Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangles Festival: ವಿಜಯನಗರ ಅರಸರಿಂದ ಸ್ಥಾಪನೆಗೊಂಡ ಇಂದ್ರಕೀಲಾದ್ರಿ ದುರ್ಗಮ್ಮ ದೇವಿಗೆ ಬಳೆಗಳ ಅಲಂಕಾರ, ಕಣ್ಮನ ಸೆಳೆಯುವ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆ

Indrakeeladri Durga Malleswara Swami Devasthanam Bangles Festival: 15 ನೇ ಶತಮಾನದಿಂದಲೂ ಅಮ್ಮನವರನ್ನು ಬಳೆಗಳಿಂದ ಅಲಂಕರಿಸಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ. 15ನೇ ಶತಮಾನದಿಂದಲೂ ವಿಜಯನಗರ ರಾಜರು ಚಿನ್ನಾಭರಣಗಳ ಜೊತೆಗೆ, ಬಳೆಗಳಿಂದ ವಿಶೇಷ ಅಲಂಕಾರಗಳನ್ನೂ ಮಾಡುತ್ತಿದ್ದರು ಎಂದು ವೈದಿಕ ಪಂಡಿತರು ಹೇಳುತ್ತಾರೆ. ಈ ಬಾರಿಯ ಉತ್ಸವಕ್ಕೆ ಅಧಿಕಾರಿಗಳು ವಿಶೇಷ ವ್ಯವಸ್ಥೆಯನ್ನೂ ಮಾಡಲಿದ್ದಾರೆ.

Bangles Festival: ವಿಜಯನಗರ ಅರಸರಿಂದ ಸ್ಥಾಪನೆಗೊಂಡ ಇಂದ್ರಕೀಲಾದ್ರಿ ದುರ್ಗಮ್ಮ ದೇವಿಗೆ ಬಳೆಗಳ ಅಲಂಕಾರ, ಕಣ್ಮನ ಸೆಳೆಯುವ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆ
ವಿಜಯನಗರ ಅರಸರಿಂದ ಸ್ಥಾಪನೆಗೊಂಡ ಇಂದ್ರಕೀಲಾದ್ರಿ ದುರ್ಗಮ್ಮ ದೇವಿಗೆ ಬಳೆಗಳ ಅಲಂಕಾರ,
Follow us
ಸಾಧು ಶ್ರೀನಾಥ್​
|

Updated on: Nov 09, 2023 | 5:23 PM

ವಿಜಯವಾಡ: ಪವಿತ್ರ ಕೃಷ್ಣ ನದಿ ತಟಕ್ಕೆ ಆನಿಕೊಂಡಿರುವ ಇಂದ್ರಕೀಲಾದ್ರಿಯ ಬೆಟ್ಟದ ಮೇಲಿರುವ ಪುರಾತನ ಶ್ರೀ ಕನಕ ದುರ್ಗಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆಲೆಸಿರುವ ದುರ್ಗಮ್ಮ ಸನ್ನಿಧಿಯಲ್ಲಿ ಬಳೆಗಳ ನಿನಾದ ಸೊಬಗು ಚಿತ್ತಾಕರ್ಷವಾಗಿ ಭಾವಭಕ್ತಿಯಿಂದ ಕಂಡುಬಂದಿದೆ. ಇದೇ ವೇಳೆ ಬೆಟ್ಟದಲ್ಲಿ ದುರ್ಗಾ ಮಾತೆಯ ವಾರ್ಷಿಕ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಬಳೆಗಳ ಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸಲು ದಿನಾಂಕ ನಿಗದಿಯಾಗಿದೆ. ಲೋಕಕಲ್ಯಾಣಕ್ಕಾಗಿ ಶ್ರೀ ಶೋಭಾಕೃತ ನಾಮ ವೈದಿಕ ಸಮಿತಿಯ ಸೂಚನೆಯಂತೆ ಮುಂದಿನ ಬುಧವಾರ (ನವೆಂಬೆರ್​ 15ರಂದು) ಕಾರ್ತಿಕ ಶುದ್ಧಿ ವಿದಿಯಂದು ಬೆಜವಾಡ ಅಮ್ಮನವರು ಗಾಜಿನ ಅಲಂಕಾರದ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.

15ರಂದು ನಡೆಯಲಿರುವ ಈ ಗಾಜಿನ ಅಲಂಕಾರ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಅಮ್ಮನವರ ಮೂಲ ವಿರಾಟ್ ರೂಪದ ವಿಗ್ರಹದ ಜೊತೆಗೆ ಇಡೀ ದೇವಾಲಯದ ಆವರಣವನ್ನು ಉತ್ಸವ ಮೂರ್ತಿಗಳು ಮತ್ತು ಬಳೆಗಳಿಂದ ಅಲಂಕರಿಸಲಾಗುವುದು.

ಆದ್ದರಿಂದ, ಮುಂದಿನ ಬುಧವಾರ ಅಮ್ಮನವರು ಬಳೆಗಳ ಅಲಂಕಾರದೊಂದಿಗೆ ಭಕ್ತರಿಗೆ ಕಾಣಿಸಿಕೊಳ್ಳುತ್ತಾರೆ. ಉತ್ಸವ ಮುಗಿದ ನಂತರ ಅಲಂಕರಿಸಿದ ಬಳೆಗಳನ್ನು ಭಕ್ತರಿಗೆ ವರಪ್ರಸಾದವಾಗಿ ನೀಡಲಾಗುವುದು. ಬಣ್ಣಬಣ್ಣದ ಜೇಡಿಮಣ್ಣಿನಿಂದ ಮಾಡಿದ ಬಳೆಗಳ ಹಾರಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಬಳೆಗಳಿಂದ ಅಲಂಕರಿಸಲಾಗುತ್ತಿದೆ. ಮತ್ತು ದುರ್ಗಮ್ಮನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದೆ.

Also Read: ವಿಜಯನಗರ ಅರಸರ ಕಾಲದ ಜಲಕಂಠೇಶ್ವರ ದೇವಸ್ಥಾನ ವಿವಾದ: ರಹಸ್ಯ ಕೊಠಡಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಪ್ರಾಚ್ಯವಸ್ತು ಇಲಾಖೆ, ಭಕ್ತರಿಂದ ವಿರೋಧ

15 ನೇ ಶತಮಾನದಿಂದಲೂ ಅಮ್ಮನವರನ್ನು ಬಳೆಗಳಿಂದ ಅಲಂಕರಿಸಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ. 15ನೇ ಶತಮಾನದಿಂದಲೂ ವಿಜಯನಗರ ರಾಜರು ಚಿನ್ನಾಭರಣಗಳ ಜೊತೆಗೆ, ಬಳೆಗಳಿಂದ ವಿಶೇಷ ಅಲಂಕಾರಗಳನ್ನೂ ಮಾಡುತ್ತಿದ್ದರು ಎಂದು ವೈದಿಕ ಪಂಡಿತರು ಹೇಳುತ್ತಾರೆ. ಈ ಬಾರಿಯ ಉತ್ಸವಕ್ಕೆ ಅಧಿಕಾರಿಗಳು ವಿಶೇಷ ವ್ಯವಸ್ಥೆಯನ್ನೂ ಮಾಡಲಿದ್ದಾರೆ. ಬಳೆಗಳಿಂದ ಅಲಂಕೃತವಾಗಿರುವ ದೇವಿಯನ್ನು ನೋಡಲು ನಾಲ್ಕು ಗಂಟೆಗಳ ಕಾಲ ಉಚಿತ ದರ್ಶನವು ಬೆಳಿಗ್ಗೆ ಪ್ರಾರಂಭವಾಗುತ್ತದೆ. 5 ಗಂಟೆಯಿಂದ ಆರಂಭವಾಗುವ ಎಲ್ಲ ದರ್ಶನಗಳಲ್ಲಿ ಬಳೆಗಳ ಅಲಂಕಾರದಲ್ಲಿ ಅಮ್ಮನವರು ದರ್ಶನ ನೀಡಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ