ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ

|

Updated on: Sep 08, 2020 | 7:49 PM

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ. ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. […]

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ
Follow us on

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.

ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ.

ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. ಅದು ಅಲ್ಲಿ ಕಾಣಿಸದಿದ್ದಾಗ ತನ್ನ ನಂಬರ್​ಗೆ ಕರೆಮಾಡಿದ್ದಾನೆ. ಆದರೆ, ಅಷ್ಟರಲ್ಲಿ ಚಾಲಾಕಿ ಕಳ್ಳ ಮೊಬೈಲ್​ ಸ್ವಿಚ್​ ಆಫ್​ ಮಾಡಿಬಿಟ್ಟಿದ್ದ.

ತನ್ನ ಹಣೆಬರಹವನ್ನ ಶಪಿಸುತ್ತಾ ಅಲ್ಲಿಂದ ಹೋಗಿದ್ದ ಮಾಲೀಕ ಮತ್ತೊಮ್ಮೆ ಯಾಕೆ ತನ್ನ ನಂಬರ್​ಗೆ ಡೈಯಲ್​ ಮಾಡಬಾರದೆಂದು ಪ್ರಯತ್ನಿಸಿದ್ದಾನೆ. ಈ ವೇಳೆ ರಿಂಗ್​ ಆದ ಫೋನ್​ನ ಎತ್ತಿಕೊಂಡ ಕಳ್ಳ ನಿಮ್ಮ ಫೋನ್​ Use ಮಾಡೋಕೆ ಕಷ್ಟವಾಗ್ತಿದೆ. ನೀವೇ ಇಟ್ಕೊಳ್ಳಿ ಅಂತಾ ಮಾಲೀಕನಿಗೆ ಹೇಳಿ ಮೊಬೈಲ್​ ವಾಪಸ್​ ಮಾಡಿದ್ದಾನಂತೆ.