ಚಂದ್ರನಲ್ಲಿಳಿದ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳಲ್ಲಿ ಏನು ಮಾಡಲಿವೆ?

Chandrayaan-3 success; ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್​ನಲ್ಲಿ 4 ವೈಜ್ಞಾನಿಕ ಉಪಕರಣಗಳಿವೆ. ಅವುಗಳು ಚಂದ್ರನಲ್ಲಿ ಕಂಪನದ, ಚಂದ್ರನ ಮೇಲ್ಮೈನಲ್ಲಿ ಶಾಖ ಸಾಗುವ ರೀತಿಯನ್ನು, ಚಂದ್ರನ ಮೇಲ್ಮೈನ ಬಳಿ ಇರುವ ಪ್ಲಾಸ್ಮಾ ವಾತಾವರಣವನ್ನು ಅಧ್ಯಯನ ನಡೆಸಲಿವೆ. ಪ್ರಗ್ಯಾನ್ ರೋವರ್​ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣವಳಿದ್ದು, ಚಂದ್ರನ ಮೇಲ್ಮೈನ ಸಂರಚನೆಯ ಅಧ್ಯಯನ ಮಾಡಲಿದೆ.

ಚಂದ್ರನಲ್ಲಿಳಿದ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳಲ್ಲಿ ಏನು ಮಾಡಲಿವೆ?
ಚಂದ್ರನಲ್ಲಿಳಿದ ವಿಕ್ರಂ ಲ್ಯಾಂಡರ್
Follow us
TV9 Web
| Updated By: Ganapathi Sharma

Updated on: Aug 23, 2023 | 8:37 PM

ಬೆಂಗಳೂರು, ಆಗಸ್ಟ್ 23: ಚಂದ್ರಯಾನ-3 ರ (Chandrayaan-3) ವಿಕ್ರಂ ಲ್ಯಾಂಡರ್​​ (Vikram Lander) ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಮಹತ್ತರ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿರುವ ಈ ಚಂದ್ರಯಾನ-3ರ ಗುರಿ ಏನು? ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ (Pragyan Rover), ಚಂದ್ರನ ಮೇಲೆ ಏನ್ ಮಾಡಲಿವೆ? ಇವುಗಳ ಅಧ್ಯಯನ ಏನು? ಇವು ಏನನ್ನು ದಕ್ಕಿಸಿಕೊಳ್ಳಲು ಯತ್ನಿಸಲಿವೆ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.

ಚಂದ್ರನ ಅಂಗಳದಲ್ಲಿ 14 ದಿನ ಏನು ಮಾಡಲಿದೆ ಪುಟಾಣಿ ರೋಬೋ?

ಜಗತ್ತಿನ ದೊಡ್ಡ ದೊಡ್ಡ ದೇಶಗಳು ಚಂದ್ರಲೋಕದ ಪೈಪೋಟಿಗೆ ಬಿದ್ದಿರುವಾಗಲೇ ಭಾರತ, ದೊಡ್ಡ ಹೆಜ್ಜೆ ಇಟ್ಟಿದೆ. ಚಂದ್ರಲೋಕಕ್ಕೆ ಪ್ರಯಾಣ ಆರಂಭಿಸಿಬಿಟ್ಟಿದೆ. ಈ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್, ಚಂದ್ರಲೋಕದಲ್ಲಿ ಕಾಲಿಟ್ಟಿವೆ. ಚಂದ್ರಲೋಕ ತಲುಪಿದ ಬಳಿಕ ಈ ಎರಡು ಒಟ್ಟಿಗೆ ಕಾರ್ಯಾಚರಣೆ ನಡೆಸಲಿವೆ. ಪರಸ್ಪರ ಸಂಪರ್ಕ ಸಾಧಿಸಿಕೊಂಡು ಕೆಲಸ ಮಾಡಲಿವೆ. ಈ ಲ್ಯಾಂಡರ್ ಮತ್ತು ರೋವರ್ ಕಾಲಿಟ್ಟಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ‘ವಾಟರ್ ಐಸ್’ ಮತ್ತು ಬೆಲೆಬಾಳುವ ಮಿನರಲ್ಸ್ ಇರುವ ಸಾಧ್ಯತೆ ಇದೆ.

ವಿಕ್ರಮ್​ನಲ್ಲಿವೆ 4 ವೈಜ್ಞಾನಿಕ ಉಪಕರಣ

ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್​ನಲ್ಲಿ 4 ವೈಜ್ಞಾನಿಕ ಉಪಕರಣಗಳಿವೆ. ಅವುಗಳು ಚಂದ್ರನಲ್ಲಿ ಕಂಪನದ, ಚಂದ್ರನ ಮೇಲ್ಮೈನಲ್ಲಿ ಶಾಖ ಸಾಗುವ ರೀತಿಯನ್ನು, ಚಂದ್ರನ ಮೇಲ್ಮೈನ ಬಳಿ ಇರುವ ಪ್ಲಾಸ್ಮಾ ವಾತಾವರಣವನ್ನು ಅಧ್ಯಯನ ನಡೆಸಲಿದ್ದು, ಭೂಮಿಯಿಂದ ಚಂದ್ರನ ದೂರವನ್ನು ನಿಖರವಾಗಿ ಅಳೆಯಲಿವೆ.

ಈ ನಾಲ್ಕು ಉಪಕರಣಗಳು ಒಂದೊಂದು ರೀತಿಯ ಅಧ್ಯಯನ ಮಾಡಲಿವೆ. ಮೊದಲ ಉಪಕರಣ, ಚಂದ್ರನ ಅಂಗಳದಲ್ಲಿ ಸಂಭವಿಸಬಹುದಾದ ಕಂಪನದ ಬಗ್ಗೆ ಅಧ್ಯಯನ ಮಾಡಲಿದೆ. ಎರಡನೇ ಉಪಕರಣ, ಚಂದ್ರನ ಮೇಲ್ಮೈನಲ್ಲಿ ಶಾಖ ಸಾಗುವ ರೀತಿಯನ್ನು ಅಧ್ಯಯನ ಮಾಡುತ್ತೆ. ವಿಕ್ರಮ್ ಲ್ಯಾಂಡರ್​ನ ಮೂರನೇ ಉಪಕರಣ, ಚಂದ್ರನ ಮೇಲ್ಮೈ ಬಳಿ ಇರುವ ಪ್ಲಾಸ್ಮಾ ವಾತಾವರಣದ ಕುರಿತು ಅಧ್ಯಯನ ಮಾಡುತ್ತೆ. ನಾಲ್ಕನೇ ಉಪಕರಣ, ಭೂಮಿಯಿಂದ ಚಂದ್ರ ಎಷ್ಟು ದೂರದಲ್ಲಿದ್ದಾನೆ ಅಂತಾ ಅತ್ಯಂತ ನಿಖರವಾಗಿ ಅಳೆಯಲು ಇಸ್ರೋ ವಿಜ್ಞಾನಿಗಳಿಗೆ ಸಹಾಯ ಮಾಡಲಿದೆ.

ಇದನ್ನೂ ಓದಿ: Chandrayaan-3: ಚಂದ್ರನನ್ನು ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್; ಇದು ಭಾರತದ ಸಾಧನೆ, ಐತಿಹಾಸಿಕ ಕ್ಷಣ

ಈ ವಿಕ್ರಮ್ ಲ್ಯಾಂಡರ್​ನಿಂದ ಹೊರಗಡೆ ಬಂದು ಚಂದ್ರನ ಮೇಲೆ ಓಡಾಡುವ ರೋವರ್ ಸಹ ಚಂದ್ರಲೋಕದಲ್ಲಿ ಕಮಾಲ್ ಮಾಡಲಿದೆ.

ರೋವರ್​ನಲ್ಲಿವೆ 2 ವೈಜ್ಞಾನಿಕ ಉಪಕರಣ

ಪ್ರಗ್ಯಾನ್ ಹೆಸರಿನ ಈ ರೋವರ್​ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣವಳಿವೆ. ಎಕ್ಸ್​ರೇ ಮತ್ತು ಲೇಸರ್ ಉಪಕರಣಗಳಿವೆ. ಈ ಎರಡರ ಸಹಾಯದಿಂದ ರೋವರ್, ಚಂದ್ರನ ಮೇಲ್ಮೈನ ಸಂರಚನೆಯ ಅಧ್ಯಯನ ಮಾಡಲಿದೆ. ಚಂದ್ರನ ಮಣ್ಣಿನಲ್ಲಿರುವ ಖನಿಜ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ವಿಶ್ಲೇಷಣೆ ಮಾಡಲಿದೆ.

ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ 14 ದಿನ ಸಕ್ರಿಯವಾಗಿರುತ್ತವೆ. ಚಂದ್ರನ ಮೇಲಿನ ಒಂದು ದಿನ, ಭೂಮಿಯ ಮೇಲೆ 14 ದಿನಕ್ಕೆ ಸಮ. ಈ ಎರಡು ಚಂದ್ರನ ಮೇಲೆ ಸಕ್ರಿಯವಾಗಿ ಕೆಲಸ ಮಾಡಲು ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳೋದು ತುಂಬಾ ಮುಖ್ಯ. ಹೀಗಾಗಿ, ಚಂದ್ರನ ಮೇಲೆ ಸೂರ್ಯೋದಯವಾಗುವ ಸರಿಯಾದ ಸಮಯಕ್ಕೆ ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಚಂದ್ರನ ಮೇಲೆ ಸೂರ್ಯಾಸ್ತವಾದರೆ, ಚಂದ್ರನಲ್ಲಿ ಉಷ್ಣಾಂಶ ಕುಸಿದು ಹೋಗುತ್ತೆ. ಆ ಬಳಿಕ ಲ್ಯಾಂಡರ್ ಮತ್ತು ರೋವರ್ ಕೆಲಸ ಮಾಡೋದು ಕಷ್ಟ.

2009 ರಲ್ಲೇ ಭಾರತದ ಚಂದ್ರಯಾನ-1, ಚಂದ್ರನ ಮೇಲೆ ನೀರಿದೆ ಅನ್ನೋ ಸಂಗತಿಯನ್ನು ಪತ್ತೆ ಮಾಡಿ, ಇತಿಹಾಸ ನಿರ್ಮಿಸಿತ್ತಿ. ಇದೀಗ, ಚಂದ್ರಯಾನ-3ರ ಮೂಲಕ ಯಾರೂ ತಲುಪದ ಚಂದ್ರನ ದಕ್ಷಿಣ ಧ್ರುವದತ್ತ ತಲುಪಲಾಗಿದೆ. ಈ ಯೋಜನೆ ಯಶಸ್ವಿಯಾಗಿರುವುದರಿಂದ, ಭೂಮಿ ಮೇಲೆ ಚಂದ್ರನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಗಳು ಪತ್ತೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ವಿಜ್ಞಾನಿಗಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವ ಮೇಲೆ ಕಣ್ಣೇಕೆ?

ಉಪಗ್ರಹ ಚಂದ್ರನಲ್ಲಿ ನೀರು ಹೆಪ್ಪುಗಟ್ಟಿದ ರೂಪದಲ್ಲಿದೆ. ಚಂದ್ರನಲ್ಲಿರುವ ಈ ನೀರಿನ ಕುರಿತು ಸಂಶೋಧನೆಗೆ ಪೈಪೋಟಿ ನಡೆಯುತ್ತಿದೆ. ಚಂದ್ರನಲ್ಲಿನ ನೀರು ಬಳಕೆ ಯೋಗ್ಯವಾ ಎಂಬುದನ್ನು ತಿಳಿದುಕೊಳ್ಳಲೂ ಜಗತ್ತಿನ ರಾಷ್ಟ್ರಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಚಂದ್ರನ ಮಣ್ಣಿನಲ್ಲಿ ಅತ್ಯಮೂಲ್ಯ ಹೀಲಿಯಂ-3 ಇರಬಹುದಾದ ಸಾಧ್ಯತೆ ಇದ್ದು, ಕೆಲವು ಅಂದಾಜುಗಳ ಪ್ರಕಾರ, ಚಂದ್ರನಲ್ಲಿ 10 ಲಕ್ಷ ಟನ್ ಹೀಲಿಯಂ-3 ಇದೆ ಎನ್ನಲಾಗಿದೆ. ಚಂದ್ರನಲ್ಲಿ ಐರನ್, ಟೈಟೇನಿಯಂ, ಅಲ್ಯೂಮಿನಿಯಂ, ಮ್ಯಾಗ್ನೇಷಿಯಂ ಮತ್ತು ಸಿಲಿಕಾನ್ ಸಹ ಹೇರಳವಾಗಿವೆ ಅನ್ನೋ ನಿರೀಕ್ಷೆಗಳಿವೆ.

ಇದನ್ನೂ ಓದಿ: PM Modi on Chandrayaan 3: ಚಂದ್ರಯಾನ-3ರ ಯಶಸ್ಸಿಗೆ ಮೋದಿ ಹರ್ಷ; ಅಮೃತಕಾಲದಲ್ಲಿ ಸುರಿಯಿತು ಯಶಸ್ಸಿನ ಮಕರಂದ ಎಂದ ಪ್ರಧಾನಿ

ಹೀಗಾಗಿ, ಚಂದ್ರನ ಕುರಿತು ತಿಳಿದುಕೊಳ್ಳಲು, ಚಂದ್ರಲೋಕದಲ್ಲಿ ನೆಲೆ ನಿರ್ಮಿಸಿಕೊಳ್ಳಲು ಪೈಪೋಟಿ ಶುರುವಾಗಿದೆ. 1972ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರಲೋಕಕ್ಕೆ ಮನುಷ್ಯರನ್ನು ಕಳುಹಿಸಲು ಅಮೆರಿಕ ಸಜ್ಜಾಗುತ್ತಿದೆ. 2025 ರಲ್ಲಿ ಅಮೆರಿಕದ ಗಗನಯಾತ್ರಿಗಳು ಚಂದ್ರನ ಅಂಗಳಕ್ಕೆ ಹೋಗಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್