ಮುಂಬೈ: ಮುಂಬೈ (Mumbai)ಸಮೀಪದ ಕಲ್ಯಾಣ್‌ನ (Kalyan)ವಸತಿ ಪ್ರದೇಶದಲ್ಲಿ ಗುರುವಾರ ಚಿರತೆಯೊಂದು ದಾಳಿ ನಡೆಸಿದ್ದು, ಮೂವರು ಗಾಯಗೊಂಡಿದ್ದಾರೆ. ಕಟ್ಟಡದ ಕಿಟಕಿಗೆ ಜಿಗಿದ ಚಿರತೆ (Leopard) ನೋಡಿ ಜನರು ಭಯಭೀತರಾಗಿದ್ದಾರೆ.ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ.ನಾನು ಮೊದಲ ಮಹಡಿಯಲ್ಲಿ ಚಿರತೆಯನ್ನು ನೋಡಿದೆ. ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಎಚ್ಚರಿಕೆಯನ್ನು ಲೆಕ್ಕಿಸದೆ ವ್ಯಕ್ತಿಯೊಬ್ಬರು ಕಟ್ಟಡದ ಒಳಗೆ ಹೋದರು ಆಗ ಚಿರತೆ ದಾಳಿ ಮಾಡಿದೆ. ನಮ್ಮಲ್ಲಿ ಕೆಲವರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಅದನ್ನು ಹೆದರಿಸಿದರು” ಎಂದು ಸ್ಥಳೀಯರು ಹೇಳಿದರು. ವಿಡಿಯೊವೊಂದರಲ್ಲಿ ಚಿರತೆಯಿಂದ ದಾಳಿಗೊಳಗಾದ ವ್ಯಕ್ತಿಯ ತಲೆ ಮತ್ತು ತೋಳಿಗೆ ಬ್ಯಾಂಡೆಜ್ ಸುತ್ತಿರುವುದು ಕಾಣಿಸುತ್ತದೆ.
An incident of a leopard entering the Anugrah Tower in the Kolsewadi area of Kalyan has been reported. Staff from the Forest department & police have rushed to the spot. (1/2) pic.twitter.com/p0MLEDk8ZQ
— Mumbai Live (@MumbaiLiveNews) November 24, 2022
ನಿನ್ನೆ ಮಹಾರಾಷ್ಟ್ರದ ನಾಸಿಕ್‌ನ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಮಧ್ಯರಾತ್ರಿಯ ನಂತರ ಅದನ್ನು ಸೆರೆಹಿಡಿದು, ಪಂಜರದಲ್ಲಿ ಇಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊವೈ ಪ್ರದೇಶದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಿ) ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡ ಮೂರು ದಿನಗಳ ನಂತರ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆಗೆ ಕರೆ ಬಂದಿದ್ದು ಸ್ಥಳಕ್ಕೆ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಚಿರತೆಗಳು ಸಾಮಾನ್ಯವಾಗಿ ರಾತ್ರಿ ಸಂಚರಿಸುತ್ತದೆ. ಹಗಲಿನಲ್ಲಿ ಕಾಣುವುದು ಅಪರೂಪ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, IIT-B ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ದಿನದಲ್ಲಿಯೂ ಸಹ ದೃಶ್ಯಗಳು ಕಂಡುಬರುವ ಸಾಧ್ಯತೆಗಳಿವೆ. ಇದಲ್ಲದೆ, ಕಳೆದ 48 ಗಂಟೆಗಳಲ್ಲಿ ತಾಪಮಾನದ ಕುಸಿತವಿರುವಾಗ, ಚಿರತೆಗಳು ಹಗಲಿನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಬುಧವಾರ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಜನನಿಬಿಡ ಪ್ರದೇಶದಿಂದ ಚಿರತೆ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ ಅದನ್ನು ರಕ್ಷಿಸಲಾಗಿದೆ. ಇದು ಮಂಗಳವಾರ ರಾತ್ರಿ 9.30 ರ ಸುಮಾರಿಗೆ ವಡಾಲಾ ರಸ್ತೆ ಪ್ರದೇಶದ ಆಯೇಶಾ ನಗರ ಪ್ರದೇಶವನ್ನು ಪ್ರವೇಶಿಸಿತ್ತು.
Published On - 3:09 pm, Thu, 24 November 22