AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಲೋಕೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಕೇಸ್ ಬೆನ್ನಲ್ಲೇ ರಾಮ ಮಂದಿರ ಮಠವೂ ಧ್ವಂಸ

ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪದ ಮೇಲೆ ಸ್ವಯಂ ಘೋಷಿತ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆ ನಂತರ ಇದೀಗ, ರಾಯಬಾಗ ತಾಲ್ಲೂಕು ಆಡಳಿತವು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ತಾಲೂಕಿನ ಮೇಖಳಿಯಲ್ಲಿರುವ ಅಕ್ರಮ ರಾಮಮಂದಿರ ಮಠವನ್ನು ನೆಲಸಮ ಮಾಡಿದೆ.

ಬೆಳಗಾವಿ: ಲೋಕೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಕೇಸ್ ಬೆನ್ನಲ್ಲೇ ರಾಮ ಮಂದಿರ ಮಠವೂ ಧ್ವಂಸ
ಲೋಕೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಕೇಸ್ ಬೆನ್ನಲ್ಲೇ ರಾಮ ಮಂದಿರ ಮಠವೂ ಧ್ವಂಸ
Sahadev Mane
| Edited By: |

Updated on: May 30, 2025 | 11:51 AM

Share

ಬೆಳಗಾವಿ, ಮೇ 30: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಮಠವನ್ನು (Ram Mandir Mutt) ಗುರುವಾರ ಸ್ಥಳೀಯಾಡಳಿತ ಧ್ವಂಸಗೊಳಿಸಿದೆ. ರಾಮನ ಆರಾಧನೆ ನಡೆಯುತ್ತಿದ್ದ ಜಾಗದಲ್ಲಿ ಗುರುವಾರ ಜೆಸಿಬಿಗಳ ಘರ್ಜನೆ ಕೇಳಿಸಿತು. ಅಪಹರಣ ಮತ್ತು ಅತ್ಯಾಚಾರ ಆರೋಪದಲ್ಲಿ ಮಠದ ಲೋಕೇಶ್ವರ ಮಹಾರಾಜ ಸ್ವಾಮಿಯನ್ನು (Lokeshwara Swamiji) ಕಳೆದ ವಾರ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಮಠ ಕೂಡ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಮಠವನ್ನು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್, ತಹಶಿಲ್ದಾರ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆದಿದೆ.

ಲೋಕೇಶ್ವರ ಮಹಾರಾಜ ಸ್ವಾಮಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ 8-10 ವರ್ಷದ ಹಿಂದೆ ಮಠ ನಿರ್ಮಾಣ ಮಾಡಿ ರಾಮ ಮಂದಿರ ಎಂದು ಹೆಸರಿಟ್ಟಿದ್ದರು. ಆದರೆ, ಅಲ್ಲಿ ಮಾಡಬಾರದ ಕೆಲಸ ಮಾಡುವುದರ ಜೊತೆಗೆ ಬಾಲಕಿಯನ್ನು ರೇಪ್ ಮಾಡಿದ ಕೇಸ್ ಕೂಡ ಅವರ ವಿರುದ್ಧ ದಾಖಲಾಗಿದೆ.

ಸ್ವಾಮಿಯ ಬಂಧನವಾದ ಬೆನ್ನಲ್ಲೇ, ‘ಇಂತಹ ಸ್ವಾಮಿ ನಮ್ಮ ಊರಿಗೆ ಬರುವುದು ಬೇಡ. ಯಾವುದೇ ಕಾರಣಕ್ಕೂ ಆತನನ್ನು ನಮ್ಮೂರು ಸೇರಿಸಲು ಬಿಡಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ
Image
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ: ಶಾಲೆಗಳಿಗೆ ಇಂದು ರಜೆ
Image
ಕರ್ನಾಟಕದಲ್ಲಿ ಜೂನ್​ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್​
Image
ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಕೊಲೆ ಬೆದರಿಕೆ
Image
ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್​​

ಸರ್ಕಾರಿ ಜಾಗ ಒತ್ತುವರಿ ಮಾಡಿ ಮಠ ಕಟ್ಟಿದ್ದ ಸ್ವಾಮಿ

ಲೋಕೇಶ್ವರ ಸ್ವಾಮಿ ಕಲಬುರಗಿಯಿಂದ ಇಲ್ಲಿಗೆ ಬಂದು ಸರ್ಕಾರಿ ಜಾಗವಾದ ಸರ್ವೇ ನಂಬರ್ 225ರಲ್ಲಿ ಎಂಟು ಎಕರೆ ಜಾಗದಲ್ಲಿ ರಾಮ ಮಂದಿರ ಹಾಗೂ ಮಠವನ್ನ ಕಟ್ಟಿ ಉಳಿದುಕೊಂಡಿದ್ದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಬಗ್ಗೆ ಕಲ ವರ್ಷದ ಹಿಂದೆ ತಹಶಿಲ್ದಾರ್ ಅವರ ಗಮನಕ್ಕೆ ಬಂದಿತ್ತು. ಇದಾದ ಬಳಿಕ ಮಠ ತೆರವು ಮಾಡುವಂತೆ ಹಲವು ಬಾರಿ ಸ್ವಾಮಿಗೆ ನೋಟಿಸ್ ಕೂಡ ನೀಡಿದ್ದರು. ಆದರೆ, ನೋಟಿಸ್ ಅನ್ನು ಸ್ವಾಮಿ ಕ್ಯಾರೇ ಮಾಡಿರಲಿಲ್ಲ.

ಇದನ್ನೂ ಓದಿ: ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್​​

ಈ ನಡುವೆ ಸ್ವಾಮಿ ರೇಪ್ ಕೇಸ್​​ನಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆಯೇ ಖುದ್ದು ರಾಯಭಾಗ ತಹಶಿಲ್ದಾರ್ ಸುರೇಶ್ ಮುಂಜೆ ಸಮ್ಮುಖದಲ್ಲಿ ಕಟ್ಟಡ ಕೆಡವಲಾಯಿತು. ಪೊಲೀಸ್ ಭದ್ರತೆಯಲ್ಲಿ ಮೂರು ಜೆಸಿಬಿಗಳಿಂದ ಸಂಪೂರ್ಣವಾಗಿ ಮಠವನ್ನು ಧ್ವಂಸ ಮಾಡಲಾಗಿದೆ. ಸರ್ಕಾರಿ ಜಾಗವನ್ನು ಮುಂದಿನ ದಿನಗಳಲ್ಲಿ ಹೆಸ್ಕಾಂ ಇಲಾಖೆಗೆ ಬಿಟ್ಟು ಕೊಡುವುದಾಗಿ ತಹಶಿಲ್ದಾರ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ