ಫ್ಯಾನ್ಸಿ ನಂಬರ್ ಕ್ರೇಜ್! ತೆಲಂಗಾಣ ಸಾರಿಗೆ ಪ್ರಾಧಿಕಾರಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ಸಂಪತ್ತು
ಖೈರತಾಬಾದ್ RTO ಕಚೇರಿಯಲ್ಲಿ 0009 ಸಂಖ್ಯೆಗೆ ಅತಿ ಹೆಚ್ಚು ಬಿಡ್ ಆಗಿದೆ. 10.5 ಲಕ್ಷ ರೂ. ಎಂದು ಆರ್‌ಟಿಒ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 'ಹಲವು ಜನರು 9 ಅನ್ನು ಅದೃಷ್ಟ ಸಂಖ್ಯೆ ಎಂದು ಪರಿಗಣಿಸುತ್ತಾರೆ. ಕೈಗಾರಿಕೋದ್ಯಮಿಗಳು ಮತ್ತು ನಿರ್ಮಾಣ ಕಂಪನಿಗಳು ಈ ಸಂಖ್ಯೆಯನ್ನು ಹೆಚ್ಚು ಹೆಚ್ಚು ಖರೀದಿಸಲು ಆಸಕ್ತಿ ಹೊಂದಿವೆ ಎಂದು ತಿಳಿದುಬಂದಿದೆ.
ವಾಹನಗಳಿಗೆ ಫ್ಯಾನ್ಸಿ ನಂಬರ್ ನೋಂದಣಿ ಹರಾಜು ಹಾಕುವ ಮೂಲಕ ತೆಲಂಗಾಣದ ಸಾರಿಗೆ (ಆರ್ ಟಿಎ) ಸಂಸ್ಥೆಗೆ ಸಿರಿ ಸಂಪತ್ತು ಕ್ರೋಢೀಕರಿಸುತ್ತಿದೆ. ಹಬ್ಬದ ಸೀಸನ್ ಸಂದರ್ಭದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ಹೈದರಾಬಾದ್, ರಂಗಾರೆಡ್ಡಿ ಮತ್ತು ಮೇಡ್ಚಲ್ ಜಿಲ್ಲೆಗಳಲ್ಲಿ ಫ್ಯಾನ್ಸಿ ನಂಬರ್ ಹರಾಜು ಮೂಲಕ ರೂ. 53.9 ಕೋಟಿ ಸಂಗ್ರಹಿಸಿದೆ. ಈ ವರ್ಷದ ಅಂತ್ಯದೊಳಗೆ ನೋಂದಣಿ ಮೂಲಕ ರೂ. 72 ಕೋಟಿಗೂ ಅಧಿಕ ಆದಾಯ ಗಳಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ವರ್ಷ ಆರ್‌ಟಿಐ ಮೂಲಕ ಗಳಿಸಿದ ಮೊತ್ತ ರೂ. 72.7 ಕೋಟಿ ಗಳಿಸಿದೆಯಂತೆ. 9999, 0001, 0007, 0009 ವಾಹನ ಮಾಲೀಕರಿಂದ ಹೆಚ್ಚು ಬೇಡಿಕೆಯ/ ಆದ್ಯತೆಯ ಫ್ಯಾನ್ಸಿ ಸಂಖ್ಯೆಗಳಾಗಿವೆ.
ಈ ವರ್ಷ ಇದುವರೆಗೆ ನಡೆದ ಹರಾಜಿನಲ್ಲಿ 9999 ನೋಂದಣಿ ಸಂಖ್ಯೆಯು 21.6 ಲಕ್ಷ ರೂ. ಗೆ ಮಾರಾಟವಾಗಿದೆ. ಖೈರತಾಬಾದ್ ಆರ್‌ಟಿಒ ಕಚೇರಿಯಲ್ಲಿ ಈ ಸಂಖ್ಯೆ ಬಿಕರಿಯಾಗಿದೆ. ಕೊಂಡಾಪುರ ಆರ್‌ಟಿಒ ಕಚೇರಿಯಲ್ಲಿ ಇದೇ ಸಂಖ್ಯೆ ರೂ. 12.1 ಲಕ್ಷಕ್ಕೆ ವಾಹನ ಮಾಲೀಕರೊಬ್ಬರು ಸ್ವಂತ ಮಾಡಿಕೊಂಡಿದ್ದಾರೆ. ಮಲಕ್ಪೇಟೆಯಲ್ಲಿ ಮತ್ತೊಬ್ಬ ವಾಹಯನ ಮಾಲೀಕರು 9999 ನೋಂದಣಿ ಸಂಖ್ಯೆ ರೂ. 9.9 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದ್ದಾರೆ.
ಇದನ್ನೂ ಓದಿ: ಜಯನಗರ RTO: ಫ್ಯಾನ್ಸಿ ನಂಬರುಗಳು ಲಕ್ಷ ಲಕ್ಷಕ್ಕೆ ಬಿಕರಿಯಾದವು -ವಾಹನ ಮಾಲೀಕರಿಗೂ ಖುಷಿ, ಸಾರಿಗೆ ಇಲಾಖೆಗೂ ಫುಲ್ ಖುಷ್
ಖೈರತಾಬಾದ್ RTO ಕಚೇರಿಯಲ್ಲಿ 0009 ಸಂಖ್ಯೆಗೆ ಅತಿ ಹೆಚ್ಚು ಬಿಡ್ ಆಗಿದೆ. 10.5 ಲಕ್ಷ ರೂ. ಎಂದು ಆರ್‌ಟಿಒ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ಹಲವು ಜನರು 9 ಅನ್ನು ಅದೃಷ್ಟ ಸಂಖ್ಯೆ ಎಂದು ಪರಿಗಣಿಸುತ್ತಾರೆ. ಕೈಗಾರಿಕೋದ್ಯಮಿಗಳು ಮತ್ತು ನಿರ್ಮಾಣ ಕಂಪನಿಗಳು ಈ ಸಂಖ್ಯೆಯನ್ನು ಹೆಚ್ಚು ಹೆಚ್ಚು ಖರೀದಿಸಲು ಆಸಕ್ತಿ ಹೊಂದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 100 ಕೆ.ಜಿ. ಬೆಳ್ಳಿಯ 90 ಲಕ್ಷ ರೂ ಮೌಲ್ಯದ ಗಣಪತಿ ಮೂರ್ತಿ! ಎಲ್ಲಿ ಪ್ರತಿಷ್ಠಾಪಿಸಿದ್ದಾರೆ ಗೊತ್ತಾ!?
ಆಗಸ್ಟ್ ತಿಂಗಳಿನಲ್ಲಿ 9999 ಸಂಖ್ಯೆ ರೂ. 21.6 ಲಕ್ಷ ಮತ್ತು 0009 ಸಂಖ್ಯೆ ರೂ. 10.5 ಲಕ್ಷಗಳು, 0001 ಸಂಖ್ಯೆ ರೂ. 3.01 ಲಕ್ಷಕ್ಕೆ ಮಾರಾಟವಾಗಿದೆ. ವಾಹನ ಮಾಲೀಕರು ರಿಜಿಸ್ಟ್ರೇಷನ್ ನಂಬರ್ನಲ್ಲಿರುವ ಎಲ್ಲಾ ಸಂಖ್ಯೆಗಳು 9 ಕ್ಕಿಂತ ಕಡಿಮೆ ಇರುವ ಸಂಖ್ಯೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. 029 ಮತ್ತು 1223 ನಂತಹ ಸಂಖ್ಯೆಗಳಿಗೂ ಬಿಡ್ಡಿಂಗ್‌ಗಳು ಬರುತ್ತಿವೆ ಎಂದು ಖೈರತಾಬಾದ್ ಆರ್‌ಟಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನ ಮಾಲೀಕರು ತಮ್ಮ ಮಕ್ಕಳ ಜನ್ಮದಿನವನ್ನು ವಿಶೇಷವಾಗಿ ಪರಿಗಣಿಸುತ್ತಾರೆ ಎಂಬುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಈ ಬಿಡ್‌ಗಳು ರೂ. 1000, ಅಥವಾ 2000 ರೂ. ಇರುತ್ತದೆ. ಒಟ್ಟಿನಲ್ಲಿ ತೆಲಂಗಾಣ ಸರ್ಕಾರದ ಬೊಕ್ಕಸ ತುಂಬಿಸುತ್ತಿರುವುದು ಇಂತಹ ವಾಹನ ಮಾಲೀಕರ ನಂಬಿಕೆ ಮತ್ತು ಅಭಿಮಾನ ಎನ್ನುವುದರಲ್ಲಿ ಎರಡು ಮಾತಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ