AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ಹಾಸನ್ ಲೈನ್​ಗೂ ಬರ್ತಿಲ್ಲ, ಲೈನ್​ಗೂ ಸಿಕ್ತಿಲ್ಲ; ‘ಥಗ್ ಲೈಫ್’ ಭವಿಷ್ಯ ಏನು?

ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾಡಿದ ಅವಮಾನಕರ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಕರ್ನಾಟಕ ಫಿಲ್ಮ್ ಚೇಂಬರ್ ಅವರ ಚಿತ್ರ ‘ಥಗ್ ಲೈಫ್’ ಬಹಿಷ್ಕಾರ ಹಾಕುವುದಾಗಿ ಘೋಷಿಸಿದೆ. ಚೇಂಬರ್ ಅಧ್ಯಕ್ಷರು ಕಮಲ್ ಹಾಸನ್ ಅವರಿಂದ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಚಿತ್ರ ಪ್ರದರ್ಶನಕ್ಕೆ ಅಸಹಕಾರ ನೀಡುವುದಾಗಿ ಚೇಂಬರ್ ಎಚ್ಚರಿಕೆ ನೀಡಿದೆ.

ಕಮಲ್ ಹಾಸನ್ ಲೈನ್​ಗೂ ಬರ್ತಿಲ್ಲ, ಲೈನ್​ಗೂ ಸಿಕ್ತಿಲ್ಲ; ‘ಥಗ್ ಲೈಫ್’ ಭವಿಷ್ಯ ಏನು?
ಕಮಲ್ ಹಾಸನ್
ರಾಜೇಶ್ ದುಗ್ಗುಮನೆ
|

Updated on:May 30, 2025 | 11:55 AM

Share

‘ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂಬ ನಟ ಕಮಲ್ ಹಾಸನ್ (Kamal Haasan) ಅವರ ಅಜ್ಞಾನದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಅವರ ಮುಂಬರುವ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡದೆ ಇರುವ ಬಗ್ಗೆಯೂ ಚರ್ಚೆ ನಡೆದಿದೆ. ಕಮಲ್ ಹಾಸನ್ ಬಳಿ ಕ್ಷಮೆ ಕೇಳಿಸೋದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಹೇಳಿದ್ದರು. ಆದರೆ, ಕಮಲ್ ಹಾಸನ್ ಈವರೆಗೆ ಸಂಪರ್ಕಕ್ಕೆ ಸಿಕ್ಕೇ ಇಲ್ಲ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿರೋ ನರಸಿಂಹಲು ಅವರು, ‘ಕಮಲ್ ಹಾಸನ್ ಅವರನ್ನು ಸಂಪರ್ಕಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ತಮಿಳು ಫಿಲ್ಮ್​ ಚೇಂಬರ್ ಅಧ್ಯಕ್ಷರನ್ನು ಸಂಪರ್ಕಿಸಿದ್ದೇವೆ. ನಾವು ಇಂದು ಇ-ಮೇಲ್ ಕಳುಹಿಸುತ್ತೇವೆ. ಈ ವಿಷಯವನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ಬಿಡಲ್ಲ. ಕ್ಷಮಾಪಣೆ ಕೇಳುವವರೆಗೂ ನಾವು ಬಿಡಲ್ಲ’ ಎಂದಿದ್ದಾರೆ ಅವರು. ಈ ಮೂಲಕ ಕಮಲ್ ಹಾಸನ್ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ. ಕ್ಷಮೆ ಕೇಳಲು ಅವರು ಸಿದ್ಧರಿಲ್ಲ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.

‘ದಿ ಕೇರಳ ಸ್ಟೋರಿ’ ಪಶ್ಚಿಮ ಬಂಗಾಳದಲ್ಲಿ ಪ್ರದರ್ಶನ ಕಾಣದಂತೆ ಸರ್ಕಾರ ಬ್ಯಾನ್ ಮಾಡಿತ್ತು. ಆದರೆ, ಕೋರ್ಟ್​​ ಈ ಬ್ಯಾನ್​ನ ತೆಗೆದು ಹಾಕಿತು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿತ್ತು. ಹಾಗಾದರೆ, ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ನರಸಿಂಹಲು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ
Image
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
Image
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
Image
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ಬ್ಯಾನ್ ಮಾಡುತ್ತೇನೆ ಎಂದು ನಾವು ಹೋಗುತ್ತಿಲ್ಲ. ಹಾಗೆ ಮಾಡಲು ಕಾನೂನಿನಲ್ಲಿ ಅವಕಾಶವೂ ಇಲ್ಲ. ಆದರೆ, ನಾವು ಅಸಹಕಾರ ತೋರಿಸತ್ತೇವೆ. ಹಂಚಿಕೆದಾರರೇ ಚಿತ್ರವನ್ನು ಪ್ರದರ್ಶನ ಮಾಡಲು ಮುಂದೆ ಬರದೇ ಇದ್ದಾಗ ಕಾನೂನಿನ ತೊಂದರೆ ಎಂಬುದೇ ಬರೋದಿಲ್ಲ. ಕ್ಷಮೆ ಕೇಳುವವರೆಗೆ ಈ ಅಸಹಕಾರ ಇರುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:  ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಯಾಚಿಸಿದರೂ ಅವರು ಮಾತಾಡಿದ್ದು ತಪ್ಪು: ಸುಮಲತಾ ಅಂಬರೀಶ್

ರಜನಿಕಾಂತ್ ಹಾಗೂ ಸತ್ಯರಾಜ್ ಅವರು ಕನ್ನಡಿಗರಿಗೆ ಅವಮಾನ ಮಾಡಿ ಆ ಬಳಿಕ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಕ್ಷಮೆ ಕೇಳಿದ ಉದಾಹರಣೆ ಇದೆ. ಕಮಲ್ ಹಾಸನ್ ಕೂಡ ಕ್ಷಮೆ ಕೇಳಬೇಕು ಎಂಬುದು ಫಿಲ್ಮ್ ಚೇಂಬರ್ ಆಗ್ರಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Fri, 30 May 25