ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸುಮಾರು ಅರ್ಧ ಗಂಟೆ ಕಾಲ ಆಂಬ್ಯುಲೆನ್ಸ್‌ನ ಬಾಗಿಲು ಜಾಮ್ ಕಾರಣ ಆಂಬ್ಯುಲೆನ್ಸ್ ಒಳಗೆ ಸಾವನ್ನಪ್ಪಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವ್ಯಕ್ತಿಯನ್ನು ಸಮೀಪದ ಫಿರೋಕ್‌ನ ಕೋಯಾಮೋನ್ (66) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ ಆಂಬ್ಯುಲೆನ್ಸ್‌ನ ಬಾಗಿಲು ಜಾಮ್ ಆಗಿದ್ದರಿಂದ ಗಾಯಾಳುವನ್ನು ಆಸ್ಪತ್ರೆಯ ಕ್ಯಾಶುವಾಲಿಟಿ ವಾರ್ಡ್‌ಗೆ ಸ್ಥಳಾಂತರಿಸಲು ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.
ಆಂಬ್ಯುಲೆನ್ಸ್‌ನ ಚಾಲಕ ಮತ್ತು ಸಿಬ್ಬಂದಿ ಬಾಗಿಲು ತೆರೆಯಲು ಹರಸಾಹಸ ಮಾಡಿದರೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ನಂತರದಲ್ಲಿ ಸುತ್ತಮುತ್ತಲಿನ ಜನರು ಕಿಟಕಿಯ ಗಾಜನ್ನು ಒಡೆದು ಆಂಬುಲೆನ್ಸ್ ಒಳಗಿನಿಂದ ಬಾಗಿಲು ತೆರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸಂಜೆ ಸ್ಕೂಟರ್ ಡಿಕ್ಕಿ ಹೊಡೆದ ನಂತರ ಈ ವ್ಯಕ್ತಿಯನ್ನು ಕೊಯಮೊನ್ ಅವರನ್ನು ಬೀಚ್ ಆಸ್ಪತ್ರೆಗೆ ಕರೆತರಲಾಯಿತು. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವೈದ್ಯಕೀಯ ಕಾಲೇಜು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ.
Published On - 6:03 pm, Tue, 30 August 22