ಪುಣೆ ಐಸಿಸ್ ಮಾಡ್ಯೂಲ್‌ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಎನ್‌ಐಎ ಚಾರ್ಜ್ ಶೀಟ್

|

Updated on: Nov 09, 2023 | 5:36 PM

ಇತ್ತೀಚೆಗೆ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಭಯೋತ್ಪಾದನೆಗೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ಮಾಡಿತ್ತು. ಇದರಲ್ಲಿ ಮಹಾರಾಷ್ಟ್ರದ ಏಳು ಜನರನ್ನು ಬಂಧಿಸಿದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್​​ ಎನ್​​​ಐಎ ಸಲ್ಲಿಸಿದೆ. ಈ ಚಾರ್ಜ್ ಶೀಟ್​​ನಲ್ಲಿ​​​ ಭಯಾನಕ ಸಂಗತಿಗಳನ್ನು ಬೆಚ್ಚಿಟ್ಟಿದೆ.

ಪುಣೆ ಐಸಿಸ್ ಮಾಡ್ಯೂಲ್‌ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಎನ್‌ಐಎ ಚಾರ್ಜ್ ಶೀಟ್
ಸಾಂದರ್ಭಿಕ ಚಿತ್ರ
Follow us on

ದೆಹಲಿ, ನ.9: ಇತ್ತೀಚೆಗೆ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಭಯೋತ್ಪಾದನೆಗೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ಮಾಡಿತ್ತು. ಇದರಲ್ಲಿ ಮಹಾರಾಷ್ಟ್ರದ ಏಳು ಜನರನ್ನು ಬಂಧಿಸಿದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್​​ ಎನ್​​​ಐಎ ಸಲ್ಲಿಸಿದೆ. ಈ ಚಾರ್ಜ್ ಶೀಟ್​​ನಲ್ಲಿ​​​ ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದೆ. ಪುಣೆ ಮೂಲದ ಐಸಿಸ್ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಈ ಚಾರ್ಜ್ ಶೀಟ್​​ನಲ್ಲಿ ಹೇಳಲಾಗಿದೆ.

ಇನ್ನು ಈ ಚಾರ್ಜ್ ಶೀಟ್​​ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನ ಮೊಹಮ್ಮದ್ ಇಮ್ರಾನ್-ಮೊಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ‘ಮಟ್ಕಾ’ ಅಲಿಯಾಸ್ ‘ಅಮೀರ್ ಅಬ್ದುಲ್ ಹಮೀದ್ ಖಾನ್’ ಮತ್ತು ಮೊಹಮ್ಮದ್ ಯೂನಸ್-ಮೊಹಮ್ಮದ್ ಯಾಕೂಬ್ ಸಾಕಿ ಅಲಿಯಾಸ್ ‘ಆದಿಲ್’ ಅಲಿಯಾಸ್ ‘ಆದಿಲ್ ಸಲೀಮ್ ಖಾನ್’ ಹಾಗೂ ಮಹಾರಾಷ್ಟ್ರದ ಪುಣೆಯ ಕೊಂಡ್ವಾದ “ಕದೀರ್ ದಸ್ತಗೀರ್ ಪಠಾಣ್ ಅಲಿಯಾಸ್ ‘ಅಬ್ದುಲ್ ಕದೀರ್’ ಮತ್ತು ಸೀಮಾಬ್ ನಾಸಿರುದ್ದೀನ್ ಕಾಜಿ”; ಮತ್ತು ಮಹಾರಾಷ್ಟ್ರದ ಥಾಣೆಯಲ್ಲಿರುವ ಪಾದ್ಘಾದ “ಜುಲ್ಫಿಕರ್ ಅಲಿ ಬರೋಡಾವಾಲಾ ಅಲಿಯಾಸ್ ‘ಲಾಲಾಭಾಯ್’ ಅಲಿಯಾಸ್ ‘ಸೈಫ್’, ಶಾಮಿಲ್ ಸಾಕಿಬ್ ನಾಚನ್ ಮತ್ತು ಆಕಿಫ್ ಅತೀಕ್ ನಾಚನ್” ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಹೆಸರಿಸಲಾಗಿದೆ.

ಇನ್ನು ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಭಯೋತ್ಪಾದಕರ ಜತೆಗೆ ನಂಟು ಇಟ್ಟುಕೊಂಡಿದ್ದು. ದೇಶದ ಒಳಗೆ ಹಿಂಸಾಚಾರಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸಲು ಹಾಗೂ ಅದಕ್ಕಾಗಿ ಹಣ ಸಂಗ್ರಹಿಸಲು ತಮ್ಮ ತೋಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಇದಕ್ಕಾಗಿ ಯುವಕರ ಗುಂಪೊಂದನ್ನು ತಯಾರಿಸಲು ಶಿಬಿರಗಳನ್ನು ಕೂಡ ಸ್ಥಾಪಿಸಿದ್ದಾರೆ ಎಂದು ಹೇಳಿದ್ದಾರೆ. ಇವರು ದೇಶದ ಒಳಗೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಾರೆ. ಹಾಗೂ ಆಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಯಾರಿಕೆಗೆ ಸಹಾಯ ಮಾಡಿದ್ದಾರೆ ಎಂದು ಚಾರ್ಜ್ ಶೀಟ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಐಎಸ್‌ಕೆಪಿ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಐದು ಸ್ಥಳಗಳಲ್ಲಿ ಎನ್ಐಎ ದಾಳಿ

ತನಿಖಾ ದಳ ಇವರ ಮೇಲೆ ದಾಳಿ ಮಾಡಿದಾಗ ಹಲವು ಐಇಡಿಗಳು, ಬಂದೂಕುಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿದೆ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹೆಚ್ಚಿಸಲು ಹೊಸ ಹೊಸ ಪ್ಲಾನ್ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವ ಹಾಗೂ ಜನರಿಗೆ ಬೆದರಿಕೆ ಹಾಕುವ ನಿಟ್ಟಿನಲ್ಲಿ ಈ ಸಿದ್ಧತೆಗಳನ್ನು ನಡೆಸಿದ್ದಾರೆ. ಚಾರ್ಜ್ ಶೀಟ್ ಪ್ರಕಾರ ಅವರು ವಾರ್ಷಿಕ 31 ಲಕ್ಷ ರೂ. ವೇತನ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಈ ಆರೋಪಿಗಳಲ್ಲಿ ಶಹನವಾಜ್ ಶೈಫುಜಾಮ ಗಣಿ ಎಂಜಿನಿಯರ್​​ ಆಗಿದ್ದರು. ಬುದ್ಧಿವಂತ ಕೂಡ ಹೌದು, ಇವರನ್ನು ಬಾಂಬ್​​​ ತಯಾರಿಸಲು ಬಳಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ಇನ್ನೊಬ್ಬ ಆರೋಪಿ ಕದೀರ್ ದಸ್ತಗೀರ್ ಪಠಾಣ್ ಅಲಿಯಾಸ್ ‘ಅಬ್ದುಲ್ ಕದೀರ್’ ಪುಣೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಅಬ್ದುಲ್ ಕದೀರ್​​​ನ್ನು ಆರೋಪಿಗಳ ಗುರುತನ್ನು ಮರೆಮಾಚಲು ಗ್ರಾಫಿಕ್ ಕೆಲಸ ಮಾಡುತ್ತಿದ್ದ. ಈ ಮೂಲಕ ಹಣ ಗಳಿಸುತ್ತಿದ್ದ ಎಂದು ಈ ಚಾರ್ಜ್ ಶೀಟ್​​ನಲ್ಲಿ ತಿಳಿಸಿದ್ದಾರೆ.

ಈ ಆರೋಪಿಗಳು ಭಯೋತ್ಪಾದನೆ ಕೃತ್ಯಕ್ಕಾಗಿ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದರು. ವನೆಗರ್ ಎಂಬುದು ಸಲ್ಫ್ಯೂರಿಕ್ ಆಮ್ಲಕ್ಕೆ ಭಯೋತ್ಪಾದಕರು ಬಳಸಿದ ಸಂಕೇತ ಪದವಾಗಿತ್ತು. ರೋಸ್‌ವಾಟರ್ ಅಸಿಟೋನ್ ಕೆಮಿಕಲ್ಸ್‌ಗೆ ಸಂಕೇತ ಪದವಾಗಿತ್ತು. ಇದರಕ್ಕಾಗಿ ಕೆಲವೊಂದು ಯುವಕರನ್ನು ಬಳಸಿಕೊಳ್ಳಲಾಗಿತ್ತು ಅವರನ್ನು ನಿರ್ವಹಣೆ ಮಾಡುತ್ತಿದ್ದು ಮೊಹಮ್ಮದ್. ಆರೋಪಿಗಳು ಮಹಾರಾಷ್ಟ್ರ, ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಇತರ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿ ವ್ಯಾಪಕ ವಿಚಕ್ಷಣ ಕಾರ್ಯಾಚರಣೆಗಳನ್ನು ನಡೆಸಿದರು ಎಂದು ಈ ಆರೋಪಿ ಪಟ್ಟಿಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ