ಮಂಗಳೂರು: ರಾಜೀನಾಮೆ ಹಿಂಪಡೆಯಲೊಪ್ಪದ ಕಾಂಗ್ರೆಸ್ ನಾಯಕರು, ಹಂತಕರು ಮತ್ತು ಪ್ರಚೋದಕರ ಬಂಧನದವರೆಗೆ ನಿರ್ಧಾರ ಬದಲಿಸಲ್ಲ
ಉಡುಪಿಯಲ್ಲಿ ಮಾಬ್ ಲಿಂಚಿಂಗ್ ಆದಾಗ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬರಲಿಲ್ಲ, ಆದರೆ ಸುಹಾಸ್ ಶೆಟ್ಟಿಯ ಕೊಲೆಯಾದಾಗ ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ಇಬ್ಬರೂ ಬರುತ್ತಾರೆ, 2-3 ಮುಸ್ಲಿಮರನ್ನು ತೆಗೆಯುತ್ತೇವೆ ಅಂತ ಹೇಳಿದ ಹಿಂದೂ ನಾಯಕರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಂಡಿದ್ದರೆ ಅಮಾಯಕ ಅಬ್ದುಲ್ ರೆಹಮಾನ್ ಕೊಲೆ ನಡೆಯುತ್ತಿರಲಿಲ್ಲ ಎಂದು ಮುಸ್ಲಿಂ ಮುಖಂಡರು ಹೇಳುತ್ತಾರೆ.
ಮಂಗಳೂರು, ಮೇ 29: ಅಬ್ದುಲ್ ರೆಹಮಾನ್ ಹತ್ಯೆಯ ಬಳಿಕ ಮಂಗಳೂರು ಕಾಂಗ್ರೆಸ್ನ ಮುಸ್ಲಿಂ ಮುಖಂಡರು ರೊಚ್ಚಿಗೆದ್ದಿದ್ದಾರೆ. ಪಕ್ಷದ ಹಿರಿಯ ನಾಯಕರು ಸಾಮೂಹಿಕ ರಾಜೀನಾಮೆ ಸಿದ್ದರಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಫೋನ್ ಮಾಡಿ ಶಾಂತಿ ನೆಲೆಸುವಂತೆ ಮಾಡುವ ಭರವಸೆ ನೀಡಿದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ನಮ್ಮ ಮಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಯುವ ನಾಯಕರು ಅಬ್ದುಲ್ ರೆಹಮಾನ್ ಕೊಲೆ ಮಾಡಿದವರನ್ನು ಮತ್ತು ಕೊಲೆಗೆ ಪ್ರಚೋದನೆ ನೀಡಿದವರನ್ನು ಬಂಧಿಸದ ಹೊರತು ತಮ್ಮ ರಾಜೀನಾಮೆ ಹಿಂಪಡೆಯಲ್ಲ ಎಂದು ಹೇಳುತ್ತಾರೆ. ಪಕ್ಷದ ನಾಯಕತ್ವದ ವಿರುದ್ಧ ಅವರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್, ಉಸ್ತುವಾರಿ ಸಚಿವ ಗುಂಡೂರಾವ್ ಬದಲಾವಣೆಗೆ ಮಂಗಳೂರು ಮುಸ್ಲಿಂ ಮುಖಂಡರ ಪಟ್ಟು: ಕಾಂಗ್ರೆಸ್ಗೆ ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

