ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ. ದಸರಾ ಆಚರಣೆ ವೇಳೆ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕೌಟುಂಬಿಕ ಕಲಹವೇ ಶ್ರೀನಿವಾಸ್ ರೆಡ್ಡಿಯ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ರೆಡ್ಡಿ ಆ ರಾತ್ರಿ ತನ್ನ ಇಬ್ಬರು ಮಕ್ಕಳಾದ ವಿಘ್ನೇಶ್ (7), ಮತ್ತು ಅನುರಿದ್ (5) ಅವರನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು.
ಅವರು ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ಆರಂಭಿಸಿದರು. ಕೃಷಿ ಬಾವಿಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಪೊಲೀಸರು ಮೊದಲು ಮಕ್ಕಳ ಶವಗಳನ್ನು ಹೊರತೆಗೆದರು. ನಂತರ ತಪಾಸಣೆ ನಡೆಸಿದಾಗ ಬಾವಿಯ ಬಳಿ ಶ್ರೀನಿವಾಸ್ ರೆಡ್ಡಿ ಅವರ ವಾಚ್ ಹಾಗೂ ದ್ವಿಚಕ್ರವಾಹನ ಪತ್ತೆಯಾಗಿದೆ. ರೆಡ್ಡಿಯ ಮೃತದೇಹವನ್ನು ಪತ್ತೆಹಚ್ಚಲು ಡೈವರ್‌ಗಳು ರಾತ್ರಿಯಿಡೀ ಕಷ್ಟಪಟ್ಟರು, ಅಂತಿಮವಾಗಿ ಅದನ್ನು ಬಾವಿಯನ್ನು ಬರಿದುಮಾಡಿದರು.
ಮತ್ತಷ್ಟು ಓದಿ: ಬೆಂಗಳೂರು: ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಶ್ರೀನಿವಾಸ್ ರೆಡ್ಡಿ ತಾನು ಸಾಯುವ ಮೊದಲು ಮಕ್ಕಳ ಜೀವವನ್ನು ತೆಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಪ್ರಕಾರ, ಶ್ರೀನಿವಾಸ್ ರೆಡ್ಡಿ ಅವರ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ಅನುಮಾನದಿಂದ ಅವರು ಕೋಪಗೊಂಡಿದ್ದರು ಎಂದು ಹೇಳಿದ್ದಾರೆ.
ತಡವಾಯಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಮರೆಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ