ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ 17) ಶನಿವಾರ ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷ ಆವರಣದಲ್ಲಿ ನಮೀಬಿಯಾದಿಂದ ವಿಮಾನದಲ್ಲಿ ತಂದ ಚೀತಾಗಳನ್ನು (cheetah) ಬಿಡುಗಡೆ ಮಾಡಿದರು. ಭಾರತಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ. ಏಕೆಂದರೆ 70 ವರ್ಷಗಳ ನಂತರ ಭಾರತಕ್ಕೆ ಚೀತಾಗಳು ಭಾರತದಲ್ಲಿ ಕಾಣಿಸಿಕೊಂಡಿವೆ. 1952 ರಲ್ಲಿ ನಾವು ದೇಶದಿಂದ ಚೀತಾಗಳು ನಿರ್ನಾಮವಾಗಿದೆ ಎಂದು ಘೋಷಿಸಿದ್ದು ದುರದೃಷ್ಟಕರ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಮುಂದಿನ ಐದು ವರ್ಷಗಳಲ್ಲಿ ವಿವಿಧ ಉದ್ಯಾನವನಗಳಲ್ಲಿ 50 ಚಿರತೆಗಳನ್ನು ಪರಿಚಯಿಸಲು ಭಾರತ ಸರ್ಕಾರ ಯೋಜಿಸಿದೆ. 1952ರಲ್ಲಿ, ಭಾರತ ಸರ್ಕಾರವು ದೇಶದಲ್ಲಿ ಚೀತಾ ಅಳಿವಿನಂಚಿನಲ್ಲಿದೆ ಎಂದು ಅಧಿಕೃತವಾಗಿ ಘೋಷಿಸಿತು. ಮಾಂಸಾಹಾರಿಗಳ ಕೋರ್ಸಿಂಗ್, ಕ್ರೀಡಾ ಬೇಟೆ, ಮಿತಿಮೀರಿದ ಬೇಟೆಯೇ ಚೀತಾಗಳ ಅವನತಿಗೆ ಕಾರಣ ಎಂದು ಖಾಸಗಿ ಸುದ್ದಿ ಸಂಸ್ಥೆ ಮಿಂಟ್ ವರದಿ ಮಾಡಿದೆ.
The last recorded evidence of Cheetah in India, that also of dead. Shot down in 1947, by Maharaja Ramanuj Pratap Singh Deo of Koriya, Surguja, as seen in this photo submitted by his private secretary to JBNHS. pic.twitter.com/NflW42m5P2
— Parveen Kaswan, IFS (@ParveenKaswan) December 5, 2019
ಈ ಬಗ್ಗೆ ಆಯ್ಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸೆ.16 ರಂದು ಟ್ವೀಟ್ ಮಾಡಿ “ಕೊನೆಯ ಮೂರು ಚೀತಾಗಳನ್ನು 1947 ರಲ್ಲಿ ಛತ್ತೀಸ್‌ಗಢ ರಾಜ, ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ಅವರು ರಾತ್ರಿ ಬೇಟೆಯಾಡಿದರು. ಎಲ್ಲಾ ಮೂರು ಚಿರತೆಗಳು 6 ಅಡಿ 4-5 ಇಂಚುಗಳಷ್ಟು ಒಂದೇ ಅಳತೆಯ ಸಮಾನ ವಯಸ್ಕವು ಎಂದು ತಿಳಿಸಿದ್ದಾರೆ”. ಇದು 1947 ರಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಭಾರತದಲ್ಲಿ ಚಿರತೆಯ ಕೊನೆಯ ದಾಖಲೆಯಾಗಿದೆ.
ಆಫ್ರಿಕನ್ ಚೀತಾಗಳ ವಿಶೇಷತೆಯೇನು?:
ಆಫ್ರಿಕನ್ ಚೀತಾಗಳು ವಿಶ್ವದ ಅತಿ ವೇಗದ ಚೀತಾಗಳಾಗಿವೆ. ಈ ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನ ಅವುಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿತ್ತು. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದ ಕಾರಣ, ಅವುಗಳಿಗೆ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ.
ಮತ್ತ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Sat, 17 September 22