ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿದ್ದು ಸರಿಯೇ? ಹಿರಿಯ ನಟಿ ಜಯಮಾಲಾ ಪ್ರತಿಕ್ರಿಯೆ
‘ಭಾಷೆಯ ವಿಷಯದಲ್ಲಿ ಯಾರೇ ಉದ್ಧಟತನ ಮಾಡಿದರೂ ಕನ್ನಡದ ಮನಸ್ಸುಗಳು ಸುಮ್ಮನೆ ಇರಲ್ಲ. ಕ್ಷಮೆ ಕೊಡುವುದೂ ಗೊತ್ತು, ಮೂಗು ಹಿಡಿದು ದಂಡನೆ ಕೊಡುವುದು ಕೂಡ ಗೊತ್ತು’ ಎಂದು ನಟಿ ಜಯಮಾಲಾ ಅವರು ಹೇಳಿದ್ದಾರೆ. ಕಮಲ್ ಹಾಸನ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಕನ್ನಡದ ಬಗ್ಗೆ ನಟ ಕಮಲ್ ಹಾಸನ್ (Kamal Haasan) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರ ಬಗ್ಗೆ ನಟಿ ಜಯಮಾಲಾ ಅವರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರು ಮಾತನಾಡಿದರು. ‘ಭಾಷೆ ಬಗ್ಗೆ ಯಾವುದೇ ರೀತಿಯ ವಿವಾದ ಎದ್ದಾಗ ಕನ್ನಡಿಗರೆಲ್ಲ ಒಂದಾಗುತ್ತೇವೆ, ಒಂದಾಗಲೇಬೇಕು. ಅದು ನಮ್ಮ ಧರ್ಮ. ಕಮಲ್ ಹಾಸನ್ ಅವರು ಹೇಗೆ ಹೇಳಿದರೋ ಗೊತ್ತಿಲ್ಲ. ಆದರೆ ತಮಿಳಿನಿಂದ ಕನ್ನಡ ಹುಟ್ಟಿಲ್ಲ. ಅದಂತೂ ಸತ್ಯ. ನಮ್ಮಲ್ಲಿ ಭಾಷಾ ತಜ್ಞರು ಇದ್ದಾರೆ. ಅವರು ಈ ಬಗ್ಗೆ ಹೇಳಿಕೆ ನೀಡಿ ಮಾರ್ಗದರ್ಶನ ನೀಡಲಿ. ಪ್ರತಿ ಬಾರಿ ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಮನದಟ್ಟು ಮಾಡಿಕೊಡಬೇಕು’ ಎಂದು ನಟಿ ಜಯಮಾಲಾ (Jayamala) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

