ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ 2029ರ ಬಳಿಕವೇ ಜಾರಿ, ಕಾರಣವೇನು?

Women’s reservation Bill: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ನಿಧಾನವಾಗಿ ಮತ್ತು ಸ್ಥಿರವಾಗಿ ಹೆಚ್ಚಿದ್ದ ಹೊತ್ತಲ್ಲೇ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟಿದೆ.1957 ರ ಎರಡನೇ ಲೋಕಸಭಾ ಚುನಾವಣೆಯಲ್ಲಿ ಕೇವಲ 45 ಇದ್ದ ಮಹಿಳಾ ಅಭ್ಯರ್ಥಿಗಳ ಗುಂಪು 2019 ರಲ್ಲಿ 726 ಕ್ಕೆ ಏರಿಕೆ ಆಗಿದೆ. ಆದಾಗ್ಯೂ, ಸಂಸದರಲ್ಲಿ ಅವರ ಪಾಲು ಇದೇ ರೀತಿಯ ಹೆಚ್ಚಳವನ್ನು ಕಂಡಿಲ್ಲ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ 2029ರ ಬಳಿಕವೇ ಜಾರಿ, ಕಾರಣವೇನು?
ಅರ್ಜುನ್ ರಾಮ್ ಮೇಘವಾಲ್
Follow us
|

Updated on:Sep 19, 2023 | 6:04 PM

ದೆಹಲಿ ಸೆಪ್ಟೆಂಬರ್ 19: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ (Parliament special session) ಇಂದು (ಸೆಪ್ಟೆಂಬರ್ 19) ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿಯನ್ನು ಒದಗಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು (Women’s reservation Bill) ಮಂಡಿಸಲಾಯಿತು. ಸಂಸತ್​​ನ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಮಸೂದೆ ಮಂಡಿಸಿದರು. ಅಂದಹಾಗೆ ಸರ್ಕಾರ ಈ ಮಸೂದೆಯನ್ನು ಅಂಗೀಕರಿಸಿದರೂ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯು 2029ರಲ್ಲಿ ಜಾರಿಯಾಗಬಹುದು.

ಮಸೂದೆ ಕಾನೂನಾದ ನಂತರ ಮೊದಲು ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ (delimitation process)ನಡೆಯಬೇಕು, ನಂತರ ಮಾತ್ರ ಮೀಸಲಾತಿ ಅನುಷ್ಠಾನಕ್ಕೆ ಬರುತ್ತದೆ. ಮುಂದಿನ ಜನಗಣತಿಯ ನಂತರವೇ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಲಾಗುತ್ತದೆ. ಇದು 2027 ರಲ್ಲಿ ನಡೆಯುವ ಸಾಧ್ಯತೆಯಿದೆ. ಜನಗಣತಿಯನ್ನು ಕೊನೆಯದಾಗಿ 2021 ರಲ್ಲಿ ನಡೆಸಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಇದು ವಿಳಂಬವಾಯಿತು. 2027ರಲ್ಲಿ ದೇಶದ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದ ನಂತರ 2029ರಲ್ಲಿ ನೂತನ ಮಸೂದೆಯು ಜಾರಿಗೆ ಬರಲಿದೆ.

ಇದಕ್ಕೂ ಮುನ್ನ, ವಿಶೇಷ ಅಧಿವೇಶನದ ಮೊದಲ ದಿನದ ಮೊದಲು, “ಐತಿಹಾಸಿಕ ನಿರ್ಧಾರಗಳ ವಿಷಯದಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಕಾರಣ” ಅಧಿವೇಶನವು ಮಹತ್ವದ್ದಾಗಿದೆ ಎಂದು ಮೋದಿ ಸೂಚಿಸಿದ್ದರು.

ಆಡಳಿತ ಪಕ್ಷದ ಉನ್ನತ ನಾಯಕತ್ವದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದವು. ಸಂಸತ್ ಭವನದಲ್ಲಿರುವ ಅವರ ಕಚೇರಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯ ನಂತರ, ರಾಜ್ಯಸಭಾ ನಾಯಕ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿಯನ್ನು ಭೇಟಿ ಮಾಡಲು ತೆರಳಿದರು. ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಸಂಪುಟ ಸಭೆಯ ನಂತರ ನಡ್ಡಾ ಅವರೊಂದಿಗೆ ಹಿರಿಯ ಸಚಿವರು ಮತ್ತು ಕೆಲವು ಮುಖಂಡರ ಮತ್ತೊಂದು ಸಭೆ ಕೂಡ ನಡೆದಿದೆ. ಮೋದಿ ಸೇರಿದಂತೆ ನಾಯಕರು ಮಂಗಳವಾರ ಕೆಲವು ಸಂಸದರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಂಗಾರು ಅಧಿವೇಶನ ಮುಗಿದು ಕೇವಲ ಒಂದು ತಿಂಗಳ ನಂತರ ವಿಶೇಷ ಅಧಿವೇಶನವನ್ನು ಘೋಷಿಸುವ ಮೂಲಕ ಸರ್ಕಾರವು ತನ್ನ ಅಜೆಂಡಾವನ್ನು ನಿರ್ದಿಷ್ಟಪಡಿಸದೇ ಇರುವಾಗ, ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಚುರುಕುಗೊಂಡಿತ್ತು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ನಿಧಾನವಾಗಿ ಮತ್ತು ಸ್ಥಿರವಾಗಿ ಹೆಚ್ಚಿದ್ದ ಹೊತ್ತಲ್ಲೇ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟಿದೆ.1957 ರ ಎರಡನೇ ಲೋಕಸಭಾ ಚುನಾವಣೆಯಲ್ಲಿ ಕೇವಲ 45 ಇದ್ದ ಮಹಿಳಾ ಅಭ್ಯರ್ಥಿಗಳ ಗುಂಪು 2019 ರಲ್ಲಿ 726 ಕ್ಕೆ ಏರಿಕೆ ಆಗಿದೆ. ಆದಾಗ್ಯೂ, ಸಂಸದರಲ್ಲಿ ಅವರ ಪಾಲು ಇದೇ ರೀತಿಯ ಹೆಚ್ಚಳವನ್ನು ಕಂಡಿಲ್ಲ.

1951 ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ 489 ಸ್ಥಾನಗಳಲ್ಲಿ ಕೇವಲ 22 ಮಹಿಳಾ ಸಂಸದರು (4.41%) ಆಯ್ಕೆಯಾದರು. 2019 ರ ಲೋಕಸಭೆ ಚುನಾವಣೆಗೆ 78 ಮಹಿಳಾ(14.36%) ಸಂಸದರು ಆಯ್ಕೆಯಾಗಿದ್ದಾರೆ.

ಮಸೂದೆ ಏನು ಹೇಳುತ್ತದೆ?

ಮಸೂದೆಯು ಕಾಯಿದೆಯಾದ ನಂತರ 15 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆದರೆ ಅದರ ಅವಧಿಯನ್ನು ವಿಸ್ತರಿಸಬಹುದು. ಮುಖ್ಯವಾಗಿ, ಪ್ರತಿ ಡಿಲಿಮಿಟೇಷನ್ ಪ್ರಕ್ರಿಯೆ ನಂತರ ಮಹಿಳೆಯರಿಗೆ ಮೀಸಲಾದ ಸೀಟುಗಳನ್ನು ಸರದಿಯಲ್ಲಿ ನೀಡಲಾಗುತ್ತದೆ. ಆರು ಪುಟಗಳ ಮಸೂದೆಯು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಮತ್ತು ನೇರ ಚುನಾವಣೆಯ ಮೂಲಕ ಭರ್ತಿ ಮಾಡಲಾಗುವುದು ಎಂದು ಹೇಳುತ್ತದೆ. ಅಲ್ಲದೆ, ರಾಜ್ಯಸಭೆ ಅಥವಾ ರಾಜ್ಯ ವಿಧಾನ ಪರಿಷತ್ತಿಗೆ ಕೋಟಾ ಅನ್ವಯಿಸುವುದಿಲ್ಲ. ಕೋಟಾದೊಳಗೆ, ಮೂರನೇ ಒಂದು ಭಾಗದಷ್ಟು ಸೀಟುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇರುತ್ತದೆ.

ಮಸೂದೆಯು ಒಬಿಸಿಗಳಿಗೆ (ಇತರ ಹಿಂದುಳಿದ ವರ್ಗ) ಮೀಸಲಾತಿಯನ್ನು ಒಳಗೊಂಡಿಲ್ಲ, ಏಕೆಂದರೆ ಅಂತಹ ನಿಬಂಧನೆಯು ಶಾಸಕಾಂಗಕ್ಕೆ ಅಸ್ತಿತ್ವದಲ್ಲಿಲ್ಲ. ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯಂತಹ ಪಕ್ಷಗಳು ಮಹಿಳಾ ಕೋಟಾ ಮಸೂದೆಯನ್ನು ದಶಕಗಳಿಂದ ವಿರೋಧಿಸುತ್ತಿದ್ದವು.

ಈ ಮಸೂದೆಯು 2010ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಚಿಸಲಾದ ಮಹಿಳಾ ಮೀಸಲಾತಿ ಮಸೂದೆಯಂತೆಯೇ ಇದೆ. ಕೇವಲ, ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಕೋಟಾವನ್ನು ತರಲು ಎರಡು ತಿದ್ದುಪಡಿಗಳನ್ನು ಹೊಸ ಆವೃತ್ತಿಯಲ್ಲಿ ಕೈಬಿಡಲಾಗಿದೆ.

ಮಹಿಳಾ ಮೀಸಲಾತಿ ಮಸೂದೆಯ ನಿಬಂಧನೆಗಳು “ಸಂವಿಧಾನ (128ನೇ ತಿದ್ದುಪಡಿ) ಕಾಯಿದೆ 2023 ರ ಪ್ರಾರಂಭದ ನಂತರ ತೆಗೆದುಕೊಳ್ಳಲಾದ ಮೊದಲ ಜನಗಣತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಕ್ಷೇತ್ರಗಳ ಮರುವಿಂಗಡನೆ ನಂತರ ಜಾರಿಗೆ ಬರುತ್ತವೆ. ಆದರೆ ಡಿಲಿಮಿಟೇಶನ್ ಕಾಯ್ದೆಗೆ ಪ್ರತ್ಯೇಕ ಮಸೂದೆ ಮತ್ತು ಅಧಿಸೂಚನೆಯ ಅಗತ್ಯವಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

“239A, 330A ಮತ್ತು 332A ವಿಧಿಗಳ ನಿಬಂಧನೆಗಳಿಗೆ ಒಳಪಟ್ಟು, ಹೌಸ್ ಆಫ್ ದಿ ಪೀಪಲ್​​ನಲ್ಲಿ ಮಹಿಳೆಯರಿಗೆ ನೀಡುರುವ ಮೀಸಲಾತಿ ಸೀಟು ಸಂಸತ್ ಕಾನೂನಿನ ಮೂಲಕ ನಿರ್ಧರಿಸುವ ದಿನಾಂಕದವರೆಗೆ ಒಂದು ರಾಜ್ಯದ ಶಾಸಕಾಂಗ ಸಭೆ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮುಂದುವರಿಯುತ್ತದೆ” ಎಂದು ಮಸೂದೆ ಹೇಳುತ್ತದೆ.

ಪ್ರಸ್ತುತ, ಭಾರತದಲ್ಲಿ ಸಂಸತ್ ಮತ್ತು ಶಾಸಕಾಂಗಗಳಲ್ಲಿ ಮಹಿಳೆಯರು ಕೇವಲ 14 ಪ್ರತಿಶತವನ್ನು ಹೊಂದಿದ್ದಾರೆ, ಇದು ವಿಶ್ವದ ಸರಾಸರಿಗಿಂತ ತುಂಬಾ ಕಡಿಮೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Tue, 19 September 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು