Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ ಅರಸರ ಕಾಲದ ಜಲಕಂಠೇಶ್ವರ ದೇವಸ್ಥಾನ ವಿವಾದ: ರಹಸ್ಯ ಕೊಠಡಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಪ್ರಾಚ್ಯವಸ್ತು ಇಲಾಖೆ, ಭಕ್ತರಿಂದ ವಿರೋಧ

Jalakandeswarar Temple: ವೆಲ್ಲೂರಿನಲ್ಲಿರುವ ಜಲಕಂಠೇಶ್ವರ ದೇವಾಲಯ ವಿವಾದಕ್ಕೆ ತುತ್ತಾಗಿದೆ. ಕರ್ನಾಟಕದ ವಿಜಯನಗರ ಅರಸರ ಆಳ್ವಿಕೆಯಲ್ಲಿ ಸ್ವಯಂಭು ಶಿವಲಿಂಗ ಇಲ್ಲಿ ಉದ್ಭವವಾಗಿತ್ತು. ಆಗ ದೇವಾಲಯ ನಿರ್ಮಿಸಲಾಯಿತು. ಜಲಕಂಠೇಶ್ವರ ದೇಗುಲದ ಆವರಣದಲ್ಲಿ ಕೆಲವು ಕೊಠಡಿಗಳಿವೆ.. ಭಕ್ತರಿಗೆ ಪ್ರವೇಶವಿಲ್ಲ. ಆ ರಹಸ್ಯ ಕೊಠಡಿಗಳನ್ನು ಅಪಾರ ಸಂಪತ್ತು ಇದೆ ಎನ್ನಲಾಗಿದೆ.

ವಿಜಯನಗರ ಅರಸರ ಕಾಲದ ಜಲಕಂಠೇಶ್ವರ ದೇವಸ್ಥಾನ ವಿವಾದ: ರಹಸ್ಯ ಕೊಠಡಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಪ್ರಾಚ್ಯವಸ್ತು ಇಲಾಖೆ, ಭಕ್ತರಿಂದ ವಿರೋಧ
ವಿಜಯನಗರ ಅರಸರ ಕಾಲದ ಜಲಕಂಠೇಶ್ವರ ದೇವಸ್ಥಾನ ವಿವಾದ
Follow us
ಸಾಧು ಶ್ರೀನಾಥ್​
|

Updated on: Nov 07, 2023 | 3:16 PM

ತಮಿಳುನಾಡಿನಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಅನೇಕ ದೇವಾಲಯಗಳಿವೆ. ಇಲ್ಲಿ ಕಂಡುಬರುವಷ್ಟು ಬೃಹದಾದ ರಚನೆಗಳನ್ನು ಹೊಂದಿರುವ ದೇವಾಲಯಗಳು ಬೇರೆಲ್ಲೂ ಇಲ್ಲ ಎನ್ನಬಹುದು. ಅಂತಹ ದೇವಾಲಯಗಳ ಪೈಕಿ ತಮಿಳುನಾಡಿನ ವೆಲ್ಲೂರಿನಲ್ಲಿರುವ ಜಲಕಂಠೇಶ್ವರ ದೇವಾಲಯವೂ (Jalakandeswarar Temple, Vellore) ಒಂದು. ಇದೀಗ ಈ ದೇವಾಲಯ ವಿವಾದದ ಕೇಂದ್ರವಾಗಿದೆ. ಕ್ರಿ. ಶ. 1550ರಲ್ಲಿ ಕರ್ನಾಟಕದ ವಿಜಯನಗರ ಅರಸರ ಆಳ್ವಿಕೆಯಲ್ಲಿ (VIjayanagara empire) ಸ್ವಯಂಭು ಶಿವಲಿಂಗ ಉದ್ಭವವಾಗಿತ್ತು. ಆ ಸಮಯದಲ್ಲಿ ಅಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಯಿತು. ಶಿವಲಿಂಗವು ನೀರಿನಿಂದ ತುಂಬಿದ ಪ್ರದೇಶದಲ್ಲಿ ಇರುವುದರಿಂದ ಈ ದೇವಾಲಯವು ಜಲಕಂಠೇಶ್ವರ ದೇವಾಲಯವೆಂದು ಜನಪ್ರಿಯವಾಗಿದೆ. ಕಾಲಾಂತರದಲ್ಲಿ ದೇವಾಲಯವು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿತು.

1981ರಲ್ಲಿ ದೇವಸ್ಥಾನದಲ್ಲಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮುಂದಾದಾಗ ಪ್ರಾಚ್ಯವಸ್ತು ಇಲಾಖೆ ಅನುಮತಿ ಸಿಗಲಿಲ್ಲ. ಆ ಕಾರಣ ಗೌಪ್ಯವಾಗಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತರ ಭಾವನೆಗಳ ದೃಷ್ಟಿಯಿಂದ ಅದು ವಿವಾದಕ್ಕೆ ಎಡೆಮಾಡಿಕೊಡುತ್ತದೆ ಎಂದು ಪ್ರಾಚ್ಯವಸ್ತು ಇಲಾಖೆ ಅನುಮತಿ ನೀಡುವುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಅಂದಿನಿಂದ ದೇವಾಲಯವನ್ನು ಜಲಕಂಠೇಶ್ವರ ಧರ್ಮ ಸ್ಥಾಪನಾ ಎಂಬ ಟ್ರಸ್ಟ್‌ನ ಆಶ್ರಯದಲ್ಲಿ ನಿರ್ವಹಿಸಲಾಗುತ್ತಿದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರವು ದೇವಸ್ಥಾನ ನಡೆಸಲು ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದಿಂದ ಅನುಕೂಲಕರ ತೀರ್ಪು ಬಂದ ನಂತರ, ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಜಲಕಂಠೇಶ್ವರ ಧರ್ಮ ಸ್ಥಾಪನಾ ಟ್ರಸ್ಟ್‌ನ ಸದಸ್ಯರು ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದೆ.

ಅತ್ತ ಚಿದಂಬರಂ ನಲ್ಲಿರುವ ನಟರಾಜ ಸ್ವಾಮಿ ದೇಗುಲದ ಪೂಜಾರಿಗಳ ಸಮುದಾಯದ ವಿವಾದದಂತೆ, ಇಲ್ಲಿಯೂ ಕೂ ಸರ್ಕಾರ ಮತ್ತು ಟ್ರಸ್ಟ್​​ ಮಧ್ಯೆ ವಿವಾದ ನಡೆಯುತ್ತಿದೆ. ಪ್ರಸ್ತುತ ವಿವಾದಿತ ಜಲಕಂಠೇಶ್ವರ ದೇಗುಲವು ವೆಲ್ಲೂರು ಕೋಟೆಯ ಆವರಣದಲ್ಲಿ ಇದೆ. ದೇವಾಲಯದ ಒಳಗೆ ಕೆಲವು ಕೊಠಡಿಗಳಿವೆ.. ಭಕ್ತರಿಗೆ ಪ್ರವೇಶವಿಲ್ಲ ಎಂದು ಈ ಕೊಠಡಿಗಳನ್ನು ರಹಸ್ಯ ಕೊಠಡಿಗಳನ್ನಾಗಿಸಿ ಬೀಗ ಹಾಕಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಅಮೂಲ್ಯ ಸಂಪತ್ತುಗಳು ಆ ಕೋಣೆಗಳಲ್ಲಿ ರಹಸ್ಯವಾಗಿ ಎತ್ತಿಡಲಾಗಿದೆ. ಈ ಕೊಠಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ತಂಡ ಭಾನುವಾರ ದೇವಸ್ಥಾನಕ್ಕೆ ತೆರಳಿತ್ತು.

ಈ ವೇಳೆ ಜಲಕಂಠೇಶ್ವರ ಧರ್ಮ ಸ್ಥಾಪನಾ ಟ್ರಸ್ಟ್‌ನ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ದೇಗುಲ ಮತ್ತು ಕೊಠಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೋದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ತಂಡದ ಸದಸ್ಯರನ್ನು ದೇಗುಲದಲ್ಲೇ ನಿರ್ಬಂಧಿಸಲಾಗಿದೆ. ಸೋಮವಾರ ಬೆಳಗಿನ ಜಾವದವರೆಗೂ ಅಧಿಕಾರಿಗಳು ಹಿಂತಿರುಗದ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಪೊಲೀಸರಲ್ಲಿ ಆಶ್ರಯ ಪಡೆದಿದ್ದು, ಪೊಲೀಸರು ದೇವಸ್ಥಾನಕ್ಕೆ ತೆರಳಿ ಅಧಿಕಾರಿಗಳನ್ನು ಹೊರಗೆ ಕರೆತಂದಿದ್ದಾರೆ.

ಆದರೆ ಪ್ರಾಚ್ಯವಸ್ತು ಇಲಾಖೆ ತನ್ನ ಈ ನಡೆಯಿಂದ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಟ್ರಸ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಟ್ರಸ್ಟ್‌ಗೆ ಬೆಂಬಲವಾಗಿ ಹಿಂದೂ ಸಂಘಟನೆಗಳು ನಿಂತಿವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿವೆ. ಆದರೆ ದೇವಾಲಯದ ಬದಲು ಪ್ರಾಚ್ಯವಸ್ತು ಇಲಾಖೆ ರಹಸ್ಯ ಕೊಠಡಿಗಳನ್ನು ಪರಿಶೀಲಿಸಲು ಹೋಗಿದ್ದು ಏಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಆ ಕೊಠಡಿಗಳಲ್ಲಿ ಬೆಲೆಬಾಳುವ ಸಂಪತ್ತು ಇದೆ.. ಅಧಿಕಾರಿಗಳು ಆ ಸಂಪತ್ತಿನ ಸ್ವಾಧೀನಕ್ಕೆ ಮೊರೆ ಹೋಗಿದ್ದು ಯಾಕೆ? ಮೊದಲು, ಕೊಠಡಿಗಳ ಮೇಲೆ ಹಿಡಿತ ಸಾಧಿಸಿ, ಮುಂದೆ ಟ್ರಸ್ಟ್ ಅನ್ನೂ ಬರಖಾಸ್ತುಗೊಳಿಸಲು ಪ್ರಾಚ್ಯವಸ್ತು ಇಲಾಖೆ ಮುಂದಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!