ಆನ್ಲೈನ್ ಗೇಮ್ನಲ್ಲಿ ತನ್ನನ್ನ ಸೋಲಿಸಿದ್ದಕ್ಕೆ.. 10 ವರ್ಷದ ಬಾಲಕಿಯ ತಲೆ ಜಜ್ಜಿ ಕೊಲೆಗೈದ!
ಭೋಪಾಲ್: ಕಂಪ್ಯೂಟರ್ ಮತ್ತು ಮೊಬೈಲ್ ಗೇಮ್ಗಳು ಯುವ ಪೀಳಿಗೆಯಲ್ಲಿ ಹಿಂಸಾಚಾರದ ಮನೋಭಾವ ಹೆಚ್ಚಿಸುತ್ತದೆ ಅನ್ನೋ ಮಾತು ಸಾಕಷ್ಟು ಬಾರಿ ಕೇಳಿದ್ದೇವೆ. ಇದಕ್ಕೆ ಸಾಕ್ಷಿಯೆಂಬಂತೆ ಆನ್ಲೈನ್ ಗೇಮ್ನಲ್ಲಿ ತನ್ನನ್ನು ಸೋಲಿಸಿದ್ದಕ್ಕೆ 11 ವರ್ಷದ ಬಾಲಕನೊಬ್ಬ ಹುಡುಗಿಯೊಬ್ಬಳನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು ಬೆಳಕಿಗೆ ಬಂದಿದೆ. ಹೌದು, ಕೊರೊನಾ ಕಂಟಕದಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸವೇ ಆನ್ಲೈನ್ ಸ್ವರೂಪ ಪಡೆಯುತ್ತಿರುವ ಈ ಕಾಲದಲ್ಲಿ ಆನ್ಲೈನ್ನಲ್ಲಿ ಆಡುತ್ತಿದ್ದ ಆಟವೊಂದರಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನನ್ನ ಪದೇ ಪದೇ ಸೋಲಿಸಿದಕ್ಕೆ […]
ಭೋಪಾಲ್: ಕಂಪ್ಯೂಟರ್ ಮತ್ತು ಮೊಬೈಲ್ ಗೇಮ್ಗಳು ಯುವ ಪೀಳಿಗೆಯಲ್ಲಿ ಹಿಂಸಾಚಾರದ ಮನೋಭಾವ ಹೆಚ್ಚಿಸುತ್ತದೆ ಅನ್ನೋ ಮಾತು ಸಾಕಷ್ಟು ಬಾರಿ ಕೇಳಿದ್ದೇವೆ. ಇದಕ್ಕೆ ಸಾಕ್ಷಿಯೆಂಬಂತೆ ಆನ್ಲೈನ್ ಗೇಮ್ನಲ್ಲಿ ತನ್ನನ್ನು ಸೋಲಿಸಿದ್ದಕ್ಕೆ 11 ವರ್ಷದ ಬಾಲಕನೊಬ್ಬ ಹುಡುಗಿಯೊಬ್ಬಳನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು ಬೆಳಕಿಗೆ ಬಂದಿದೆ.
ಹೌದು, ಕೊರೊನಾ ಕಂಟಕದಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸವೇ ಆನ್ಲೈನ್ ಸ್ವರೂಪ ಪಡೆಯುತ್ತಿರುವ ಈ ಕಾಲದಲ್ಲಿ ಆನ್ಲೈನ್ನಲ್ಲಿ ಆಡುತ್ತಿದ್ದ ಆಟವೊಂದರಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನನ್ನ ಪದೇ ಪದೇ ಸೋಲಿಸಿದಕ್ಕೆ 11 ವರ್ಷದ ಬಾಲಕನೊಬ್ಬ ಸಿಟ್ಟಿಗೆದ್ದಿದ್ದಾನೆ.
ಹುಡುಗಿಯ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ರೊಚ್ಚಿಗೆದ್ದ ಆ ಬಾಲಕ ಆಕೆಗೆ ನೆಪವೊಡ್ಡಿ ತಮ್ಮ ಮನೆ ಬಳಿಯಿದ್ದ ಖಾಲಿ ಜಾಗವೊಂದಕ್ಕೆ ಕರೆದುಕೊಂಡು ಹೋಗಿ ಬಳಿಕ ಆಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದಿದ್ದಾನೆ.
ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದಿದ್ದಾರೆ. ಒಟ್ನಲ್ಲಿ ಕೋಪಕ್ಕೆ ತಲೆಕೊಟ್ಟು 11 ವರ್ಷದ ಬಾಲಕ ಗೊತ್ತಿಲ್ಲದೇ ಕೊಲೆಗಾರನಾಗಿಬಿಟ್ಟ.