ಮನೆಯಲ್ಲಿ ದರೋಡೆ ಮಾಡಿ ಹೋಗುವಾಗ ಮಹಿಳೆಗೆ ಮುತ್ತು ಕೊಟ್ಟ ಕಳ್ಳ!

ಮಹಾರಾಷ್ಟ್ರದ ಮುಂಬೈನ ಮಲಾಡ್‌ನಲ್ಲಿ ಕಳ್ಳನೊಬ್ಬ ದರೋಡೆ ಮುಗಿಸಿ ಮನೆಯಿಂದ ಹೋಗುವ ಮುನ್ನ ಆ ಮನೆಯ ಒಡತಿಗೆ ಮುತ್ತು ಕೊಟ್ಟು ಹೋಗಿದ್ದಾನೆ. ಮುಂಬೈನ ಮಲಾಡ್‌ನಲ್ಲಿ ಕಳ್ಳನೊಬ್ಬ ದರೋಡೆ ಬಳಿಕ ಮಹಿಳೆಯನ್ನು ಅನಿರೀಕ್ಷಿತವಾಗಿ ಚುಂಬಿಸಿ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಮನೆಯಲ್ಲಿ ದರೋಡೆ ಮಾಡಿ ಹೋಗುವಾಗ ಮಹಿಳೆಗೆ ಮುತ್ತು ಕೊಟ್ಟ ಕಳ್ಳ!
Arrest

Updated on: Jan 07, 2025 | 9:38 PM

ಮುಂಬೈ: ಮಹಾರಾಷ್ಟ್ರದ ಮುಂಬೈನ ಮಲಾಡ್ ಉಪನಗರದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮನೆಯ ಒಡತಿಗೆ ಮುತ್ತು ಕೊಟ್ಟು ಪರಾರಿಯಾಗಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯು ಜನವರಿ 3ರಂದು ಮಲಾಡ್‌ನ ಕುರಾರ್ ಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಕಳ್ಳನು ದರೋಡೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಿದ್ದಾನೆ. ಆದರೆ, ಮನೆಯನ್ನೆಲ್ಲ ಹುಡುಕಾಡಿ ಯಾವುದೇ ಬೆಲೆಬಾಳುವ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಳ್ಳ ಅನಿರೀಕ್ಷಿತ ಮನೆಯ ಒಡತಿಗೆ ಮುತ್ತು ನೀಡಿ, ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾನೆ.

ಕಳ್ಳನು ತಪ್ಪಿಸಿಕೊಳ್ಳುವ ಮೊದಲು ಮನೆಯಲ್ಲಿದ್ದ ಮಹಿಳೆಯನ್ನು ಚುಂಬಿಸಿದ್ದಾನೆ ಎಂದು ವರದಿಯಾಗಿದೆ. ಸಂತ್ರಸ್ತೆ, ಆಘಾತಗೊಂಡು ಸುಧಾರಿಸಿಕೊಳ್ಳುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ. ಆಕೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಪಂದಿಸಿದ ಅಧಿಕಾರಿಗಳು ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಲಂಕುಷವಾಗಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Viral: ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ

ಈ ಅಸಾಮಾನ್ಯ ಘಟನೆ ಬಗ್ಗೆ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಈ ಘಟನೆಯು ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ