ಬೆಳಗಾವಿ ಮಹಾನಗರ ಪಾಲಿಕೆ‌ ಎದುರು ಧ್ವಜಸ್ತಂಭ ಸ್ಥಾಪಿಸುವಂತೆ ಕನ್ನಡ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಕನ್ನಡ ಕಾರ್ಯಕರ್ತರು ಧರಣಿ ಕುಳಿತಿದ್ದಾರೆ. ಧ್ವಜಸ್ತಂಭ ಸ್ಥಾಪನೆಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಕೂತ ಜಾಗದಿಂದ ಕದಲುವುದಿಲ್ಲೆಂದು ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ‌ ಎದುರು ಧ್ವಜಸ್ತಂಭ ಸ್ಥಾಪಿಸುವಂತೆ ಕನ್ನಡ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ
ಧ್ವಜಸ್ತಂಭ ಸ್ಥಾಪನೆ ಮಾಡುವಂತೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
Follow us
shruti hegde
|

Updated on:Dec 29, 2020 | 12:33 PM

ಬೆಳಗಾವಿ: ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಕನ್ನಡ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಧ್ವಜಸ್ತಂಭದ ಸ್ಥಾಪನೆಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಕೂತ ಜಾಗದಿಂದ ಕದಲುವುದಿಲ್ಲೆಂದು ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದಾರೆ.

ಕನ್ನಡಪರ ಹೋರಾಟಗಾರರಾದ ಶ್ರೀನಿವಾಸ ತಾಳೂಕರ್, ಕಸ್ತೂರಿ ಭಾವಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಈ ಕುರಿತಂತೆ ಇಂದು ಬೆಳಿಗ್ಗೆ(ಡಿ.29) 11ಗಂಟೆಗೆ ಡಿಸಿ ಎಂ.ಜಿ.ಹಿರೇಮಠ ಕನ್ನಡ ಸಂಘಟನೆಗಳ ಸಭೆ ಕರೆದಿದ್ದಾರೆ. ಸಭೆಗೆ ಹೋಗದ ನಿರ್ಧಾರ ಕೈಗೊಂಡು ಸಂಘಟನೆಗಳು ಅಹೋರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಘೋಷಣೆಗಳನ್ನು ಕೂಗುತ್ತ ಮಾಹಾನಗರ ಪಾಲಿಕೆಯ ಎದುರು ಧ್ವಜಸ್ತಂಭದ ಸ್ಥಾಪಿಸಬೇಕು. ಧ್ವಜಸ್ತಂಭದ ರಕ್ಷಣೆಯ ಭರವಸೆ ನೀಡುವವರೆಗೆ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಕೊರೆಯುವ ಚಳಿಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಧರಣಿಗೆ ಕುಳಿತಿದ್ದಾರೆ.

ಕನ್ನಡ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ..

Published On - 11:47 am, Tue, 29 December 20