ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಹಕಾರ ಕೋರಿದ ತೆಲಂಗಾಣ ಸಚಿವ ಕೆಟಿಆರ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ತೆಲಂಗಾಣ ಸಚಿವ ಕೆಟಿ ರಾಮರಾವ್, ಹೈದರಾಬಾದ್ ನಗರದ ಮೂಲಸೌಕರ್ಯ ಕಲ್ಪಿಸಲು ಸಹಕರಿಸುವಂತೆ 9 ವರ್ಷಗಳಿಂದ ಕೇಳುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರದಿಂದ ಯಾವುದೇ ಸಹಾಯ ಬಂದಿಲ್ಲ ಎಂದಿದ್ದಾರೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಹಕಾರ ಕೋರಿದ ತೆಲಂಗಾಣ ಸಚಿವ ಕೆಟಿಆರ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಕೆಟಿಆರ್

Updated on: Jun 23, 2023 | 3:34 PM

ತೆಲಂಗಾಣ ಸಚಿವ ಕೆಟಿ ರಾಮರಾವ್ (KT Rama Rao) ಶುಕ್ರವಾರ ಬೆಳಗ್ಗೆ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ( Defence Minister Rajnath Singh) ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರದಿಂದ ಸಹಕಾರ ಕೋರಿದರು. ದೆಹಲಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಟಿಆರ್, ತೆಲಂಗಾಣ (Telangana) ಅಭಿವೃದ್ಧಿ ಪಥದಲ್ಲಿದೆ ಎಂದು ಕೇಂದ್ರ ಸರ್ಕಾರವೇ ಹೇಳುತ್ತಿದೆ.

ಹೈದರಾಬಾದ್ ನಗರದ ಮೂಲಸೌಕರ್ಯ ಕಲ್ಪಿಸಲು ಸಹಕರಿಸುವಂತೆ 9 ವರ್ಷಗಳಿಂದ ಕೇಳುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರದಿಂದ ಯಾವುದೇ ಸಹಾಯ ಬಂದಿಲ್ಲ. ಸಿಕಂದರಾಬಾದ್ ಜುಬಿಲಿ ಬಸ್ ನಿಲ್ದಾಣದಿಂದ ರಾಜೀವ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸ್ಕೈವೇ ನಿರ್ಮಿಸಲು ರಕ್ಷಣಾ ಇಲಾಖೆಯಿಂದ ಅನುಮತಿ ಕೋರುತ್ತಿದ್ದೇವೆ.

ಇದಕ್ಕಾಗಿ ನಾವು ಇಂದು ರಕ್ಷಣಾ ಇಲಾಖೆಗೆ 96 ಎಕರೆ ರಕ್ಷಣಾ ಭೂಮಿ (ಕಂಟೋನ್ಮೆಂಟ್ ಭೂಮಿ) ಮತ್ತು ಪಾಟ್ನಿ ಸೆಂಟರ್‌ನಿಂದ ನಿರ್ಮಿಸಲಿರುವ ಸ್ಕೈವೇಗಾಗಿ 56 ಎಕರೆಗಳನ್ನು ಕೇಳಿದ್ದೇವೆ ಎಂದು ಹೇಳಿದ್ದಾರೆ.

ರಕ್ಷಣಾ ಇಲಾಖೆ ನೀಡಿದ ಜಾಗಕ್ಕೆ ಸಮನಾಗಿ ಬೇರೆಡೆ ಜಾಗ ನೀಡುತ್ತೇವೆ ಎಂದು ಹೇಳಿದ್ದೇವೆ. ಮೆಹದಿಪಟ್ನಂನಲ್ಲಿ ರಕ್ಷಣಾ ಇಲಾಖೆಯಿಂದ ಒಂದೂವರೆ ಎಕರೆ ಜಮೀನು ಕೂಡ ಅಗತ್ಯವಿದೆ. ನಾವು 142 ಸಂಪರ್ಕ ರಸ್ತೆಗಳನ್ನು ಯೋಜಿಸಿದ್ದೇವೆ.

ಇದನ್ನೂ ಓದಿ: ಫಲ ಕೊಡದ ದೆಹಲಿ ಭೇಟಿ: ಅಕ್ಕಿ ಕೊಡಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ನಿರಾಕರಣೆ, ಮುನಿಯಪ್ಪ ಅಸಮಾಧಾನ

ಒಂದೋ ಎರಡೋ ಕಡೆ ರಕ್ಷಣಾ ಇಲಾಖೆಯ ಜಮೀನುಗಳು ಅಡ್ಡಿಯಾಗುತ್ತಿವೆ. ಅವುಗಳನ್ನು ತೆರವುಗೊಳಿಸಿ ಸಹಕರಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿರುವುದಾಗಿ ಕೆಟಿಆರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 23 June 23