ಹಿಮಾಚಲಪ್ರದೇಶದ ಕಿನ್ನೊರ್ ಜಿಲ್ಲೆಯ ಕರಛಮದಲ್ಲಿ ಯೋಧರ ವಾಹನ 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ. 8 ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಧರಿಗೆ ಡ್ರೈವಿಂಗ್ ಕಲಿಸುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಉರುಳಿ ಅವಘಡ ಸಂಭವಿಸಿದೆ.
ಬೆಳೆ ತ್ಯಾಜ್ಯಕ್ಕೆ ಬೆಂಕಿ
ಪಂಜಾಬ್‌ನ ಲುಧಿಯಾನಾ ಹೆದ್ದಾರಿಯಲ್ಲಿ ಬೆಳೆ ತ್ಯಾಜ್ಯ ಸುಡುವಿಕೆ ಮುಂದುವರೆದಿದೆ. ರಾಷ್ಟ್ರ ರಾಜಧಾನಿ ಸುತ್ತಮುತ್ತ ರಾಜ್ಯದಲ್ಲಿ ತಾಜ್ಯ ಸುಡುವುದರಿಂದ ದೆಹಲಿಯಲ್ಲಿ ಸಾಕಷ್ಟು ವಾಯುಮಾಲಿನ್ಯ ವಾಗುತ್ತಿದ್ರೂ, ಬೆಳೆ ತ್ಯಾಜ್ಯ ಸುಡುವುದನ್ನ ನಿಲ್ಲಿಸಿಲ್ಲ. ಬೆಳೆ ತಾಜ್ಯಕ್ಕೆ ಬೆಂಕಿ ಹಾಕಿದ್ರಿಂದ ಸಾಕಷ್ಟು ವಾಯುಮಾಲಿನ್ಯ ಆಗುತ್ತಿದ್ದು, ದಟ್ಟ ಹೊಗೆ ಆವರಿಸಿದೆ.
ಹರಿದು ಬಂದ ವಿದೇಶಿ ವಿನಿಮಯ
ಭಾರತಕ್ಕೆ ಮಿಲಿಯನ್ ಡಾಲರ್ ವಿದೇಶಿ ವಿನಿಮಯ ಹರಿದು ಬಂದಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು 2019ರ ನವೆಂಬರ್ 15ಕ್ಕೆ ಕೊನೆಗೊಂಡ ವಾರದಲ್ಲಿ ₹ 317 ಕೋಟಿಗೆ ಹೆಚ್ಚಾಗಿ 32.25 ಲಕ್ಷಕೋಟಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ.