ಪಶ್ಚಿಮ ಬಂಗಾಳ ಸಚಿವ ರಥಿನ್ ಘೋಷ್ ನಿವಾಸದ ಮೇಲೆ ಇಡಿ ದಾಳಿ

ಪಶ್ಚಿಮ ಬಂಗಾಳ ಸಚಿವ ರಥಿನ್ ಘೋಷ್​ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ನಿವಾಸ ಸೇರಿದಂತೆ ಒಟ್ಟು 13 ಕಡೆ ದಾಳಿ ನಡೆದಿದೆ.

ಪಶ್ಚಿಮ ಬಂಗಾಳ ಸಚಿವ ರಥಿನ್ ಘೋಷ್ ನಿವಾಸದ ಮೇಲೆ ಇಡಿ ದಾಳಿ
ರಥಿನ್ ಘೋಷ್
Image Credit source: India Today

Updated on: Oct 05, 2023 | 8:38 AM

ಪಶ್ಚಿಮ ಬಂಗಾಳ ಸಚಿವ ರಥಿನ್ ಘೋಷ್​ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ನಿವಾಸ ಸೇರಿದಂತೆ ಒಟ್ಟು 13 ಕಡೆ ದಾಳಿ ನಡೆದಿದೆ. ನಾಗರಿಕ ಸಂಸ್ಥೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ರಥಿನ್ ಘೋಷ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಸಚಿವರ ಮನೆ ಸೇರಿದಂತೆ ಕೋಲ್ಕತ್ತಾದ 13 ಸ್ಥಳಗಳಲ್ಲಿ ಇಡಿ ಶೋಧ ನಡೆಸುತ್ತಿದೆ.
ಘೋಷ್ ಅವರು ಮಧ್ಯಮಗ್ರಾಮ ಪುರಸಭೆಯ ಅಧ್ಯಕ್ಷರಾಗಿದ್ದು, ಸರ್ಕಾರಿ ಉದ್ಯೋಗಗಳಿಗೆ ಅನರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿಯ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಇಡಿ ದಾಳಿ

ಘೋಷ್ ಮತ್ತು ಅವರ ಸಹಚರರು ಉದ್ಯೋಗಕ್ಕಾಗಿ ಅಭ್ಯರ್ಥಿಗಳಿಂದ ಲಂಚ ಪಡೆದಿದ್ದಾರೆ ಎಂಬ ಆರೋಪಗಳನ್ನು ಇಡಿ ಪರಿಶೀಲಿಸುತ್ತಿದೆ. ಶೋಧ ಕಾರ್ಯ ಮುಂದುವರಿದಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:31 am, Thu, 5 October 23