2020 year in review | ಮೊದಲ ತ್ರೈಮಾಸಿಕದಲ್ಲಿ ಇಣುಕಿದ್ದು ಕೊರೊನಾ, ಕೇಳಿಸಿದ್ದು ವಲಸೆ ಕಾರ್ಮಿಕರ ನಿಟ್ಟುಸಿರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 10:20 AM

2021ರ ಪ್ರಾರಂಭಕ್ಕೆ ಇನ್ನೇನು ಮೂರು ಹೆಜ್ಜೆಗಳಷ್ಟೇ ಬಾಕಿ. 2020ರಲ್ಲಿ ಏನೇನಾಯಿತು ಎಂಬ ಚಿತ್ರನೋಟವನ್ನು ಟಿವಿ9 ಡಿಜಿಟಲ್ ತೆರೆದಿಟ್ಟಿದೆ. ಇಲ್ಲಿ ಜನವರಿಯಿಂದ ಮಾರ್ಚ್​ವರೆಗಿನ ಪ್ರಮುಖ ಘಟನೆಗಳ ಪ್ರಾತಿನಿಧಿಕ ಚಿತ್ರಗಳಿವೆ.

1 / 8
ಭಾರತದಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿದ್ದು ಜನವರಿ 30ರಂದು. ಕೇರಳಕ್ಕೆ ಮರಳಿದ್ದ ಚೀನಾದ ವುಹಾನ್​ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.

2 / 8
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ಈ ವರ್ಷದ ಪ್ರಮುಖ ಘಟನೆಗಳಲ್ಲೊಂದು. ಶಾಹಿನ್ ಭಾಗ್​ನಲ್ಲಿ ಹಲವು ತಿಂಗಳುಗಳ ಕಾಲ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

3 / 8
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 62ರಲ್ಲಿ ಆಪ್ (ಆಮ್ ಆದ್ಮಿ ಪಕ್ಷ) ಜಯಗಳಿಸಿತು. ಆಮ್​ಆದ್ಮಿ ಪಕ್ಷ ಎರಡನೇ ಸಲ ದೆಹಲಿಯ ಗದ್ದುಗೆ ಏರಿತ್ತು. ಬಿಜೆಪಿ ಅಬ್ಬರದ ಪ್ರಚಾರದ ನಡುವೆಯೂ ಆಪ್  ಶೇ.53.5 ರಷ್ಟು ಮತ ಗಳಿಸಿತ್ತು. ಅರವಿಂದ್ ಕೇಜ್ರಿವಾಲ್ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದನ್ನು ಫಲಿತಾಂಶವೇ ಸಾರಿ ಹೇಳಿತು. ಫೆಬ್ರುವರಿ 16ರಂದು ಅರವಿಂದ ಕೇಜ್ರಿವಾಲ್ 3ನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

4 / 8
ಅಮೇರಿಕಾದ ಅಧ್ಯಕ್ಷರಾಗಿದ್ದ ಡೋನಾಲ್ಡ್​ ಟ್ರಂಪ್ ಭಾರತ ಭೇಟಿ ದೇಶದಾದ್ಯಂತ ಹಲವು ವಾಗ್ವಾದಗಳಿಗೆ ಎಡೆಮಾಡಿತು. ಅದ್ದೂರಿ ಸ್ವಾಗತ ಕೋರಿ, ‘ನಮಸ್ತೇ ಟ್ರಂಪ್’ ಘೋಷವಾಕ್ಯದೊಂದಿಗೆ ಭಾರತದಲ್ಲಿ ಟ್ರಂಪ್​ರನ್ನು ಸ್ವಾಗತಿಸಲಾಯಿತು. ಡೊನಾಲ್ಡ್ ಟ್ರಂಪ್ ಭೇಟಿಯೇ ಕೊರೊನಾ ಸೋಂಕು ಹೆಚ್ಚಲು ಕಾರಣವಾಯಿತು ಎಂದು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ದೂರಿದರು. ಫೆಬ್ರುವರಿ 24-25ರಂದು ಟ್ರಂಪ್ ಭಾರತದಲ್ಲಿದ್ದರು.

5 / 8
ಭಾರತದಲ್ಲಿ ಮಾರ್ಚ್ 23ರಿಂದ ಎಪ್ರಿಲ್ 14ರವರೆಗೆ ಮೊದಲ ಹಂತದ ಕೊರೊನಾ ಲಾಕ್​ಡೌನ್ ಘೋಷಣೆಯಾಗಿತ್ತು. ವೈದ್ಯರು, ದಾದಿಯರು, ಸ್ವಚ್ಛತಾ ಸೇನಾನಿಗಳು, ಪೊಲೀಸರು, ಪತ್ರಕರ್ತರು, ಸಂಶೋಧಕರು ಅತೀ ಅವಶ್ಯಕ ಸೇವೆ ಸಲ್ಲಿಸಿದರು. ದೇಶದ ಜನರು ಬಗೆಬಗೆಯಾಗಿ ‘ಕೊರೊನಾ ವಾರಿಯರ್ಸ್​ಗಳಿಗೆ ಗೌರವ ಸಲ್ಲಿಸಿದರು.

6 / 8
ಚಲಿಸುವ ಬಸ್​ನಲ್ಲಿ ಯುವತಿಯ ಮೇಲೆ ಡಿಸೆಂಬರ್ 16, 2012ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವು ನಂತರದ ದಿನಗಳಲ್ಲಿ ‘ನಿರ್ಭಯಾ’ ಪ್ರಕರಣ ಎಂದೇ ಜನಜನಿತವಾಯಿತು. ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೆ ಏರಿಸಲಾಯಿತು.

7 / 8
ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲೆಂದು ದೇಶವ್ಯಾಪಿ ಏಕಾಏಕಿ ಲಾಕ್​ಡೌನ್ ಘೋಷಣೆಯಾಯಿತು. ಸಾರ್ವಜನಿಕ ಸಾರಿಗೆ ಸಂಪರ್ಕ ಸ್ಥಗಿತವಾಯಿತು. ವಿವಿಧೆಡೆ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಊರು ಸೇರಲಾರದೇ ತಳಮಳಿಸಿದರು. ಚಳಿಯ ರಾತ್ರಿಗಳನ್ನು ಹಸಿವೆಯಲ್ಲೇ ಕಳೆದು ನೋವು-ಸಂಕಟ ಅನುಭವಿಸಿದರು.

8 / 8
ಲಾಕ್​ಡೌನ್ ಅವಧಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಹೀಗಾಗಿ ಪರಿಸರವೂ ಚೇತರಿಸಿಕೊಂಡಿತು. ಬೆಂಗಳೂರು ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ವನ್ಯಜೀವಿಗಳು ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡವು.

Published On - 6:59 am, Tue, 29 December 20