AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಚುನಾವಣೆ ನಡೆಯಲಿರುವ ಈ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.35 ಮೀಸಲಾತಿ ಘೋಷಣೆ

ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ವರ್ಷ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ದಿನಾಂಕ ಘೋಷಣೆಯಾಗದಿದ್ದರೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡತೊಡಗಿವೆ. ಅದೇ ಸಮಯದಲ್ಲಿ, ಸರ್ಕಾರಗಳು ಕೂಡ ಚುನಾವಣೆಯ ಮೊದಲು ಕೆಲವು ಜನಪರ ಕ್ರಮಗಳನ್ನು ತೆಗೆದುಕೊಂಡು ಮತ್ತೆ ತಮ್ಮದೇ ಸರ್ಕಾರವನ್ನು ರಚಿಸುವ ಕನಸು ಕಾಣುತ್ತಿದ್ದಾರೆ.

ಈ ವರ್ಷ ಚುನಾವಣೆ ನಡೆಯಲಿರುವ ಈ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.35 ಮೀಸಲಾತಿ ಘೋಷಣೆ
ಮಹಿಳಾ ಮೀಸಲಾತಿImage Credit source: India Today
ನಯನಾ ರಾಜೀವ್
|

Updated on: Oct 05, 2023 | 9:23 AM

Share

ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ವರ್ಷ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ದಿನಾಂಕ ಘೋಷಣೆಯಾಗದಿದ್ದರೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡತೊಡಗಿವೆ. ಅದೇ ಸಮಯದಲ್ಲಿ, ಸರ್ಕಾರಗಳು ಕೂಡ ಚುನಾವಣೆಯ ಮೊದಲು ಕೆಲವು ಜನಪರ ಕ್ರಮಗಳನ್ನು ತೆಗೆದುಕೊಂಡು ಮತ್ತೆ ತಮ್ಮದೇ ಸರ್ಕಾರವನ್ನು ರಚಿಸುವ ಕನಸು ಕಾಣುತ್ತಿದ್ದಾರೆ.

ಇದೇ ವೇಳೆ ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಘೋಷಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 35 ಪ್ರತಿಶತ ಮೀಸಲಾತಿ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ ಬೆನ್ನಲ್ಲೇ ಸಾಮಾನ್ಯ ಆಡಳಿತ ಇಲಾಖೆಯೂ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯರಿಗೆ ಮೀಸಲಾತಿ ನೀಡಲು ಮಧ್ಯಪ್ರದೇಶದ ನಾಗರಿಕ ಸೇವೆಗಳ (ಮಹಿಳೆಯರ ನೇಮಕಾತಿಗಾಗಿ ವಿಶೇಷ ನಿಬಂಧನೆಗಳು) ನಿಯಮಗಳು 1997 ಅನ್ನು ತಿದ್ದುಪಡಿ ಮಾಡಲಾಗಿದೆ. ಅರಣ್ಯ ಇಲಾಖೆಯ ಉದ್ಯೋಗಗಳಲ್ಲಿ ಮಾತ್ರ ಈ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇದಲ್ಲದೇ ಎಲ್ಲ ಕೆಲಸಗಳಲ್ಲೂ ಅಳವಡಿಸಲಾಗುವುದು.

ಮತ್ತಷ್ಟು ಓದಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ 2029ರ ಬಳಿಕವೇ ಜಾರಿ, ಕಾರಣವೇನು?

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆದೇಶದ ಮೇರೆಗೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಈ ಮೀಸಲಾತಿಯನ್ನು ನಿರ್ಧರಿಸಲಾಗಿದೆ. ಇದು ಮಹಿಳೆಯರಿಗೆ ದೊಡ್ಡ ನಿರ್ಧಾರ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ಅವರಿಗೆ ಉದ್ಯೋಗಗಳಲ್ಲಿ ಪ್ರಾತಿನಿಧ್ಯವನ್ನು ನೀಡುತ್ತದೆ.

ಮಧ್ಯಪ್ರದೇಶದಲ್ಲಿ ಮಹಿಳೆಯರಿಗಾಗಿ ಈಗಾಗಲೇ ಅನೇಕ ಯೋಜನೆಗಳು ಚಾಲನೆಯಲ್ಲಿವೆ. ಇವುಗಳಲ್ಲಿ ಮಹಿಳೆಯರಿಗಾಗಿ ಮಧ್ಯಪ್ರದೇಶ ಸರ್ಕಾರದ ಜನಪ್ರಿಯ ಲಾಡ್ಲಿ ಬಹನಾ ಯೋಜನೆ. ಇದರಲ್ಲಿ ಮಹಿಳೆಯರಿಗೆ 1500 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಭವಿಷ್ಯದಲ್ಲಿ ಈ ಯೋಜನೆಯಲ್ಲಿನ ಹಣಕಾಸಿನ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಸಿಎಂ ಶಿವರಾಜ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ