ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಯಾಚಿಸಿದರೂ ಅವರು ಮಾತಾಡಿದ್ದು ತಪ್ಪು: ಸುಮಲತಾ ಅಂಬರೀಶ್
ಥಗ್ ಲೈಫ್ ಸಿನಿಮಾ ಬಿಡುಗಡೆ ವಿಚಾರದಲ್ಲಿ ಮಾತಾಡಿದ ಸುಮಲತಾ, ಸಿನಿಮಾ ಯಾವುದೇ ಅಗಿರಲಿ, ಅದತಲ್ಲಿ ಒಬ್ಬನ ಪರಿಶ್ರಮ ಮಾತ್ರ ಇರಲ್ಲ, ನೂರಾರು ಜನ ಜೊತಗೂಡಿ ಕೆಲಸ ಮಾಡಿದಾಗ ಮಾತ್ರ ಒಂದು ಸಿನಿಮಾ ತಯಾರಾಗುತ್ತದೆ, ಬೇರೆ ಬೇರೆ ಭಾಷೆ ಮಾತಾಡುವವರ ಇನ್ವಾಲ್ವ್ಮೆಂಟ್ ಇರುತ್ತದೆ, ಹಾಗಾಗಿ ಕಮಲ್ ಹಾಸನ್ ಚಿತ್ರವನ್ನು ಬ್ಯಾನ್ ಮಾಡುವುದು ಚರ್ಚೆಯ ವಿಷಯವಾಗಿದೆ ಎಂದರು.
ಮಂಡ್ಯ, ಮೇ 29: ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ (Kamal Hassan) ಮಾತಾಡಿದ್ದು ತಪ್ಪು, ಮಾತಾಡುವ ಮೊದಲು ಅವರು ಯೋಚನೆ ಮಾಡಬೇಕಿತ್ತು, ನಟ ಹೇಳಿದ್ದು ಅವರ ಅಭಿಪ್ರಾಯ, ಅವರೇನೂ ಭಾಷಾ ತಜ್ಞರಲ್ಲ, ಹಾಗಂತ ಅವರಾಡಿದ ಮಾತಿನಿಂದ ನಮ್ಮ ಭಾಷೆಯ ಘನತೆಗೇನೂ ಧಕ್ಕೆ ಬರಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದರು. ಕಮಲ್ ಹಾಸನ್ ಆಡಿದ ಮಾತನ್ನು ಕನ್ನಡಿಗರ್ಯಾರೂ ಒಪ್ಪಲ್ಲ, ತಾವಾಡಿದ ಮಾತಿಗೆ ಕಮಲ್ ಹಾಸನ್ ಕ್ಷಮೆ ಕೇಳಿದರೂ ಅಡಿದ ಮಾತು ತಪ್ಪೇ, ಭಾಷೆಗಳ ಉಗಮ, ಇತಿಹಾಸದ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ, ಹಾಗಾಗಿ ಗೊತ್ತಿಲ್ಲದ ವಿಚಾರಗಳನ್ನು ಮಾತಾಡಬಾರದು ಎಂದು ಸುಮಲತಾ ಹೇಳಿದರು.
ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

