ಇವರುಗಳು ಸುಖಾಸುಮ್ನೆ ದಿನಾ ರೈಲು ಟಿಕೆಟ್ ಖರೀದಿಸ್ತಾರೆ.. ಆದರೆ ಪ್ರಯಾಣ ಮಾಡುವುದಿಲ್ಲ! ಯಾಕೆ ಗೊತ್ತಾ?

|

Updated on: Feb 13, 2024 | 3:05 PM

Nekkonda Train Ticket: ಇತ್ತೀಚೆಗೆ ಸಿಕಂದರಾಬಾದ್​ ಮತ್ತು ಗುಂಟೂರು ನಡುವಣ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕ ನಿಲುಗಡೆ ನೀಡಲಾಯಿತು. ಆದರೆ ರೈಲ್ವೆ ಅಧಿಕಾರಿಗಳು ಒಂದು ಷರತ್ತನ್ನು ಹಾಕಿದ್ದಾರೆ. 3 ತಿಂಗಳವರೆಗೆ ಆದಾಯ ಬಂದರೆ ಮಾತ್ರ ಪೂರ್ಣ ನಿಲುಗಡೆ ನೀಡಲಾಗುವುದು, ಇಲ್ಲದಿದ್ದರೆ...

ಇವರುಗಳು ಸುಖಾಸುಮ್ನೆ ದಿನಾ ರೈಲು ಟಿಕೆಟ್ ಖರೀದಿಸ್ತಾರೆ.. ಆದರೆ ಪ್ರಯಾಣ ಮಾಡುವುದಿಲ್ಲ! ಯಾಕೆ ಗೊತ್ತಾ?
ಇವರು ದಿನಾ ರೈಲು ಟಿಕೆಟ್ ಖರೀದಿಸ್ತಾರೆ.. ಆದರೆ ಪ್ರಯಾಣ ಮಾಡುವುದಿಲ್ಲ! ಯಾಕೆ
Follow us on

ಫೆಬ್ರವರಿ 12: ವಾರಂಗಲ್ ಜಿಲ್ಲೆಯ ನೆಕ್ಕೊಂಡ ರೈಲು ನಿಲ್ದಾಣದಲ್ಲಿ (nekkonda in warangal) ಕೆಲವರು ಪ್ರತಿದಿನ 60 ಕ್ಕೂ ಹೆಚ್ಚು ಪ್ರಯಾಣ ಟಿಕೆಟ್ ಖರೀದಿಸುತ್ತಾರೆ (Train Tickets). ಆದರೆ ಅವರು ಎಲ್ಲಿಯೂ ಪ್ರಯಾಣಿಸುವುದಿಲ್ಲ. ಅರೇ.. ಯಾಕೆ ಅಂತ ನೀವಾಗಲೇ ಯೋಚಿಸುತ್ತಿರಲೂ ಸಾಕು! ತಮ್ಮ ಊರಿನ ರೈಲು ನಿಲುಗಡೆಯನ್ನು ರದ್ದುಗೊಳಿಸುವುದನ್ನು ತಪ್ಪಿಸಲು ಅವರು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಊರಿನ ಎಲ್ಲ ಸಮುದಾಯಗಳು ಒಗ್ಗಟ್ಟಾಗಿದೆ.

ರೈಲು ಟಿಕೆಟ್ ಕೊಳ್ಳಲು ಹಳ್ಳಿಗರೂ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ. ವಿವರಕ್ಕೆ ಹೋಗುವುದಾದರೆ.. ನರಸಂಪೇಟೆ ಕ್ಷೇತ್ರದ ಏಕೈಕ ರೈಲು ನಿಲ್ದಾಣ ನೆಕ್ಕೊಂಡ. ಕ್ಷೇತ್ರದ ಹಲವು ಮಂಡಲಗಳಿಗೆ ಸೇರಿದ ಜನರು ಎಲ್ಲಿಗಾದರೂ ಹೋಗಬೇಕಾದರೆ ಇಲ್ಲಿಗೆ ಬರುತ್ತಾರೆ. ಹೈದರಾಬಾದ್, ತಿರುಪತಿ, ದೆಹಲಿ, ಶಿರಡಿ ಮುಂತಾದ ಪ್ರಮುಖ ಸ್ಥಳಗಳಿಗೆ ತೆರಳುವ ಜನರು ಇಲ್ಲಿ ಅನೇಕ ರೈಲುಗಳ ನಿಲುಗಡೆ ಇಲ್ಲದ ಕಾರಣ ಅವರೆಲ್ಲಾ ತೊಂದರೆ ಅನುಭವಿಸುತ್ತಿದ್ದಾರೆ. ಇದು ಸಾಕಾಗುವುದಿಲ್ಲ ಎಂಬ ಆದಾಯ ಹೆಚ್ಚಾಗಿ ಇಲ್ಲವೆಂಬ ನೆಪದಲ್ಲಿ ರೈಲ್ವೇ ಅಧಿಕಾರಿಗಳು ಪದ್ಮಾವತಿ ಎಕ್ಸ್‌ಪ್ರೆಸ್‌ನ ವಾಪಸಾಗುವ ಸಮಯದಲ್ಲಿಯೂ ನೆಕ್ಕೊಂಡ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಗೊಳಿಸಿದ್ದಾರೆ.

Also Read:  ಆರೋಪಿ ಬಂಧನಕ್ಕೆ ಒತ್ತಾಯಿಸಿ ಬೃಹತ್ ನೀರಿನ ಟ್ಯಾಂಕ್​ ಏರಿ ಪ್ರತಿಭಟಿಸಿದ ಅತ್ಯಾಚಾರ ಸಂತ್ರಸ್ತೆ

ಸ್ಥಳೀಯ ಜನರು.. ಹಲವು ಬಾರಿ ಮನವಿ ಸಲ್ಲಿಸಿದ ನಂತರ… ಇತ್ತೀಚೆಗೆ ಸಿಕಂದರಾಬಾದ್‌ನಿಂದ ಗುಂಟೂರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕ ನಿಲುಗಡೆ ನೀಡಲಾಯಿತು. ಆದರೆ ರೈಲ್ವೆ ಅಧಿಕಾರಿಗಳು ಒಂದು ಷರತ್ತನ್ನೂ ಹಾಕಿದ್ದಾರೆ. 3 ತಿಂಗಳವರೆಗೆ ಆದಾಯ ಬಂದರೆ ಮಾತ್ರ ಪೂರ್ಣ ನಿಲುಗಡೆ ನೀಡಲಾಗುವುದು, ಇಲ್ಲದಿದ್ದರೆ ರದ್ದುಪಡಿಸಲಾಗುವುದು ಎಂದು ಹೇಳಿದ್ದಾರಂತೆ!

ಇದರೊಂದಿಗೆ ಹಾಲ್ಟಿಂಗ್ ಕಳೆದುಕೊಳ್ಳಲು ಬಯಸದ ಗ್ರಾಮಸ್ಥರು ಒಗ್ಗಟ್ಟಿನಲ್ಲಿ ಬಲವಿದೆ ಎಂದಿದ್ದಾರೆ. ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ‘ನೆಕ್ಕೊಂಡ ಟೌನ್ ರೈಲ್ವೇ ಟಿಕೆಟ್ ಫೋರಂ’ ಹೆಸರಿನ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು 400 ಮಂದಿ ಇದ್ದಾರೆ. ಇವರೆಲ್ಲ ಈವರೆಗೆ 25 ಸಾವಿರ ರೂ. ಹಣದಲ್ಲಿ ನೆಕ್ಕೊಂಡದಿಂದ ಖಮ್ಮಂ, ಸಿಕಂದರಾಬಾದ್ ಮತ್ತಿತರ ಕಡೆ ಸುಖಾಸುಮ್ಮನೆ ರೈಲು ಟಿಕೆಟ್ ಖರೀದಿಸುತ್ತಾರೆ. ಆದರೆ ಪ್ರಯಾಣಿಸುವುದಿಲ್ಲ. ಗ್ರೂಪ್ ಅಡ್ಮಿನ್ ಗಳಾದ ರಾಮಗೋಪಾಲ್, ವೇಣುಗೋಪಾಲ್ ರೆಡ್ಡಿ, ವೆಂಕಣ್ಣ, ಮಹಿಪಾಲ್ ರೆಡ್ಡಿ, ಶ್ರೀನಿವಾಸ್ ಮತ್ತಿತರರು ನಿಲ್ದಾಣಕ್ಕೆ ಆದಾಯ ತೋರಿಸಲು ಈ ರೀತಿ ಮಾಡುತ್ತಿದ್ದು, ಹೆಚ್ಚಿನ ರೈಲುಗಳ ನಿಲುಗಡೆಗೆ ನಾವೆಲ್ಲರೂ ಮುಂದಾಗುತ್ತೇವೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:03 pm, Tue, 13 February 24