ಕಾರಿನ ಆಟೋಮ್ಯಾಟಿಕ್ ಡೋರ್ ಲಾಕ್, ಒಳಗಿದ್ದ ಮೂರು‌ ಮಕ್ಕಳ ಉಸಿರುಗಟ್ಟಿ ಸಾವು

|

Updated on: Aug 07, 2020 | 6:25 PM

ಆಂಧ್ರಪ್ರದೇಶ: ಖಾಸಗಿ ಕಾರ್ಖಾನೆಯ ಪಾರ್ಕಿಂಗ್​ನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ದಾರುಣ ಘಟನೆ ಸಂಭವಿಸಿದ್ದು, ಖಾಸಗಿ ಕಾರ್ಖಾನೆಯ ಕಂಪನಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳಾದ ಸುಹನಾ ಪರ್ವೀನ್‌, ರಿಂಪ ಯಾಸ್ಮೀನ್, ಹಸೀನಾ ಮೃತ ದುರ್ದೈವಿಗಳಾಗಿದ್ದಾರೆ. ಮೃತ ಮಕ್ಕಳೆಲ್ಲರೂ 6ರಿಂದ 7 ವರ್ಷದ ಒಳಗಿನವರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾರ್ಕಿಂಗ್​ನಲ್ಲಿ ಆಟವಾಡುತ್ತಿದ್ದ ಮಕ್ಕಳು ಅದ್ಹೆಗೋ ಕಾರಿನ ಒಳಗಡೆ ಸೇರಿಕೊಂಡಿದ್ದಾರೆ. ಆ […]

ಕಾರಿನ ಆಟೋಮ್ಯಾಟಿಕ್ ಡೋರ್ ಲಾಕ್, ಒಳಗಿದ್ದ ಮೂರು‌ ಮಕ್ಕಳ ಉಸಿರುಗಟ್ಟಿ ಸಾವು
Follow us on

ಆಂಧ್ರಪ್ರದೇಶ: ಖಾಸಗಿ ಕಾರ್ಖಾನೆಯ ಪಾರ್ಕಿಂಗ್​ನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ದಾರುಣ ಘಟನೆ ಸಂಭವಿಸಿದ್ದು, ಖಾಸಗಿ ಕಾರ್ಖಾನೆಯ ಕಂಪನಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳಾದ ಸುಹನಾ ಪರ್ವೀನ್‌, ರಿಂಪ ಯಾಸ್ಮೀನ್, ಹಸೀನಾ ಮೃತ ದುರ್ದೈವಿಗಳಾಗಿದ್ದಾರೆ. ಮೃತ ಮಕ್ಕಳೆಲ್ಲರೂ 6ರಿಂದ 7 ವರ್ಷದ ಒಳಗಿನವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಾರ್ಕಿಂಗ್​ನಲ್ಲಿ ಆಟವಾಡುತ್ತಿದ್ದ ಮಕ್ಕಳು ಅದ್ಹೆಗೋ ಕಾರಿನ ಒಳಗಡೆ ಸೇರಿಕೊಂಡಿದ್ದಾರೆ. ಆ ಸಮಯದಲ್ಲಿ ಕಾರಿನ ಆಟೋಮ್ಯಾಟಿಕ್ ಡೋರ್ ಲಾಕ್ ಆಗಿದ್ದು ಮಕ್ಕಳು ಕಾರಿನ ಒಳಗಡೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ  ಎನ್ನಲಾಗಿದೆ. ಈ ಬಗ್ಗೆ ಬಾಪುಲವಾಡ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.