ಅಬ್ದುಲ್ ರೆಹಮಾನ್ ಶವಯಾತ್ರೆಗೆ ಪೊಲೀಸ್ ಬಂದೋಬಸ್ತ್, ರಸ್ತೆ ಮತ್ತು ಸರ್ಕಲ್ಗಳಲ್ಲಿ ನೂರಾರು ಜನ
ಅಬ್ದುಲ್ ರೆಹಮಾನ್ ಕೊಲೆ ಹಿನ್ನೆಲೆಯಲ್ಲಿ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅರ್ ಹಿತೇಂದ್ರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತೆಗಾಗಿ ಉಡುಪಿ, ಚಿಕ್ಕಮಗಳೂರು, ಕಾರವಾರ ಮತ್ತು ಮೈಸೂರು ಜಿಲ್ಲೆಯಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗಿದೆ.
ಮಂಗಳೂರು, ನೇ 28: ಮಂಗಳೂರುನಲ್ಲಿ ಕಾನೂನು ಮತ್ತು ಸುವ್ಯವಸ್ಥೆ (Law and Order) ಮತ್ತೇ ಹದಗೆಟ್ಟಿದೆ. ನಿನ್ನೆ ಅಬ್ದುಲ್ ರೆಹಮಾನ್ ಹೆಸರಿನ ಪಿಕಪ್ ವಾಹನ ಚಾಲಕ ಭೀಕರವಾಗಿ ಕೊಲೆಯಾದ ಘಟನೆಯೇ ಇದಕ್ಕೆ ಸಾಕ್ಷಿ. ರಹೆಮಾನ್ ಪಾರ್ಥೀವ ಶರೀರವನ್ನು ಇಂದು ಬೆಳಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಕೊಲ್ತಮಜಲು ಕಡೆ ಸಾಗಿಸಲಾಯಿತು. ನಗರದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಅನೇಕ ಜನ ರಸ್ತೆಗಳಗೆ ಬಂದು ಶವಯಾತ್ರೆ ವೀಕ್ಷಿಸಿದರು. ನಗರದಿಂದ ಕೊಲ್ತಮಜಲುಗೆ ಹೋಗುವ ರಸ್ತೆಯಲ್ಲಿ ಮತ್ತು ಎಲ್ಲ ಸರ್ಕಲ್ಗಳಲ್ಲಿ ಪೊಲೀಸ್ ಬಂದೋಬಸ್ತ್ ಕಂಡಿತು. ರೆಹಮಾನ್ ಶವ ಹೊತ್ತ ವಾಹನದ ಜೊತೆ ಹತ್ತಾರು ವಾಹನಗಳು ಸಾಗುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು: ಓರ್ವನ ಬರ್ಬರ ಕೊಲೆ, ಮತ್ತೊಬ್ಬನಿಗೆ ತಲ್ವರ್ ಏಟು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ