ಪಾಕ್ ಬಳಸಿದ ಚೀನಾ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ, ಚೀನಾ ಹೇಳಿದ್ದೇನು?
ಭಾರತದೊಂದಿಗಿನ ಇತ್ತೀಚಿನ ಘರ್ಷಣೆಯಲ್ಲಿ ಪಾಕಿಸ್ತಾನ ಬಳಸಿದ್ದ ಚೀನಾದ ಶಸ್ತ್ರಾಸ್ತ್ರಗಳ ಪ್ರದರ್ಶನದ ಕುರಿತು ಪ್ರತಿಕ್ರಿಯಿಸಲು ಚೀನಾ ಸೇನೆ ಗುರುವಾರ ನಿರಾಕರಿಸಿದೆ.ಮಿಲಿಟರಿ ಸಂಘರ್ಷದಲ್ಲಿ ಚೀನಾ ಪಾಕಿಸ್ತಾನಕ್ಕೆ ವಾಯು ರಕ್ಷಣಾ ಮತ್ತು ಉಪಗ್ರಹ ಬೆಂಬಲವನ್ನು ನೀಡಿದೆ ಮತ್ತು ಚೀನಾದ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಲು ಕರ್ನಲ್ ನಿರಾಕರಿಸಿದ್ದಾರೆ. ಆ ಪ್ರಶ್ನೆಗೆ ಉತ್ತರಿಸದೆ ಭಾರತ ಮತ್ತು ಪಾಕಿಸ್ತಾನಗಳು ಬೇರ್ಪಡಿಸಲಾಗದ ನೆರೆಹೊರೆಯವರು ಎಂದು ಹೇಳಿದ್ದಾರೆ.

ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿ ಪಾಕಿಸ್ತಾನ(Pakistan) ಬಳಸಿದ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯಿಸಲು ಚೀನಾ ಸೇನೆ ನಿರಾಕರಿಸಿದೆ. ಚೀನಾ ರಕ್ಷಣಾ ಸಚಿವಾಲಯ ವಕ್ತಾರ ಕರ್ನಲ್ ಜಾಂಗ್ ಷಿಯೋಗಾಂಗ್ ಮಾತನಾಡಿ, ಭಾರತವು ಸ್ಫೋಟಗೊಳ್ಳದ PL-15E ಕ್ಷಿಪಣಿಯನ್ನು ವಶಪಡಿಸಿಕೊಂಡ ವರದಿಗಳನ್ನು ತಳ್ಳಿಹಾಕಿದ್ದಾರೆ.
ಎಸ್ಐಪಿಆರ್ಐ ವರದಿ ಪ್ರಕಾರ, ಚೀನಾ ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಾಗಿದ್ದು, 2020 ಮತ್ತು 2024ರ ನಡುವೆ ತನ್ನ ಮಿಲಿಟರಿ ಉಪಕರಣಗಳಲ್ಲಿ ಶೇ.81ರಷ್ಟು ಪೂರೈಸುತ್ತಿದೆ. ಇವುಗಳಲ್ಲಿ ಫೈಟರ್ಜೆಟ್, ಕ್ಷಿಪಣಿಗಳು, ರಾಡಾರ್ಗಳು ಮತ್ತು ಜಲಾಂತಗರ್ಗಮಿ ನೌಕೆಗಳು ಸೇರಿವೆ. ಚೀನಾ ಮತ್ತು ಪಾಕಿಸ್ತಾನ ಕೂಡ ಜೆಎಫ್ -17 ಯುದ್ಧವಿಮಾನವನ್ನು ಒಟ್ಟಾಗಿ ನಿರ್ಮಿಸುತ್ತವೆ , ಇದು ಪಾಕಿಸ್ತಾನದ ವಾಯುಪಡೆಯ ಪ್ರಮುಖ ಭಾಗವಾಗಿದೆ.
ಮಿಲಿಟರಿ ಸಂಘರ್ಷದಲ್ಲಿ ಚೀನಾ ಪಾಕಿಸ್ತಾನಕ್ಕೆ ವಾಯು ರಕ್ಷಣಾ ಮತ್ತು ಉಪಗ್ರಹ ಬೆಂಬಲವನ್ನು ನೀಡಿದೆ ಮತ್ತು ಚೀನಾದ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಲು ಕರ್ನಲ್ ನಿರಾಕರಿಸಿದ್ದಾರೆ. ಎರಡೂ ಕಡೆಯವರು ಶಾಂತಿ ಮತ್ತು ಸಂಯಮವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಪರಿಸ್ಥಿತಿ ಇನ್ನಷ್ಟು ಜಟಿಲಗೊಳ್ಳದಂತೆ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಪಿಒಕೆಯನ್ನು ವಾಪಾಸ್ ಕೊಟ್ಟ ನಂತರವೇ ಮುಂದಿನ ಮಾತುಕತೆ; ಪಾಕಿಸ್ತಾನದ ಪ್ರಧಾನಿಗೆ ಭಾರತ ಪ್ರತಿಕ್ರಿಯೆ
ಮೇ 7-10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಂತರ ಚೀನಾದ ರಕ್ಷಣಾ ಸಚಿವಾಲಯದ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ. ಶಾಶ್ವತ ಕದನ ವಿರಾಮ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಚೀನಾ ತನ್ನ ಕಡೆಯಿಂದ ರಚನಾತ್ಮಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸಲು ಸಿದ್ಧವಿದೆ ಎಂದು ಜಾಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಚೀನಾದ ರಕ್ಷಣಾ ಸಚಿವಾಲಯ ತಿಂಗಳಿಗೊಮ್ಮೆ ಪತ್ರಿಕಾಗೋಷ್ಠಿ ನಡೆಸುತ್ತದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಆಗಿದ್ದೇನು? ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ನಂತರ, ಭಾರತವು ಮೇ 6-7ರ ಮಧ್ಯರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಭಯೋತ್ಪಾದಕರ ನೆಲೆ ಮೇಲೆ ನಿಖರವಾದ ದಾಳಿ ನಡೆಸಿತ್ತು.
ಇದಾದ ನಂತರ, ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಭಾರತ ಪಾಕಿಸ್ತಾನಕ್ಕೆ ಬಲವಾದ ಪ್ರತ್ಯುತ್ತರ ನೀಡಿತ್ತು. ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ನಡೆದ ಮಾತುಕತೆಯ ನಂತರ ಮಿಲಿಟರಿ ಸಂಘರ್ಷವನ್ನು ನಿಲ್ಲಿಸುವ ಒಪ್ಪಂದಕ್ಕೆ ಬರಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ