‘ರಾಜಕೀಯಕ್ಕೆ ಬರುವ ಬಯಕೆ ಇರಲಿಲ್ಲ’
ರಾಜಕೀಯಕ್ಕೆ ಬರಬೇಕೆಂಬ ಬಯಕೆ ನನ್ನಲ್ಲಿ ಎಂದೂ ಇರಲಿಲ್ಲ. ಆದ್ರೀಗ ಅದರ ಭಾಗವಾಗಿರುವುದರಿಂದ, ಜನರ ಸೇವೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ನಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಲಿಸುತ್ತಿದ್ದ ಕಾರು ಧಗಧಗ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಣಿವೆಯಲ್ಲಿ 3ವಿಶೇಷ […]
ರಾಜಕೀಯಕ್ಕೆ ಬರಬೇಕೆಂಬ ಬಯಕೆ ನನ್ನಲ್ಲಿ ಎಂದೂ ಇರಲಿಲ್ಲ. ಆದ್ರೀಗ ಅದರ ಭಾಗವಾಗಿರುವುದರಿಂದ, ಜನರ ಸೇವೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ನಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಲಿಸುತ್ತಿದ್ದ ಕಾರು ಧಗಧಗ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಣಿವೆಯಲ್ಲಿ 3ವಿಶೇಷ ಪಡೆ ನಿಯೋಜನೆ: ಜಮ್ಮುಕಾಶ್ಮಿರದಲ್ಲಿ ಮೂರು ಪವರ್ ಫುಲ್ ಪಡೆಗಳನ್ನ ನಿಯೋಜನೆ ಮಾಡಲಾಗಿದೆ. ಪ್ಯಾರಾ ಕಮಾಂಡೋಸ್ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಮೂರು ಪಡೆಗಳು ಜಂಟಿಯಾಗಿ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸಲಿದ್ದಾರೆ..
ಭೀಕರ ರಸ್ತೆ ಅಪಘಾತ: ಮಧ್ಯಪ್ರದೇಶ ಉಜ್ಜಿಯನಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಬಸ್. ಬೈಕ್ನಿಂದ ರಸ್ತೆ ದಾಟುತ್ತಿರುವ ಯುವಕರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬೈಕ್ ಸವಾರನಿಗೆ ಎರಡು ದಿನಗಳ ಹಿಂದೆ ಮದುವೆಯಾಗಿತ್ತಂತೆ.
ಚಿನ್ನದ ಆಮುದುವಿನಲ್ಲಿ ಶೇ.9 ರಷ್ಟು ಇಳಿಕೆ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ – ಅಕ್ಟೋಬರ್ ಅವದಿಯಲ್ಲಿ ಚಿನ್ನದ ಆಮುದು ಶೇ 9 ರಷ್ಟು ಇಳಿಕೆಯಾಗಿದ್ದು, ಒಟ್ಟು 1.25ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿದೆ. 2018-19 ಇದೇ ಅವದಿಯಲ್ಲಿ 1.39 ಲಕ್ಷ ಕೋಟಿ ರೂಪಾಯಿ ಆಮದು ಆಗಿತ್ತು.