ಸಿದ್ದರಾಮಯ್ಯ ಬೆಳಗ್ಗೆ ಹರಿಪ್ರಸಾದ್ ಮನೆಗೆ ಹೋಗಿದ್ದು ದಕ ಜಿಲ್ಲೆ ಕಾಂಗ್ರೆಸ್ ಪದಾಧಿಕಾರಿಗಳ ಮನವೊಲಿಸಲೇ?
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಬಣ್ಣಿಸುವ ಶಾಹುಲ್ ಹಮೀದ್, ಮುಂದಿನ ಒಂದು ವಾರದೊಳಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನೆಲೆಸುವಂತೆ ಮಾಡುತ್ತೇನೆ, ಕೋಮು ದಳ್ಳುರಿಯನ್ನು ಇಲ್ಲವಾಗಿಸುತ್ತೇನೆ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿರುವ ಕಾರಣ ಎಲ್ಲ ಪದಾಧಿಕಾರಿಗಳು ರಾಜೀನಾಮೆಯನ್ನು ಹಿಂಪಡೆಯುತ್ತಿದ್ದಾರೆ ಎಂದು ಹೇಳಿದರು.
ಮಂಗಳೂರು, ಮೇ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿ ಜಮೀರ್ ಅಹ್ಮದ್ ಖಾನ್ ಮತ್ತು ತಮ್ಮ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರೊಂದಿಗೆ ಎಂಎಲ್ಸಿ ಬಿಕೆ ಹರಿಪ್ರಸಾದ್ (BK Hari Prasad) ಮನೆಗೆ ಯಾಕೆ ಹೋಗಿದ್ದರು ಅನ್ನೋದು ಈಗ ಗೊತ್ತಾಗಿದೆ. ಅಬ್ದುಲ್ ರೆಹಮಾನ್ ಕೊಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಆಕ್ರೋಶಭರಿತರಾಗಿ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದರು. ರಾಜೀನಾಮೆ ನೀಡದಂತೆ ಅವರನ್ನು ತಡೆಯುವುದು ಹೇಗೆ ಅಂತ ಗೊತ್ತಾಗದೆ ಸಿದ್ದರಾಮಯ್ಯ ಇಂದು ಬೆಳಗ್ಗೆ ಹರಿಪ್ರಸಾದ್ ಮನೆಗೆ ಆಗಮಿಸಿದ್ದರು. ಅವರ ಮನೆಯಿಂದಲೇ ನಜೀರ್ ಅಹ್ಮದ್ ಮತ್ತು ಜಮೀರ್ ಫೋನ್ ಮಾಡಿದ್ದರು ಎಂದು ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಮುಖಂಡರನ್ನು ಉದ್ದೇಶಿಸಿ ಮಾತಾಡುತ್ತಿರುವ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಹೇಳುತ್ತಾರೆ.
ಇದನ್ನೂ ಓದಿ: ದಿಢೀರನೆ ಎಮ್ಮೆಲ್ಸಿ ಬಿಕೆ ಹರಿಪ್ರಸಾದ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

