Benjamin Netanyahu: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು, ಯಾರಿವ್ ಕೈಗೆ ತಾತ್ಕಾಲಿಕ ಅಧಿಕಾರ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವ ಇದಕ್ಕಿಂತಲೂ ಮೀರಿದೆ, ತಪಾಸಣೆ ಸಮಯದಲ್ಲಿ ನೆತನ್ಯಾಹು ಅವರಿಗೆ ನಿದ್ರಾಜನಕ ಔಷಧ ನೀಡಲಾಗುವುದು. ಇದೇ ಕಾರಣಕ್ಕೆ ದೇಶದ ಅಧಿಕಾರವನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರಿಸಲಾಗಿದೆ. ನೇತನ್ಯಾಹು ಅನುಪಸ್ಥಿತಿಯಲ್ಲಿ, ಉಪ ಪ್ರಧಾನಿ ಯಾರಿವ್ ಲೆವಿನ್ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಮಾಡಲಾಗಿದೆ.

ಜೆರುಸಲೇಮ್, ಮೇ 30: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದೆಡೆ ಗಾಜಾ ಯುದ್ಧದ ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮದ ಕುರಿತು ಮಾತುಕತೆ ನಡೆಯುತ್ತಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಪ್ರಧಾನಿ ಕಚೇರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ನೆತನ್ಯಾಹು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಂದಾಗ, ದೇಶದಲ್ಲಿ ಕೋಲಾಹಲ ಉಂಟಾಯಿತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವ ಇದಕ್ಕಿಂತಲೂ ಮೀರಿದೆ, ತಪಾಸಣೆ ಸಮಯದಲ್ಲಿ ನೆತನ್ಯಾಹು ಅವರಿಗೆ ನಿದ್ರಾಜನಕ ಔಷಧ ನೀಡಲಾಗುವುದು. ಇದೇ ಕಾರಣಕ್ಕೆ ದೇಶದ ಅಧಿಕಾರವನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರಿಸಲಾಗಿದೆ. ನೆತನ್ಯಾಹು ಅನುಪಸ್ಥಿತಿಯಲ್ಲಿ, ಉಪ ಪ್ರಧಾನಿ ಯಾರಿವ್ ಲೆವಿನ್ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಮಾಡಲಾಗಿದೆ.
ಅಂದರೆ ನೆತನ್ಯಾಹು ಆಪರೇಷನ್ ಥಿಯೇಟರ್‌ನಲ್ಲಿ ಇರುವವರೆಗೂ, ದೇಶದ ಉನ್ನತ ನಾಯಕತ್ವವು ಅವರ ಕೈಯಲ್ಲಿಯೇ ಇರುತ್ತದೆ. ಈ ಸಮಯದಲ್ಲಿ, ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರಿಗೆ ಭದ್ರತಾ ವಿಷಯಗಳ ಜವಾಬ್ದಾರಿಯನ್ನು ನೀಡಲಾಗಿದೆ. ನೇತನ್ಯಾಹು ಅನುಪಸ್ಥಿತಿಯಲ್ಲಿ ಅವರು ಭದ್ರತಾ ಸಂಪುಟವನ್ನು ಮುನ್ನಡೆಸಲಿದ್ದಾರೆ.
ಮತ್ತಷ್ಟು ಓದಿ: Airstrike: ಗಾಜಾ, ಲೆಬನಾನ್ ಮತ್ತು ಸಿರಿಯಾ ಮೇಲೆ ಇಸ್ರೇಲ್ನಿಂದ ವಾಯುದಾಳಿ
ನೆತನ್ಯಾಹು ಶಸ್ತ್ರಚಿಕಿತ್ಸೆಗೆ ಒಳಪಡುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2023ರಲ್ಲಿ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಾರ್ಚ್ 2024 ರಲ್ಲಿ, ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಅವರಿಗೆ ಸಂಪೂರ್ಣ ಅನಸ್ತೇಶಿಯಾ ನೀಡಲಾಗಿತ್ತು. ಅದೇ ಮೇ ತಿಂಗಳಲ್ಲಿ, ನೇತನ್ಯಾಹು ತೀವ್ರ ಜ್ವರದಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಕೆಲವು ದಿನಗಳವರೆಗೆ ಕೆಲಸಕ್ಕೆ ಹೋಗಿರಲಿಲ್ಲ. ಹೃದಯ ಸಮಸ್ಯೆಯೂ ಅವರನ್ನು ಬಾಧಿಸುತ್ತಿದೆ.
2023 ರಲ್ಲಿ, ನೆತನ್ಯಾಹು ಅವರಿಗೆ ಪೇಸ್‌ಮೇಕರ್ ಅಳವಡಿಸಲಾಯಿತು. ಮೊದಲು, ನಿರ್ಜಲೀಕರಣದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ನಂತರ ವೈದ್ಯರು ಅವರಿಗೆ ಈಗಾಗಲೇ ಹೃದಯ ಸಮಸ್ಯೆ ಇದೆ ಎಂದು ಹೇಳಿದರು. ನಿಯಮಗಳ ಪ್ರಕಾರ ಪ್ರಧಾನಿ ಪ್ರತಿ ವರ್ಷ ವೈದ್ಯಕೀಯ ವರದಿಯನ್ನು ಸಾರ್ವಜನಿಕಗೊಳಿಸಬೇಕಾಗಿದ್ದರೂ, ನೆತನ್ಯಾಹು 2016 ರಿಂದ 2023 ರವರೆಗೆ ಯಾವುದೇ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಜನವರಿ 2023 ರಲ್ಲಿ ಬಂದ ವರದಿಯಲ್ಲಿ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿತ್ತು, ಆದರೆ 2024 ರಲ್ಲಿ ಇಲ್ಲಿಯವರೆಗೆ ಯಾವುದೇ ವರದಿ ಹೊರಬಂದಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ