ಚಂದ್ರಯಾನ-3 ರ ಯಶಸ್ಸು ಅಮೃತಕಾಲದ ಆರಂಭದ ಅವಿಸ್ಮರಣೀಯ ಸಾಧನೆ; ಧರ್ಮೇಂದ್ರ ಪ್ರಧಾನ್ ಬಣ್ಣನೆ

|

Updated on: Aug 23, 2023 | 9:40 PM

Chandrayaan-3 success; ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಕ್ಕಾಗಿ ಇಸ್ರೋವನ್ನು ಅಭಿನಂದಿಸುತ್ತೇನೆ. ಚಂದ್ರನ ದಕ್ಷಿಣ ಧ್ರುವ ಇದುವರೆಗೆ ಯಾವುದೇ ದೇಶ ತಲುಪದ ತಾಣವಾಗಿದೆ. ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್​ ಮಾಡಿದ್ದಕ್ಕಾಗಿ ವಿಜಯೋತ್ಸವವನ್ನು ಆಚರಿಸುವ 140 ಕೋಟಿಗೂ ಹೆಚ್ಚು ಮಂದಿ ಭಾರತೀಯರ ಜತೆ ನಾನೂ ಸೇರಿದ್ದೇನೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಚಂದ್ರಯಾನ-3 ರ ಯಶಸ್ಸು ಅಮೃತಕಾಲದ ಆರಂಭದ ಅವಿಸ್ಮರಣೀಯ ಸಾಧನೆ; ಧರ್ಮೇಂದ್ರ ಪ್ರಧಾನ್ ಬಣ್ಣನೆ
ಧರ್ಮೇಂದ್ರ ಪ್ರಧಾನ್
Image Credit source: PTI
Follow us on

ನವದೆಹಲಿ, ಆಗಸ್ಟ್ 13: ಚಂದ್ರಯಾನ-3 ರ (Chandrayaan-3) ಲ್ಯಾಂಡರ್ ವಿಕ್ರಂ ಅನ್ನು ಚಂದ್ರನ ಮೇಲ್ಮೈಯಲ್ಲಿ ಬುಧವಾರ ಸಂಜೆ ಯಶಸ್ವಿಯಾಗಿ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವನ್ನು ಕೇಂದ್ರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅಭಿನಂದಿಸಿದ್ದಾರೆ. ಅಮೃತಕಾಲದ ಆರಂಭದ ಈ ಅವಿಸ್ಮರಣೀಯ ಸಾಧನೆಗೆ ಇಡೀ ದೇಶದ ಪರವಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಚಂದ್ರಯಾನ-3 ಅಮೃತ ಕಾಲದ ಬಹುದೊಡ್ಡ ಸಾಧನೆ ಎಂದ ಅವರು, ಚಂದ ಮಾಮ ಈಗ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಕ್ಕಾಗಿ ಇಸ್ರೋವನ್ನು ಅಭಿನಂದಿಸುತ್ತೇನೆ. ಚಂದ್ರನ ದಕ್ಷಿಣ ಧ್ರುವ ಇದುವರೆಗೆ ಯಾವುದೇ ದೇಶ ತಲುಪದ ತಾಣವಾಗಿದೆ. ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್​ ಮಾಡಿದ್ದಕ್ಕಾಗಿ ವಿಜಯೋತ್ಸವವನ್ನು ಆಚರಿಸುವ 140 ಕೋಟಿಗೂ ಹೆಚ್ಚು ಮಂದಿ ಭಾರತೀಯರ ಜತೆ ನಾನೂ ಸೇರಿದ್ದೇನೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಭಾರತೀಯ ತಂತ್ರಜ್ಞಾನದ ನಿಜವಾದ ಶಕ್ತಿಯು ಬಾಹ್ಯಾಕಾಶ ಪರಿಶೋಧನೆಯ ಗಡಿಗಳನ್ನು ದಾಟಿ ಹೊರಟಿದೆ ಎಂದು ಸಚಿವರು ಮತ್ತೊಂದು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಚಂದ್ರನಲ್ಲಿಳಿದ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳಲ್ಲಿ ಏನು ಮಾಡಲಿವೆ?

ಜುಲೈ 14 ರಂದು ಉಡಾವಣೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ರ ಲ್ಯಾಂಡರ್ ವಿಕ್ರಂ ಬುಧವಾರ ಸಂಜೆ (ಆಗಸ್ಟ್ 23) ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಇದರೊಂದಿಗೆ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತವು ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:38 pm, Wed, 23 August 23