿಳಿಸಿದರು.

ಇದನ್ನೂಓದಿ: ಸಾಲವೆಂಬ ಶೂಲಕ್ಕೆ ಏರಿಬಿಟ್ಟೀರಿ ಜೋಕೆ..! ಇಲ್ಲಿದೆ ಸಾಲಮುಕ್ತರನ್ನಾಗಿಸುವ ಟಿಪ್ಸ್

ಸರ್ಕಾರದ ಯಶಸ್ಸು ಆರ್ಥಿಕ ಇಲಾಖೆಯ ಮೇಲೆ ಅವಲಂಬಿತವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವವರು ಕೇವಲ ಸೇವಕರಾಗದೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಸರ್ಕಾರದ ಗುರಿಗಳು ಈಡೇರುತ್ತವೆ ಎಂದು ವಿಕ್ರಮಾರ್ಕ ಸಲಹೆ ನೀಡಿದರು.

ಇದನ್ನೂಓದಿ: ರಾತ್ರೋರಾತ್ರಿ ತೆಲಂಗಾಣ ಮಾಜಿ ಮಂತ್ರಿಗಳಿಬ್ಬರ ಕಚೇರಿಯಿಂದ ಕಡತಗಳು ಮಾಯ!

ಅನೇಕ ಸವಾಲುಗಳನ್ನು ಮೆಟ್ಟಿನಿಂತು ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಸಚಿವ ವಿಕ್ರಮಾರ್ಕ ಕರೆ ನೀಡಿದರು. ಪಾದಯಾತ್ರೆಯಲ್ಲಿ ಎಲ್ಲಾ ವರ್ಗದ ಜನರು ವ್ಯಕ್ತಪಡಿಸಿದ ನೋವುಗಳನ್ನು ಆಲಿಸಿದ್ದೇನೆ. ಕಾಂಗ್ರೆಸ್​ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅವರ ಸಮಸ್ಯೆಗಳನ್ನು ಪರಿಹರಿಸಲು ಆರು ಗ್ಯಾರಂಟಿ ಭರವಸೆಗಳನ್ನು ನೀಡಲಾಗಿದೆ. ಈ ಭರವಸೆಗಳನ್ನು ಈಡೇರಿಸಲು, ಆದಾಯದ ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರ ಸಜ್ಜಾಗುವಂತೆ ಅಧಿಕಾರಿಗಳಿಗೆ ಭಟ್ಟಿ ವಿಕ್ರಮಾರ್ಕ ಆದೇಶಿಸಿದರು.

ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ