AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamal Haasan: ಖ್ಯಾತ ನಟ ಕಮಲ್​ ಹಾಸನ್​ ಒಟ್ಟು ಆಸ್ತಿ ಮೌಲ್ಯ ಎಷ್ಟು? ಕಾರು, ಬಂಗಲೆ ಬಗ್ಗೆ ಇಲ್ಲಿದೆ ಪೂರ್ತಿ ವಿವರ

Kamal Haasan Net worth: ಹಲವು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿ ಆಗಿರುವ ನಟ, ನಿರ್ಮಾಪಕ, ನಿರ್ದೇಶಕ ಕಮಲ್​ ಹಾಸನ್​ ಅವರು ಇಂದಿಗೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರು ಅನೇಕ ಐಷಾರಾಮಿ ವಸ್ತುಗಳನ್ನು ಹೊಂದಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಅವರು ಆಸ್ತಿ ಖರೀದಿಸಿದ್ದಾರೆ.

Kamal Haasan: ಖ್ಯಾತ ನಟ ಕಮಲ್​ ಹಾಸನ್​ ಒಟ್ಟು ಆಸ್ತಿ ಮೌಲ್ಯ ಎಷ್ಟು? ಕಾರು, ಬಂಗಲೆ ಬಗ್ಗೆ ಇಲ್ಲಿದೆ ಪೂರ್ತಿ ವಿವರ
ಕಮಲ್ ಹಾಸನ್
ಮದನ್​ ಕುಮಾರ್​
|

Updated on: Nov 07, 2023 | 11:25 AM

Share

ನಟ ಕಮಲ್​ ಹಾಸನ್​ ಅವರು ಇಂದು (ನವೆಂಬರ್​ 7) ಜನ್ಮದಿನ (Kamal Haasan Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಕಳೆದ ವರ್ಷ ಕಮಲ್​ ಹಾಸನ್​ ನಟಿಸಿದ್ದ ‘ವಿಕ್ರಮ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿತು. ಈಗ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಕಮಲ್​ ಹಾಸನ್ (Kamal Haasan)​ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಚರ್ಚೆ ಆಗುತ್ತಿದೆ. ಪ್ರತಿ ಸಿನಿಮಾಗೆ ಕೋಟ್ಯಂತರ ಸಂಭಾವನೆ ಪಡೆಯುವ ಕಮಲ್​ ಹಾಸನ್​ ಅವರು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ (Kamal Haasan Net worth) ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಒಂದು ಮೂಲದ ಪ್ರಕಾರ, ಕಮಲ್​ ಹಾಸನ್​ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 177 ಕೋಟಿ ರೂಪಾಯಿ. ‘ವಿಕ್ರಮ್​’ ಸಿನಿಮಾದ ಗೆಲುವಿನ ಬಳಿಕ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಈಗ ಅವರ ‘ಕಲ್ಕಿ 2898 ಎಡಿ’, ‘ಥಗ್​ ಲೈಫ್​’ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಕೂಡ ಆಗಿದ್ದಾರೆ. ಅದರಿಂದಲೂ ಅವರಿಗೆ ಆದಾಯ ಬರುತ್ತದೆ. ಬರೀ ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ನಿರೂಪಕನಾಗಿಯೂ ಅವರು ಆ್ಯಕ್ಟೀವ್​ ಆಗಿದ್ದಾರೆ. ರಾಜಕೀಯದಲ್ಲೂ ಅವರಿಗೆ ಆಸಕ್ತಿ ಇದೆ.

ಇದನ್ನೂ ಓದಿ: ಮಾಸ್ ಆಗಿರಲಿದೆ ಕಮಲ್​ ಹಾಸನ್-ಮಣಿರತ್ನಂ ಹೊಸ ಸಿನಿಮಾ ‘ಥಗ್ ಲೈಫ್’; ಇಲ್ಲಿದೆ ಟೀಸರ್  

17 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿಯೂ ಸೇರಿದಂತೆ ಕಮಲ್​ ಹಾಸನ್​ ಬಳಿ ಒಟ್ಟು 130 ಕೋಟಿ ರೂಪಾಯಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಚೆನ್ನೈನಲ್ಲಿ 19.5 ಕೋಟಿ ರೂಪಾಯಿ ಬೆಲೆ ಬಾಳುವ ಅಪಾರ್ಟ್​ಮೆಂಟ್​ ಹೊಂದಿದ್ದಾರೆ. ಚೆನೈನಲ್ಲಿ ಅವರು ಹೊಂದಿರುವ ಎಲ್ಲ ವಾಣಿಜ್ಯ ಮಳಿಗೆಗಳ ಒಟ್ಟು ಮೌಲ್ಯ 92.5 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇದಲ್ಲದೇ ಲಂಡನ್​ನಲ್ಲಿಯೂ ಕಮಲ್​ ಹಾಸನ್​ ಅವರು ಮನೆ ಹೊಂದಿದ್ದಾರೆ. ಅದರ ಬೆಲೆ 2.5 ಕೋಟಿ ರೂಪಾಯಿ. ಕುಟುಂಬದವರ ಜೊತೆ ಆಗಾಗ ಅವರು ಲಂಡನ್​ಗೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ: Indian 2: ಭರ್ಜರಿಯಾಗಿದೆ ‘ಇಂಡಿಯನ್ 2’ ಇಂಟ್ರೋ ವಿಡಿಯೋ; ಐದು ಭಾಷೆಗಳಲ್ಲಿ ಕಮಲ್​ ಹಾಸನ್​ ಅಬ್ಬರ

ಕಾರುಗಳ ಬಗ್ಗೆಯೂ ಕಮಲ್​ ಹಾಸನ್​ ಅವರಿಗೆ ಕ್ರೇಜ್​ ಇದೆ. ಬಿಎಂಡಬ್ಲೂ 730 ಎಲ್​ಡಿ, ಲೆಕ್ಸಸ್​ ಎಲ್​ಎಕ್ಸ್​ 570 ಕಾರುಗಳು ಕಮಲ್​ ಹಾಸನ್​ ಬಳಿ ಇವೆ. ಇವುಗಳ ಬೆಲೆ ಬರೋಬ್ಬರಿ 3.69 ಕೋಟಿ ರೂಪಾಯಿ. ಮರ್ಸಿಡಿಸ್​ ಬೆಂಜ್​ ಇ 220 ಕಾರನ್ನು ಕೂಡ ಅವರ ಹೊಂದಿದ್ದಾರೆ. 80 ಲಕ್ಷ ರೂಪಾಯಿ ಮೌಲ್ಯದ ಹಮ್ಮರ್​ ಎಚ್​3, 60 ಲಕ್ಷ ರೂಪಾಯಿಯ ರೇಂಜ್​ ರೋವರ್​ ಕಾರು ಅವರ ಬಳಿ ಇದೆ. ಕಮಲ್​ ಹಾಸನ್​ ಅವರಿಗೆ ಈಗ 69 ವರ್ಷ ವಯಸ್ಸು. ದಣಿವರಿಯದ ಯುವಕನಂತೆ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರ ಮಕ್ಕಳಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್​ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ