ಚಾಮರಾಜನಗರ: ಬಿಳಿಕಲ್ಲು ಕ್ವಾರಿಯಲ್ಲಿ ಸ್ಪೋಟಕ ಸಿಡಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿ ನಿನ್ನೆ (ಡಿಸೆಂಬರ್ 28) ರಾತ್ರಿ ನಡೆದಿದೆ.
ಕ್ವಾರಿ ಅದೇ ಗ್ರಾಮದ ಸ್ವಾಮಿ ಎಂಬುವವನಿಗೆ ಸೇರಿದ್ದು, ಬಿಳಿಕಲ್ಲು ಒಡೆಯಲು ಸ್ಟೋಟಕ ಬಳಸಿದ್ದ. ಆದರೆ ಕಾರ್ಮಿಕ ಮಹದೇವಶೆಟ್ಟಿ (37) ಸಾವಿಗೀಡಾದಂತೆ ಮಾಲೀಕ ನಾಪತ್ತೆಯಾಗಿದ್ದಾನೆ. ಸರ್ಕಾರಿ ಜಾಗವನ್ನು ಗುತ್ತಿಗೆಗೆ ಪಡೆದುಕೊಂಡು ಕ್ವಾರಿ ನಡೆಸುತ್ತಿರುವ ಸ್ವಾಮಿಯನ್ನು ಹುಡುಕಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.