ಹೈದರಾಬಾದ್: ತೆಲುಗು ದೇಶಂ ಪಾರ್ಟಿ (TDP) ತನ್ನ ಕಚೇರಿಗಳ ಮೇಲೆ ವೈಎಸ್‌ಆರ್‌ಸಿಪಿ (YSRCP) ಕಾರ್ಯಕರ್ತರು ನಡೆಸಿದ ದಾಂಧಲೆ ಖಂಡಿಸಿ ಇಂದು ಆಂಧ್ರಪ್ರದೇಶದಲ್ಲಿ ಬಂದ್ಗೆ ಕರೆ ನೀಡಿದೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು (N Chandrababu Naidu) ಈ ದಾಳಿಯನ್ನು “ರಾಜ್ಯ ಪ್ರಾಯೋಜಿತ ಭಯೋತ್ಪಾದನೆ” ಎಂದು ಕರೆದಿದ್ದಾರೆ. ಗುಂಟೂರಿನ ಮಂಗಳಗಿರಿಯಲ್ಲಿರುವ ಟಿಡಿಪಿ ರಾಜ್ಯ ಪ್ರಧಾನ ಕಛೇರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿನ ಕಚೇರಿಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಂವಿಧಾನದ 356 ನೇ ವಿಧಿಯನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವಂತೆ ಅವರು ಒತ್ತಾಯಿಸಿದರು. ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಮುಖ್ಯಮಂತ್ರಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಟಿಡಿಪಿ ಕಾರ್ಯಕರ್ತರ ಮೇಲೆ ಪೂರ್ವ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ.
ಟಿಡಿಪಿ ಮುಖ್ಯಸ್ಥರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪ್ರಸ್ತುತ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಸಂಪೂರ್ಣವಾಗಿ ಕುಸಿದಿದೆ ಎಂದು ವಿವರಿಸಿದ್ದಾರೆ ಇದಕ್ಕೆ ಪ್ರತಿಕ್ರಿಯೆಯಾಗಿ, ಈ ವಿಷಯವನ್ನು ಪರಿಶೀಲಿಸುವುದಾಗಿ ಶಾ ಭರವಸೆ ನೀಡಿದ್ದು,ದಾಳಿಗಳ ಬಗ್ಗೆ ಔಪಚಾರಿಕವಾಗಿ ಪೊಲೀಸ್ ದೂರು ನೀಡುವಂತೆ ಹೇಳಿದ್ದಾರೆ ಎಂದು ನಾಯ್ಡು ಹೇಳಿದರು.
Never seen such atrocities in my political life, both CM and DGP jointly attacked TDP offices: TDP president and former Andhra Pradesh CM N Chandrababu Naidu on vandalism at TDP’s Central Office in Mangalagiri pic.twitter.com/rlcNchGJol
— ANI (@ANI) October 19, 2021
ನಾಯ್ಡು ಅವರು ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್ ಅವರೊಂದಿಗೆ ಫೋನಿನಲ್ಲಿ ಮಾತನಾಡಿದ್ದು ಟಿಡಿಪಿ ಕಚೇರಿಗಳು ಮತ್ತು ನಾಯಕರ ಮೇಲೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಅವರಿಗೆ ದೂರು ನೀಡಿದ್ದಾರೆ.
Andhra Pradesh | YSRCP workers vandalized TDP’s Central Office in Mangalagiri & TDP national spokesman K Pattabhi Ram’s residence in Vijayawada for allegedly abusing the Chief Minister during a presser pic.twitter.com/Rum0lQ2ymu
— ANI (@ANI) October 19, 2021
ಟಿಡಿಪಿ ವಕ್ತಾರ ಕೊಮ್ಮಾರೆಡ್ಡಿ ಪಟ್ಟಾಭಿ ಅವರು ಪತ್ರಿಕಾಗೋಷ್ಠಿ ನಡೆಸಿ ವಿಶಾಖಪಟ್ಟಣದ ಬುಡಕಟ್ಟು ಪ್ರದೇಶಗಳಲ್ಲಿ ಗಾಂಜಾ ಬೆಳೆಯುವಿಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದ ಬೆನ್ನಲ್ಲೇ ದಾಳಿ ನಡೆದಿದೆ. ಟಿಡಿಪಿಯ ಮಾಜಿ ಸಚಿವ ನಕ್ಕ ಆನಂದ ಬಾಬು ಅವರಿಗೆ ನೋಟಿಸ್ ನೀಡಿದ್ದಕ್ಕಾಗಿ ಪಟ್ಟಾಭಿ, ಕೆಲವು ವೈಎಸ್‌ಆರ್‌ಸಿ ನಾಯಕರು ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಜಗನ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಟಿಡಿಪಿ ವಕ್ತಾರರು ಮುಖ್ಯಮಂತ್ರಿಯ ವಿರುದ್ಧ ಕೆಲವು ಕೆಟ್ಟ ಪದಗಳನ್ನು ಬಳಸಿದರು.
ಜಗನ್ ಅವರ ಪಟ್ಟಾಭಿಯ ಕೆಟ್ಟ ಪದಬಳಕೆ ವಿರುದ್ಧ ಸಿಡಿದ ವೈಎಸ್‌ಆರ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರು ಅವರು ರಾಜ್ಯದ ಹಲವು ಭಾಗಗಳಲ್ಲಿ ಟಿಡಿಪಿ ಕಚೇರಿಗಳ ಮೇಲೆ ದಾಳಿ ಮಾಡಿದರು ರು ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರ ಪ್ರತಿಕೃತಿಗಳನ್ನು ದಹಿಸಿದ್ದು ಮತ್ತು ಪಟ್ಟಾಭಿ ಮತ್ತು ನಾಯ್ಡು ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ನನ್ನ ಮನೆ ಇಂದು ಸಂಪೂರ್ಣವಾಗಿ ದಾಳಿಗೊಳಗಾಗಿಗದೆ ಆಂಧ್ರಪ್ರದೇಶದಲ್ಲಿ ಡ್ರಗ್ಸ್ ವ್ಯವಹಾರದ ಬಗ್ಗೆ ನಾನು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರಿಂದ ಅವರು ಅದನ್ನು ಮಾಡಿದ್ದಾರೆ. ನೀವು ದೇಶದಲ್ಲಿ ಎಲ್ಲಿಗೆ ಹೋದರೂ, ಆಂಧ್ರಪ್ರದೇಶದಿಂದ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ನಾನು ಮತ್ತು ಪಕ್ಷದ ಹಿರಿಯ ನಾಯಕರು ಅವರನ್ನು ಪ್ರಶ್ನಿಸಿದ್ದೆವು ಎಂದು ದಾಳಿ ನಂತರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಪಟ್ಟಾಭಿ ಹೇಳಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟೀಕೆ: ಟಿಡಿಪಿ ಕಚೇರಿಗೆ ನುಗ್ಗಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ದಾಂಧಲೆ
Published On - 11:19 am, Wed, 20 October 21