9/11ರ ಮಾದರಿಯಲ್ಲೇ ದಾಳಿ ಬೆದರಿಕೆ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ

| Updated By: Lakshmi Hegde

Updated on: Sep 11, 2021 | 10:01 AM

ಲಂಡನ್​​ಗೆ ಹೋಗುವ ಏರ್​ ಇಂಡಿಯಾ ವಿಮಾನದ ಮೇಲೆ, 9 /11ರ ಯುಎಸ್​ ದಾಳಿಯ ಮಾದರಿಯಲ್ಲೇ ದಾಳಿ ನಡೆಸುತ್ತೇವೆ, ಅದನ್ನು ಸ್ಫೋಟಿಸುತ್ತೇವೆ ಎಂದು ಬೆದರಿಕೆ ಕರೆ ಬಂದಿದೆ.

9/11ರ ಮಾದರಿಯಲ್ಲೇ ದಾಳಿ ಬೆದರಿಕೆ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ
ದೆಹಲಿ ವಿಮಾಣ ನಿಲ್ದಾಣ
Follow us on

ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೂರವಾದ ಉಗ್ರದಾಳಿ ಎಂದೇ ಪರಿಗಣಿಸಲ್ಪಟ್ಟ ದಿನವೆಂದರೆ 9/11/2001. ಅಂದು ಅಮೆರಿಕದ ಮೇಲೆ ನಡೆದ ದಾಳಿಗೆ ಇಂದು ಸರಿಯಾಗಿ 20 ವರ್ಷ. ಆದರೆ ಆತಂಕದ ವಿಚಾರವೆಂದರೆ ಅದೇ ಮಾದರಿಯಲ್ಲಿ ಏರ್​ ಇಂಡಿಯಾ ವಿಮಾನವೊಂದನ್ನು ಸ್ಫೋಟಿಸುತ್ತೇವೆ ಎಂದು ದೆಹಲಿ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಈ ನಿಟ್ಟಿನಲ್ಲಿ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. 

ಲಂಡನ್​​ಗೆ ಹೋಗುವ ಏರ್​ ಇಂಡಿಯಾ ವಿಮಾನದ ಮೇಲೆ, 9 /11ರ ಯುಎಸ್​ ದಾಳಿಯ ಮಾದರಿಯಲ್ಲೇ ದಾಳಿ ನಡೆಸುತ್ತೇವೆ, ಅದನ್ನು ಸ್ಫೋಟಿಸುತ್ತೇವೆ ಎಂದು ರಹೋಲಾ ಪೊಲೀಸ್​ ಠಾಣೆಗೆ ಗುರುವಾರ ರಾತ್ರಿ 10.30ರ ಹೊತ್ತಿಗೆ ಬೆದರಿಕೆ ಕರೆ ಬಂದಿದೆ. ಅಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ಕೂಡ, ದೆಹಲಿ ವಿಮಾನ ನಿಲ್ದಾಣವನ್ನು ನಾವು ವಶಪಡಿಸಿಕೊಳ್ಳುವ ಸಂಬಂಧ ಬೆದರಿಕೆ ಕರೆ ಬಂದಿದೆ. ಹೀಗಾಗಿ ಭದ್ರತಾ ಪಡೆಗಳಿಗೆ ಅಲರ್ಟ್​ ನೀಡಲಾಗಿದ್ದು, ವಿಮಾನ ನಿಲ್ದಾಣದ ಭದ್ರತೆ ಹೆಚ್ಚಿದೆ.  ಈ ಬಗ್ಗೆ ಪೊಲೀಸ್​ ಅಧಿಕಾರಿಯೊಬ್ಬರು ಎಎನ್​ಐ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.   ಸದ್ಯ ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರನ್ನೂ ಹೆಚ್ಚೆಚ್ಚು ಗಮನವಿರಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಬೆದರಿಕೆ ಕರೆ ಕುರಿತು ತನಿಖೆಯೂ ನಡೆಯುತ್ತಿದೆ.

ಇದನ್ನೂ ಓದಿ: ದೇಶದಲ್ಲಿ 3ನೇ ಸ್ಥಾನ ಹೊಂದಿರುವ ಹಾಸನ ಹಾಲು ಒಕ್ಕೂಟದಿಂದ ಇನ್ಮುಂದೆ ಅತ್ಯಾಧುನಿಕ ಸುವಾಸಿತ ಹಾಲು ಉತ್ಪಾದನೆ!

Published On - 9:59 am, Sat, 11 September 21