ಅತಿಯಾದ ಮೊಬೈಲ್ ಬಳಕೆ; ಅಮ್ಮ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ
ವೈದ್ಯಕೀಯ ವರದಿಯ ಆಧಾರದ ಮೇಲೆ ಶನಿವಾರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಅಕ್ಟೋಬರ್ 12 ರಂದು ವೈದ್ಯಕೀಯ ವರದಿ ಆಧರಿಸಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಬೈ ಅಕ್ಟೋಬರ್ 14: ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಬೈಲ್ ನಲ್ಲಿ ಹೆಚ್ಚು ಹೊತ್ತು ಕಳೆಯುವುದು ಬೇಡ ಎಂದು ತಾಯಿ ಬೈದಿದ್ದಕ್ಕೆ ಬಾಲಕಿ ವಿಷ ಸೇವಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ಅಂಬರನಾಥ್ ಪ್ರದೇಶದ ನಿವಾಸಿಯಾದ ಬಾಲಕಿ ಸೆಪ್ಟೆಂಬರ್ 26 ರಂದು ವಿಷ ಸೇವನೆ ಮಾಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಕೆಯನ್ನು ನೆರೆಯ ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಅಕ್ಟೋಬರ್ 2 ರಂದು ಸಾವನ್ನಪ್ಪಿದಳು ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯಕೀಯ ವರದಿಯ ಆಧಾರದ ಮೇಲೆ ಶನಿವಾರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಅಕ್ಟೋಬರ್ 12 ರಂದು ವೈದ್ಯಕೀಯ ವರದಿ ಆಧರಿಸಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾನಸಿಕ ಆರೋಗ್ಯ ಮತ್ತು ಮೊಬೈಲ್ ಬಳಕೆ
ಈ ದುರಂತ ಘಟನೆಯು ಯುವಕರ ಮಾನಸಿಕ ಆರೋಗ್ಯದ ಸುತ್ತ ಬೆಳೆಯುತ್ತಿರುವ ಸಮಸ್ಯೆಗಳು ಮತ್ತು ಮೊಬೈಲ್ ಫೋನ್‌ಗಳ ಭಾರೀ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಕಳೆದ ತಿಂಗಳು, ದೆಹಲಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ನ “ಟ್ರೀಟ್” ನೀಡಲು ನಿರಾಕರಿಸಿದ್ದಕ್ಕೆ ಮೂವರು ಹುಡುಗರು ತಮ್ಮ 16 ವರ್ಷದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಂದರು.ಸಂತ್ರಸ್ತ ಮತ್ತು ಮೂವರು ಬಾಲಕರು 9ನೇ ತರಗತಿಯ ವಿದ್ಯಾರ್ಥಿಗಳು.
“ಈ ಗುಂಪು ಫೋನ್ ಖರೀದಿ ಮಾಡಿದ ನಂತರ ಪಾರ್ಟಿ ಅಥವಾ ಟ್ರೀಟ್‌ಗೆ ಬೇಡಿಕೆಯಿಟ್ಟಿತ್ತು. ಆದರೆ ಸಚಿನ್ ನಿರಾಕರಿಸಿದರು. ವಾಗ್ವಾದವು ಚೂರಿ ಇರಿತಕ್ಕೆ ಕಾರಣವಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿಡಿಯೋ ಗೇಮ್ ಆಡುವ ಚಟಕ್ಕೆ ಬಿದ್ದಿದ್ದ 16ರ ಹರೆಯದ ಬಾಲಕನೊಬ್ಬ ಕಳೆದ ವರ್ಷ ತನ್ನ ತಂದೆ ಸ್ಮಾರ್ಟ್‌ಫೋನ್ ತೆಗೆದಿರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಸ್ಮಾರ್ಟ್‌ಫೋನ್‌ನಲ್ಲಿ ಆಟವಾಡುವುದನ್ನು ನಿಲ್ಲಿಸಿ ತನ್ನ ಕಲಿಕೆಯತ್ತ ಗಮನ ಹರಿಸುವಂತೆ ಹೇಳಿದ ನಂತರ ಆತ ತನ್ನ ತಂದೆಯೊಂದಿಗೆ ಭಾರೀ ಜಗಳವಾಡಿದ್ದ. ನಿರಂತರವಾಗಿ ಆಟವಾಡುತ್ತಿದ್ದ ಆತನ ತಂದೆ ಆತನ ಸೆಲ್ ಫೋನ್ ತೆಗೆದುಕೊಂಡು ಹೋಗಿ ಮಲಗಲು ಹೇಳಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆಗೆ ಶರಣಾದ ತಂದೆ
ಹುಡುಗನಿಗೆ ತುಂಬಾ ಬೇಸರವಾಗಿತ್ತು. ಮರುದಿನ ಮನೆಯವರು ಎಚ್ಚರಗೊಂಡು ನೋಡಿದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ