ಮಹುವಾ ಮೊಯಿತ್ರಾ ಉಚ್ಚಾಟನೆಯನ್ನು ಶಿಫಾರಸು ಮಾಡುವ ವರದಿ ಬೆಂಬಲಿಸಿದ್ದು 6 ಸಂಸದರು, ಚರ್ಚೆ ನಡೆದಿಲ್ಲ
ಗುರುವಾರ ಸಂಸತ್ತಿನಲ್ಲಿ ನಡೆದ ಸಭೆಗೆ ಆಗಮಿಸಿದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಮಹಿಳೆಯ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದರು. ಉನ್ನಾವೋ ಅಥವಾ ಹಾತರಸ್ ಅಥವಾ ಬಿಲ್ಕಿಸ್ ಬಾನೋ ಪ್ರಕರಣವೇ ಆಗಿರಲಿ ಮಹಿಳೆಯರನ್ನು ಅವಮಾನಿಸುವವರ ಜೊತೆ ಬಿಜೆಪಿ ಹೇಗೆ ನಿಂತಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ ಮಹಿಳೆಯ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಬಿಎಸ್‌ಪಿ ಸಂಸದರು ಹೇಳಿದ್ದಾರೆ
ದೆಹಲಿ ನವೆಂಬರ್ 09: ಲೋಕಸಭೆಯ ನೈತಿಕ ಸಮಿತಿಯು (Lok Sabha Ethics Committee )ತೃಣಮೂಲ ಸಂಸದೆ ಮಹುವಾ ಮೊಯಿತ್ರಾ(Mahua Moitra) ಅವರನ್ನು ಆರು ಸದಸ್ಯರ ಬೆಂಬಲದೊಂದಿಗೆ ಸಂಸತ್ತಿನ ಕೆಳಮನೆಯಿಂದ ಹೊರಹಾಕಲು ಶಿಫಾರಸು ಮಾಡುವ 500 ಪುಟಗಳ ವರದಿಯನ್ನು ಅಂಗೀಕರಿಸುತ್ತಿದ್ದಂತೆ, ಸದಸ್ಯರ ನಡುವೆ ವರದಿಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸಮಿತಿಯ ಸದಸ್ಯ ಜೆಡಿಯು ಸಂಸದ ಗಿರಿಧಾರಿ ಯಾದವ್ (Giridhari Yadav)ಹೇಳಿದ್ದಾರೆ. ಇದು ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ನೀವು ಕೇವಲ ಕ್ರಾಸ್ ಕ್ವೆಶ್ಚನ್ ಮಾಡಿದ್ದೀರಿ. ಅದರ ನಂತರ, ನೀವು ಸಮಿತಿಯ ಸದಸ್ಯರೊಂದಿಗೆ ಚರ್ಚಿಸಲು ಸಭೆ ನಡೆಸಬೇಕಿತ್ತು. ಅವರಿಗೆ ಬಹುಮತವಿದೆ ಮತ್ತು ಅವರು ಏನು ಬೇಕಾದರೂ ಮಾಡಬಹುದು. ಮಹಾಭಾರತ (ಯುದ್ಧ) ದ್ರೌಪದಿಯ ವಸ್ತ್ರಾಪಹರಣ ಕಾರಣದಿಂದ ನಡೆಯಿತು ಎಂದು ಯಾದವ್ ಹೇಳಿದ್ದಾರೆ.
ಮಹಿಳೆಯ ಅವಮಾನ ಸಹಿಸಲು ಸಾಧ್ಯವಿಲ್ಲ: ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ
ಗುರುವಾರ ಸಂಸತ್ತಿನಲ್ಲಿ ನಡೆದ ಸಭೆಗೆ ಆಗಮಿಸಿದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಮಹಿಳೆಯ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದರು. ಉನ್ನಾವೋ ಅಥವಾ ಹಾತರಸ್ ಅಥವಾ ಬಿಲ್ಕಿಸ್ ಬಾನೋ ಪ್ರಕರಣವೇ ಆಗಿರಲಿ ಮಹಿಳೆಯರನ್ನು ಅವಮಾನಿಸುವವರ ಜೊತೆ ಬಿಜೆಪಿ ಹೇಗೆ ನಿಂತಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ ಮಹಿಳೆಯ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಬಿಎಸ್‌ಪಿ ಸಂಸದರು ಹೇಳಿದ್ದಾರೆ. ವರದಿಗಳ ಪ್ರಕಾರ, ನವೆಂಬರ್ 2 ರಂದು ಮಹುವಾ ಮೊಯಿತ್ರಾ ಸಮಿತಿಯ ಮುಂದೆ ಹಾಜರಾದಾಗ ಸಮಿತಿಯ ಕೊನೆಯ ಸಭೆಯಲ್ಲಿ ಡ್ಯಾನಿಶ್ ಅಲಿ ನೈತಿಕ ಸಮಿತಿ ಅಧ್ಯಕ್ಷ ಅಧ್ಯಕ್ಷ ವಿನೋದ್ ಸೋಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ವರದಿಯನ್ನು ಓದಿಲ್ಲ ಎಂದ ಡ್ಯಾನಿಶ್, ಈ ದೇಶದಲ್ಲಿ ಎರಡು ಕಾನೂನು ಇರಲು ಸಾಧ್ಯವಿಲ್ಲ, ದೂರದರ್ಶನ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿರುವ ನೀತಿಸಂಹಿತೆ ಸಮಿತಿಯ ಅಧ್ಯಕ್ಷರು ನಿರಂತರವಾಗಿ ನಿಯಮ 275 ಅನ್ನು ಉಲ್ಲಂಘಿಸುತ್ತಿದ್ದಾರೆ, ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ನಾವು ಅದನ್ನು ಮುಂದುವರಿಯುತ್ತೇವೆ ಎಂದು ಬಿಎಸ್ಪಿ ಸಂಸದ ಹೇಳಿದ್ದಾರೆ.
ನವೆಂಬರ್ 2 ರಂದು ಮಹುವಾ ಮೊಯಿತ್ರಾ ಅವರಿಗೆ ‘ವೈಯಕ್ತಿಕ ಮತ್ತು ಅಸಭ್ಯ’ ಪ್ರಶ್ನೆಗಳ ವಿರುದ್ಧ ಧ್ವನಿ ಎತ್ತಿದ ವಿರೋಧ ಪಕ್ಷದ ಸಂಸದರು ಕರಡು ವರದಿಗೆ ಅಸಮ್ಮತಿ ನೋಟಿಸ್ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಮಹುವಾ ಮೊಯಿತ್ರಾ ರಾಜಕೀಯದ ಬಲಿಪಶು, ಆಕೆ ಹೋರಾಡಬಲ್ಲಳು: ಅಭಿಷೇಕ್ ಬ್ಯಾನರ್ಜಿ
ಆರೋಪ ಗಂಭೀರ, ಲೋಕಸಭೆ ಸ್ಪೀಕರ್‌ಗೆ ವರದಿ ಸಲ್ಲಿಸಬೇಕು: ವಿನೋದ್ ಸೋಂಕರ್
ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳು ತುಂಬಾ ಗಂಭೀರವಾಗಿದೆ ಎಂದು ಲೋಕಸಭೆಯ ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಗುರುವಾರ ಹೇಳಿದ್ದಾರೆ. ಸಮಿತಿಯು ಆರೋಪಗಳ ಕುರಿತು ತನಿಖೆ ನಡೆಸಿ ವರದಿಯನ್ನು ಸಿದ್ಧಪಡಿಸಿದೆ, ಗುರುವಾರದ ಸಭೆಯು ವರದಿಯನ್ನು ಚರ್ಚಿಸಲು ಮತ್ತು ನಂತರ ಅದನ್ನು ಅಂಗೀಕರಿಸಲು ಇರುವುದಾಗಿಗೆ ಎಂದು ಅಧ್ಯಕ್ಷರು ಹೇಳಿದರು.
ಮಹುವಾ ಮೊಯಿತ್ರಾ ಅವರು ಕೈಗಾರಿಕೋದ್ಯಮಿ ದರ್ಶನ್ ಹಿರಾನಂದನಿಗೆ ತಮ್ಮ ಸಂಸತ್ತಿಗೆ ಲಾಗಿನ್ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ತಾನು ಸಂಸತ್ತಿನ ಸೈಟ್‌ನಲ್ಲಿ ಅದಾನಿ ಬಗ್ಗೆ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಒಪ್ಪಿಕೊಂಡರು. ದರ್ಶನ್ ಹಿರಾನಂದನಿಯಿಂದ ಮಹುವಾ ಮೊಯಿತ್ರಾ ನಗದು ಮತ್ತು ಉಡುಗೊರೆಗಳನ್ನು ತೆಗೆದುಕೊಂಡಿದ್ದಾರೆ ಎಂದು ವಕೀಲ ಜೈ ಅನಂತ್ ದೇಹದ್ರಾಯ್ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದು ಈ ಆರೋಪವನ್ನು ಮಹುವಾ ಮೊಯಿತ್ರಾ ತಳ್ಳಿಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ