ಚಂದ್ರಯಾನ ಆಯ್ತು ಇನ್ನು ಸೂರ್ಯಯಾನ; ಯಶಸ್ಸಿನ ಸಂಭ್ರಮದಲ್ಲಿ ಇಸ್ರೋ ಮತ್ತೊಂದು ಯೋಜನೆ ಬಗ್ಗೆ ಮೋದಿ ಹೇಳಿದ್ದೇನು?

ಸೂರ್ಯನನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ಆದಿತ್ಯ ಎಲ್1 ಉಡಾವಣೆಗೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ. ಚಂದ್ರಯಾನ-3ರ ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ ಸೂರ್ಯಯಾನ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಿದರು.

ಚಂದ್ರಯಾನ ಆಯ್ತು ಇನ್ನು ಸೂರ್ಯಯಾನ; ಯಶಸ್ಸಿನ ಸಂಭ್ರಮದಲ್ಲಿ ಇಸ್ರೋ ಮತ್ತೊಂದು ಯೋಜನೆ ಬಗ್ಗೆ ಮೋದಿ ಹೇಳಿದ್ದೇನು?
ಆದಿತ್ಯ ಎಲ್​1
Follow us
Ganapathi Sharma
|

Updated on: Aug 23, 2023 | 7:09 PM

ಜೊಹಾನ್ಸ್​ಬರ್ಗ್, ಆಗಸ್ಟ್ 23: ಚಂದ್ರಯಾನ-3ರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹರ್ಷ ವ್ಯಕ್ತಪಡಿಸಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಜ್ಞಾನಿಗಳನ್ನು ಹಾಗೂ ಭಾರತೀಯರನ್ನು ಅಭಿನಂದಿಸಿದರು. ಜತೆಗೆ, ಇಸ್ರೋದ ಮಹತ್ವಾಕಾಂಕ್ಷೆಯ ಮತ್ತೊಂದು ಯೋಜನೆ ಬಗ್ಗೆಯೂ ಪ್ರಸ್ತಾಪಿಸಿದರು. ಸೂರ್ಯನನ್ನು ಅಧ್ಯಯನ ಮಾಡುವ ಉದ್ದೇಶದೊಂದಿಗೆ ಇಸ್ರೋ ಉಡಾವಣೆ ಮಾಡಲಿರುವ ಆದಿತ್ಯ ಎಲ್​1 (Aditya L1 mission) ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು. ಆ ಮೂಲಕ ಭಾರತವು ಮತ್ತೊಂದು ಸಾಹಸಕ್ಕೆ ಅಣಿಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಸೂರ್ಯನನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ಆದಿತ್ಯ ಎಲ್1 ಉಡಾವಣೆಗೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ.

ಇದಲ್ಲದೆ, ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆ ಗಗನಯಾನ ಹಾಗೂ ಇಸ್ರೋದ ಇತರ ಯೋಜನೆಗಳ ಯಶಸ್ಸಿಗೆ ಮೋದಿ ಶುಭ ಹಾರೈಸಿದರು.

ಇದನ್ನೂ ಓದಿ: PM Modi on Chandrayaan 3: ಚಂದ್ರಯಾನ-3ರ ಯಶಸ್ಸಿಗೆ ಮೋದಿ ಹರ್ಷ; ಅಮೃತಕಾಲದಲ್ಲಿ ಸುರಿಯಿತು ಯಶಸ್ಸಿನ ಮಕರಂದ ಎಂದ ಪ್ರಧಾನಿ

ಏನಿದು ಆದಿತ್ಯ ಎಲ್​ 1 ಮಿಷನ್‌?

ಆದಿತ್ಯ ಎಲ್​ 1 ಭಾರತದ ಮೊದಲಸೌರ ಮಿಷನ್‌ ಆಗಿದ್ದು ಸುಮಾರು 5 ವರ್ಷಗಳ ಕಾಲ ಸೂರ್ಯನ ಅಧ್ಯಯನ ಮಾಡಲಿದೆ. ಪಿಎಸ್​ಎಲ್​ವಿ ರಾಕೆಟ್ ಮೂಲಕ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇ೦ದ್ರದಿಂದ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ವರದಿಯೊಂದರ ಪ್ರಕಾರ, ಬಾಹ್ಯಾಕಾಶ ನೌಕೆಯು ವಿಭಿನ್ನ ಕೋನಗಳಿ೦ದ ಸೂರ್ಯನನ್ನು ಅಧ್ಯಯನ ಮಾಡಲು ಏಳು ವೈಜ್ನಾನಿಕ ಪೇಲೋಡ್‌ಗಳನ್ನು ಹೊಂದಿರಲಿದೆ. ಮೊದಲ ಹಂತದಲ್ಲಿ ಭೂಮಿಯ ಕೆಳಕಕ್ಷೆಯಲ್ಲಿ ಇದನ್ನು ಇರಿಸಲಾಗುತ್ತದೆ. ಪರಿಣಾಮವಾಗಿ ಸುಲಭವಾಗಿ ಸೂರ್ಯನ ಅಧ್ಯಯನ ನಡೆಸುವುದು ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ