ಪಿಒಕೆಯನ್ನು ವಾಪಾಸ್ ಕೊಟ್ಟ ನಂತರವೇ ಮುಂದಿನ ಮಾತುಕತೆ; ಪಾಕಿಸ್ತಾನದ ಪ್ರಧಾನಿಗೆ ಭಾರತ ಪ್ರತಿಕ್ರಿಯೆ
ಪಿಒಕೆ ಹಿಂದಿರುಗಿದ ನಂತರವೇ ಮಾತುಕತೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾರತದೊಂದಿಗೆ ಮಾತುಕತೆ ಪ್ರಸ್ತಾವನೆಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ನೆರೆಯ ರಾಷ್ಟ್ರ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಪ್ರದೇಶಗಳನ್ನು ಖಾಲಿ ಮಾಡಿದ ನಂತರವೇ ಪಾಕಿಸ್ತಾನದೊಂದಿಗಿನ ಮಾತುಕತೆ ಪುನರಾರಂಭವಾಗುತ್ತದೆ ಎಂಬ ತನ್ನ ನಿಲುವನ್ನು ಭಾರತ ಇಂದು ಪುನರುಚ್ಚರಿಸಿದೆ. ಸಿಂಧೂ ಜಲ ಒಪ್ಪಂದದ ಕುರಿತು ಮಾತನಾಡುತ್ತಾ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ವಿಶ್ವಾಸಾರ್ಹವಾಗಿ ಮತ್ತು ಬದಲಾಯಿಸಲಾಗದಂತೆ ತ್ಯಜಿಸುವವರೆಗೆ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ನವದೆಹಲಿ, ಮೇ 29: ನೆರೆಯ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ (ಪಿಒಕೆ) ಪ್ರದೇಶಗಳನ್ನು ಖಾಲಿ ಮಾಡಿದ ನಂತರವೇ ಪಾಕಿಸ್ತಾನದೊಂದಿಗಿನ ಮಾತುಕತೆ ಪುನರಾರಂಭವಾಗುತ್ತದೆ ಎಂಬ ತನ್ನ ನಿಲುವನ್ನು ಭಾರತ ಇಂದು ಪುನರುಚ್ಚರಿಸಿದೆ. ಪಾಕಿಸ್ತಾನದ (Pakistan) ಪ್ರಧಾನಿ ಭಾರತದೊಂದಿಗೆ ಮಾತುಕತೆಗೆ ಇಚ್ಛೆ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆ ದ್ವಿಪಕ್ಷೀಯವಾಗಿರುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಪುನರುಚ್ಚರಿಸಿದ್ದಾರೆ.
“ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧದ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಯಾವುದೇ ಒಪ್ಪಂದವು ದ್ವಿಪಕ್ಷೀಯವಾಗಿರಬೇಕು. ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ. ಅವರು ಪಿಒಕೆಯನ್ನು ಭಾರತಕ್ಕೆ ಹಸ್ತಾಂತರಿಸಬೇಕಾಗಿದೆ” ಎಂದು ಜೈಸ್ವಾಲ್ ಹೇಳಿದರು.
#WATCH | Delhi: MEA Spokesperson Randhir Jaiswal says, “… As far as our engagement with Pakistan is concerned, our stand has been clear. Any engagement has to be bilateral. We would like to reiterate that terrorism and talks cannot go together. They need to hand over to India,… pic.twitter.com/ew2AKiTHZ9
— ANI (@ANI) May 29, 2025
ಇದನ್ನೂ ಓದಿ: Video: ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು: ಪ್ರಧಾನಿ ಮೋದಿ
ಇರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕ್ ಪಿಎಂ ಶೆಹಬಾಜ್ ಷರೀಫ್ ಇತ್ತೀಚೆಗೆ ಪಾಕಿಸ್ತಾನವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದ್ದರು. ಆದರೆ, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಿ ಪಿಒಕೆಯನ್ನು ಹಿಂದಿರುಗಿಸಿದ ನಂತರವೇ ಮಾತುಕತೆ ಸಾಧ್ಯ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








