ಧರ್ಮೇಗೌಡ ಆತ್ಮಹತ್ಯೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿ ಟಿ ರವಿ ಹೇಳಿದ್ದೇನು?
ಧರ್ಮೇಗೌಡ ತನ್ನ ಡ್ರೈವರ್ ಜೊತೆ ಖಾಸಗಿ ಕಾರಿನಲ್ಲಿ ಗುಣಸಾಗರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸುಮಾರು 4ಗಂಟೆಯಿಂದ ಇಲ್ಲೆ ಸುತ್ತಾಡಿ ಬಳಿಕ 6ಗಂಟೆಗೆ ರೈಲಿಗೆ ತಲೆ ಕೊಟ್ಟಿದ್ದಾರೆ. -ಸಿ.ಟಿ.ರವಿ
ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ ಸುಮಾರಿಗೆ ಧರ್ಮೇಗೌಡರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸಿ.ಟಿ.ರವಿ, ಚಿಕ್ಕಮಗಳೂರು ಎಸ್‌ಪಿ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ಧರ್ಮೇಗೌಡ ತನ್ನ ಡ್ರೈವರ್ ಜೊತೆ ಖಾಸಗಿ ಕಾರಿನಲ್ಲಿ ಗುಣಸಾಗರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸುಮಾರು 4ಗಂಟೆಯಿಂದ ಇಲ್ಲೆ ಸುತ್ತಾಡಿ ಬಳಿಕ 6ಗಂಟೆಗೆ ರೈಲಿಗೆ ತಲೆ ಕೊಟ್ಟಿದ್ದಾರೆ. ಈ ವಿಷಯ ಮನೆಯವರಿಗೆ ತಿಳಿದಿದ್ದು ತಡ ರಾತ್ರಿ 12ಗಂಟೆಯ ನಂತರ. ಪೊಲೀಸರು ಧರ್ಮೇಗೌಡರ ಫೋನ್ ಟವರ್ ಲೊಕೇಶನ್ ಆಧರಿಸಿ ಟ್ರೇಸ್ ಮಾಡಿ 12.45ರ ಸಂದರ್ಭದಲ್ಲಿ ಮೃತದೇಹ ಪತ್ತೆ ಮಾಡಿದ್ದಾರೆ. ಬಳಿಕ ಮನೆಯವರಿಗೆ ವಿಷಯ ತಿಳಿಸಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದ್ರು.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಧರ್ಮೇಗೌಡ!
Published On - 8:50 am, Tue, 29 December 20