ವಿಚಾರಣೆ ಮುಕ್ತಾಯ, ನಾಳೆ ಬೆಳಗ್ಗೆ ಆದೇಶ: ಅಲ್ಲೀವರೆಗೂ ಫಡ್ನವಿಸ್ ಸರ್ಕಾರ ಸೇಫ್!
ದೆಹಲಿ:ಮಹಾರಾಷ್ಟ್ರ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಪಕ್ಷಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಆದೇಶ ಕಾಯ್ದಿರಿಸಿ, ಸುಪ್ರೀಂಕೋರ್ಟ್ ಇದೀಗತಾನೆ ವಿಚಾರಣೆ ಮುಕ್ತಾಯಗೊಳಿಸಿದೆ. ಸಂಖ್ಯಾಬಲ ಇಲ್ಲದಿದ್ದರೂ, ಆತುರಾತುರವಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಮಿತ್ರ ಪಕ್ಷಗಳು ನಿನ್ನೆ ಕ್ಷಿಪ್ರಗತಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಿನ್ನೆ ರಜಾ ದಿನವಾದ ಭಾನುವಾರವೂ ವಿಶೇಷ ವಿಚಾರಣೆಗೆ ಅನುಮತಿಸಿದ್ದ ಕೋರ್ಟ್, ಇಂದು ಸೋಮವಾರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು […]
ದೆಹಲಿ:ಮಹಾರಾಷ್ಟ್ರ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಪಕ್ಷಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಆದೇಶ ಕಾಯ್ದಿರಿಸಿ, ಸುಪ್ರೀಂಕೋರ್ಟ್ ಇದೀಗತಾನೆ ವಿಚಾರಣೆ ಮುಕ್ತಾಯಗೊಳಿಸಿದೆ.
ಸಂಖ್ಯಾಬಲ ಇಲ್ಲದಿದ್ದರೂ, ಆತುರಾತುರವಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಮಿತ್ರ ಪಕ್ಷಗಳು ನಿನ್ನೆ ಕ್ಷಿಪ್ರಗತಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಿನ್ನೆ ರಜಾ ದಿನವಾದ ಭಾನುವಾರವೂ ವಿಶೇಷ ವಿಚಾರಣೆಗೆ ಅನುಮತಿಸಿದ್ದ ಕೋರ್ಟ್, ಇಂದು ಸೋಮವಾರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ವಿಶೇಷ ಪೀಠದಿಂದ ವಿಚಾರಣೆ ನಡೆಯಿತು. ತೀವ್ರ ವಾದ-ಪ್ರತಿವಾದದ ಬಳಿಕ, ಕೋರ್ಟ್ ತೀರ್ಪು ಕಾಯ್ದಿರಿಸಿ ವಿಚಾರಣೆ ಮುಕ್ತಾಯಗೊಳಿಸಿದೆ.
Published On - 11:57 am, Mon, 25 November 19