Terrorist Encounter: ಶ್ರೀನಗರದಲ್ಲಿ ಸೇನಾ ಪಡೆಯಿಂದ ಎನ್​ಕೌಂಟರ್; ಓರ್ವ ಉಗ್ರನ ಹತ್ಯೆ

| Updated By: ಸುಷ್ಮಾ ಚಕ್ರೆ

Updated on: Dec 19, 2021 | 2:30 PM

ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಹರ್ವಾನ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ ಭಯೋತ್ಪಾದಕನನ್ನು ಹತ್ಯೆ ಮಾಡಲಾಯಿತು.

Terrorist Encounter: ಶ್ರೀನಗರದಲ್ಲಿ ಸೇನಾ ಪಡೆಯಿಂದ ಎನ್​ಕೌಂಟರ್; ಓರ್ವ ಉಗ್ರನ ಹತ್ಯೆ
ಸೇನಾ ಕಾರ್ಯಾಚರಣೆ
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಹರ್ವಾನ್ ದರ್ಬಾಗ್ ಧಾರಾ ಪ್ರದೇಶದಲ್ಲಿ ನಡೆದ ಸಂಕ್ಷಿಪ್ತ ಎನ್‌ಕೌಂಟರ್‌ನಲ್ಲಿ ಭಾರತೀಯ ಭದ್ರತಾ ಪಡೆ ಸಿಬ್ಬಂದಿ ಓರ್ವ ಭಯೋತ್ಪಾದಕನನ್ನು ಕೊಂದಿದ್ದಾರೆ. ಇಂದು ಮುಂಜಾನೆ ಈ ಎನ್‌ಕೌಂಟರ್ ನಡೆದಿದೆ. ಭದ್ರತಾ ಪಡೆಗಳ ಪ್ರಕಾರ, ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ತನಿಖೆಗಳು ಮತ್ತು ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಇಂದು ಬೆಳಿಗ್ಗೆ 4 ಗಂಟೆಗೆ ಸೇನಾ ಪಡೆ ಉಗ್ರನ ಹತ್ಯೆಯನ್ನು ಖಚಿತಪಡಿಸಿದೆ.

ಕಾಶ್ಮೀರ ವಲಯ ಪೊಲೀಸರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಎನ್​ಕೌಂಟರ್​ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಆತನ ಜೊತೆಗಿದ್ದ ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ನೀಡಲಾಗುವುದು ಎಂದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಹರ್ವಾನ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ ಭಯೋತ್ಪಾದಕನನ್ನು ಹತ್ಯೆ ಮಾಡಲಾಯಿತು. ಈ ಎನ್‌ಕೌಂಟರ್ ಕುರಿತು ಹೆಚ್ಚಿನ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದಾರೆ.

ಈ ವಾರದ ಆರಂಭದಲ್ಲಿ, ದಕ್ಷಿಣ ಶ್ರೀನಗರದ ರಂಗ್ರೆತ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಕೊಂದಿರುವುದಾಗಿ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಲಗಾಂವ್​​ನಲ್ಲಿ ಮುಂದುವರಿದ ಎನ್​ಕೌಂಟರ್​​; ಇಂದು ಇಬ್ಬರು ಭಯೋತ್ಪಾದಕರ ಹತ್ಯೆ