AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಆರ್ಭಟಕ್ಕೆ ಮಂಗಳೂರಿನಲ್ಲಿ ಪ್ರವಾಹ, ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ

ಮಳೆ ಆರ್ಭಟಕ್ಕೆ ಮಂಗಳೂರಿನಲ್ಲಿ ಪ್ರವಾಹ, ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: May 30, 2025 | 10:59 AM

Share

Mangalore rain havoc: ಮಂಗಳೂರು ಮಳೆ ವಿಡಿಯೋ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಉಳ್ಳಾಲದ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಮನೆಗಳು ಜಲಾವೃತಗೊಂಡಿವೆ. ವಾಹನಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ವಿಡಿಯೋ ಇಲ್ಲಿದೆ.

ಮಂಗಳೂರು, ಮೇ 30: ಮಂಗಳೂರಿನಲ್ಲಿ ಹಾಗೂ ಉಳ್ಳಾಲ ಪರಿಸರದಲ್ಲಿ ಗುರುವಾರ ತಡರಾತ್ರಿಯಿಂದಲೂ ಧಾರಕಾರ ಮಳೆಯಾಗುತ್ತಿದೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾ‌ರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಮನೆಗಳು, ಕಾರುಗಳು, ಬೈಕ್​ಗಳು ಎಲ್ಲವೂ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಮಂಗಳೂರು: ಭಾರಿ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು, ಅವಶೇಷಗಳಡಿ ಸಿಲುಕಿದ ಐವರ ರಕ್ಷಣೆಗೆ ಕಾರ್ಯಾಚರಣೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ