ರೂಪಾಂತರಿ ಕೊರೊನಾ; ಬ್ರಿಟನ್​ನಿಂದ ಬಂದ 6 ಮಂದಿಯಲ್ಲಿ ವೈರಸ್​ ಪಕ್ಕಾ.. ಬೆಂಗಳೂರಲ್ಲೂ ಮೂವರಿಗೆ ಸೋಂಕು

ನವೆಂಬರ್​ 25ರಿಂದ ಡಿಸೆಂಬರ್​ 23ರವರೆಗೆ ಬ್ರಿಟನ್​ನಿಂದ ಒಟ್ಟು 33,000 ಮಂದಿ ಭಾರತಕ್ಕೆ ಬಂದಿದ್ದಾರೆ. ವಿವಿಧ ಏರ್​ಪೋರ್ಟ್​ಗಳಿಗೆ ಬಂದು ತಲುಪಿದ್ದ ಅವರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಹಾಗೇ, ಅವರ ಸಂಪರ್ಕಕ್ಕೆ ಬಂದವರನ್ನೂ ಟ್ರ್ಯಾಕ್​ ಮಾಡುವ ಕಾರ್ಯ ನಡೆದಿತ್ತು. ಅದಾದ ಬಳಿಕ ಇವರಲ್ಲಿ 114 ಮಂದಿಯಲ್ಲಿ ಸಾಮಾನ್ಯ ಕೊರೊನಾ ವೈರಸ್ ಪತ್ತೆಯಾಗಿತ್ತು.

ರೂಪಾಂತರಿ ಕೊರೊನಾ; ಬ್ರಿಟನ್​ನಿಂದ ಬಂದ 6 ಮಂದಿಯಲ್ಲಿ ವೈರಸ್​ ಪಕ್ಕಾ.. ಬೆಂಗಳೂರಲ್ಲೂ ಮೂವರಿಗೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on:Dec 29, 2020 | 1:05 PM

ದೆಹಲಿ: ಇತ್ತೀಚೆಗೆ ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ್ದ ಒಟ್ಟು 6 ಮಂದಿಯಲ್ಲಿ ಕೊರೊನಾ ರೂಪಾಂತರ ವೈರಸ್ ಇರುವುದು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಯುಕೆಯಲ್ಲಿ ರೂಪಾಂತರ ಕೊರೊನಾ ವೈರಸ್​ ಅಲೆ ಹೆಚ್ಚುತ್ತಿರುವುದರಿಂದ ಅಲ್ಲಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದ್ದು, ಇತ್ತೀಚೆಗೆ ಆಗಮಿಸಿದ್ದವರ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು. ಇಂದು ವರದಿ ಬಂದಿದ್ದು, ಆರು ಜನರಲ್ಲಿ ರೂಪಾಂತರಿ ಕೊರೊನಾ ಇರುವುದು ಪಕ್ಕಾ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಒಟ್ಟು ಆರು ಪ್ರಕರಣಗಳಲ್ಲಿ ಮೂವರ ಗಂಟಲುದ್ರವ, ರಕ್ತ ಮಾದರಿಯನ್ನು ಬೆಂಗಳೂರಿನ ನಿಮಾನ್ಸ್​ನಲ್ಲಿ ಮತ್ತು ಇಬ್ಬರದ್ದನ್ನು ಹೈದರಾಬಾದ್​ನ ಸೆಲ್ಯುಲರ್​ ಮತ್ತು ಅಣ್ವಿಕ ಜೀವಶಾಸ್ತ್ರ ಕೇಂದ್ರ ಹಾಗೂ ಮತ್ತೊಬ್ಬನ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್​ ಆಫರ್​ ವೈರಾಲಜಿಯಲ್ಲಿ ಪರೀಕ್ಷಿಸಲಾಗಿತ್ತು. ಸದ್ಯ ಆರೂ ಮಂದಿಗೆ ಪ್ರತ್ಯೇಕ ಐಸೋಲೇಶನ್​ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ನವೆಂಬರ್​ 25ರಿಂದ ಡಿಸೆಂಬರ್​ 23ರವರೆಗೆ ಬ್ರಿಟನ್​ನಿಂದ ಒಟ್ಟು 33,000 ಮಂದಿ ಭಾರತಕ್ಕೆ ಬಂದಿದ್ದಾರೆ. ವಿವಿಧ ಏರ್​ಪೋರ್ಟ್​ಗಳಿಗೆ ಬಂದು ತಲುಪಿದ್ದ ಅವರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಹಾಗೇ, ಅವರ ಸಂಪರ್ಕಕ್ಕೆ ಬಂದವರನ್ನೂ ಟ್ರ್ಯಾಕ್​ ಮಾಡುವ ಕಾರ್ಯ ನಡೆದಿತ್ತು. ಅದಾದ ಬಳಿಕ ಇವರಲ್ಲಿ 114 ಮಂದಿಯಲ್ಲಿ ಸಾಮಾನ್ಯ ಕೊರೊನಾ ವೈರಸ್ ಪತ್ತೆಯಾಗಿತ್ತು.

ಆದರೆ ಈಗ 6 ಮಂದಿಯಲ್ಲಿ ಹೊಸ ರೂಪಾಂತರ ವೈರಸ್ ಇರುವುದು ಗೊತ್ತಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿಯೇ ಮೂವರಲ್ಲಿ ಕಾಣಿಸಿಕೊಂಡಿದ್ದು ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸದ್ಯ ಆರು ಮಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಅವರ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್​ಗೆ ಒಳಪಡಿಸಲು ವ್ಯವಸ್ಥೆ ಮಾಡಲಾಗಿದೆ. ಭಾರತ, ರೂಪಾಂತರ ಕೊರೊನಾ ವೈರಸ್ ಪತ್ತೆಯಾದ 14ನೇ ದೇಶವಾಗಿದೆ.

ರೂಪಾಂತರಿತ ವೈರಸ್​ಗೆ ಹೆಚ್ಚು ಶಕ್ತಿಯಿಲ್ಲ: ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ್​

Published On - 11:02 am, Tue, 29 December 20